ಕೊರೋನಾ ಲಸಿಕೆ: ಮೈಸೂರಿನಲ್ಲಿ 30 ಸಾವಿರ ಕೊರೋನಾ ವಾರಿಯರ್ಸ್ ಗೆ ಆದ್ಯತೆ

ವೈದ್ಯರು, ನರ್ಸ್,ಹಾಗೂ ಆರೋಗ್ಯ ಕಾರ್ಯಕರ್ತರು ಮತ್ತು ಲ್ಯಾಬ್ ಟೆಕ್ನಿಷಿಯನ್ ಗಳು ಸೇರಿದಂತೆ ಒಟ್ಟು 30 ಸಾವಿರ ಕೊರೋನಾ ವಾರಿಯರ್ಸ್ ಮೈಸೂರಿನಲ್ಲಿ ಲಸಿಕೆ ಹಾಕಿಸಿಕೊಳ್ಳಲಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ವೈದ್ಯರು, ನರ್ಸ್,ಹಾಗೂ ಆರೋಗ್ಯ ಕಾರ್ಯಕರ್ತರು ಮತ್ತು ಲ್ಯಾಬ್ ಟೆಕ್ನಿಷಿಯನ್ ಗಳು ಸೇರಿದಂತೆ ಒಟ್ಟು 30 ಸಾವಿರ ಕೊರೋನಾ ವಾರಿಯರ್ಸ್ ಮೈಸೂರಿನಲ್ಲಿ ಲಸಿಕೆ ಹಾಕಿಸಿಕೊಳ್ಳಲಿದ್ದಾರೆ.

ಮಹಾಮಾರಿ ಕೊರೋನಾ ಸೋಂಕಿಗೆ ಲಸಿಕೆ ಸಿದ್ದಪಡಿಸುತ್ತಿದ್ದು, ಮೈಸೂರಿನ ಕೊರೋನಾ ವಾರಿಯರ್ಸ್ ಗಳ ಪಟ್ಟಿ ಸಿದ್ಧಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ವರ್ಷ ಜನವರಿಯಲ್ಲಿ ಲಸಿಕೆ ಸಿದ್ದವಾಗುವ ಸಾಧ್ಯತೆಯಿದ್ದು, ಜಿಲ್ಲೆಯ ಪ್ರತಿ ವ್ಯಕ್ತಿಗೂ ಲಸಿಕೆ ನೀಡಲಾಗುವುದು, ಜಿಲ್ಲೆಯಲ್ಲಿರುವ ಕೊರೋನಾ ವಾರಿಯರ್ಸ್ ಗಳ ಪಟ್ಟಿ ಮಾಡುವಂತೆ ಸರ್ಕಾರ ಆರೋಗ್ಯ ಇಲಾಖೆಗೆ ಸೂಚಿಸಿದ್ದು, ಅದರಂತೆ ಕೆಲಸ ಮಾಡಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಪಟ್ಟಿಯಲ್ಲಿ ಜಿಲ್ಲೆಯ 175 ಸರ್ಕಾರಿ ಸಂಸ್ಥೆಗಳಿಂದ 15,010 ಕೋವಿಡ್ ವಾರಿಯರ್ಸ್ ಮತ್ತು ಜಿಲ್ಲೆಯ 1,507 ಖಾಸಗಿ ಆಸ್ಪತ್ರೆಗಳು 15,000 ವೈದ್ಯಕೀಯ ವೃತ್ತಿಪರರು ಮತ್ತು ಆರೋಗ್ಯ ಕಾರ್ಯಕರ್ತರು ಇದ್ದಾರೆ ಎಂದು ಅವರು ಹೇಳಿದರು.

ಕೊರೋನಾ ವಾರಿಯರ್ಸ್ ಗಳ ಪಟ್ಟಿಯನ್ನು ಇನ್ನೂ ಕೆಲವು ಖಾಸಗಿ ಆಸ್ಪತ್ರೆಗಳು ಸಲ್ಲಿಸಿಲ್ಲ,  ಹಾಗಾಗಿ ಪಟ್ಟಿ ರವಾನಿಸಲು ಇನ್ನೂ ಕೆಲ ಸಮಯ ಬೇಕಾಗಲಿದೆ, ಸರಿಸುಮಾರು 30 ಸಾವಿರ ಕೊರೋನಾ ವಾರಿಯರ್ಸ್ ಇರುವುದಾಗಿ ತಿಳಿಸಿದ್ದಾರೆ.

ಏಳು ತಿಂಗಳಿಗಿಂತ ಹೆಚ್ಚು ಕಾಲ ವೈರಸ್ ವಿರುದ್ಧ ಹೋರಾಡುವ ಮುಂಚೂಣಿಯಲ್ಲಿ ದಣಿವರಿಯಿಲ್ಲದೆ ಕೆಲಸ ಮಾಡುತ್ತಿರುವ ಜಿಲ್ಲೆಯ ಎಲ್ಲಾ ವೈದ್ಯರು, ದಾದಿಯರು, ಲ್ಯಾಬ್ ತಂತ್ರಜ್ಞರು, ಸಹಾಯ ಸಿಬ್ಬಂದಿ, ಆಶಾ ಕಾರ್ಮಿಕರು ಮತ್ತು ಚಾಲಕರು ಈ ಪಟ್ಟಿಯಲ್ಲಿದ್ದಾರೆ. ಮುಂದಿನ ಎರಡು ಮೂರು ದಿನಗಳಲ್ಲಿ ಪಟ್ಟಿ ರವಾನಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ ಅಮರನಾಥ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com