ನಿಮ್ಮ ಹಿತ್ತಲಿನಲ್ಲಿ ಪೌಷ್ಟಿಕ ಹಣ್ಣು-ತರಕಾರಿ ಬೆಳೆಯಿರಿ': ರಾಜ್ಯ ಸರ್ಕಾರದಿಂದ ಹಣ ಪಡೆಯಿರಿ

 ನಿಮ್ಮ ಹಿತ್ತಲಿನಲ್ಲಿರುವ ಜಾಗ ಬಳಸಿಕೊಂಡು ಅಗತ್ಯವಿರುವ ಪೌಷ್ಟಿಕಯುತ ಆಹಾರ ಬೆಳೆದುಕೊಳ್ಳಿ, ಅದಕ್ಕಾಗಿ ಸರ್ಕಾರ ಹಣ ಪಾವತಿಸುತ್ತದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಿಮ್ಮ ಹಿತ್ತಲಿನಲ್ಲಿರುವ ಜಾಗ ಬಳಸಿಕೊಂಡು ಅಗತ್ಯವಿರುವ ಪೌಷ್ಟಿಕಯುತ ಆಹಾರ ಬೆಳೆದುಕೊಳ್ಳಿ, ಅದಕ್ಕಾಗಿ ಸರ್ಕಾರ ಹಣ ಪಾವತಿಸುತ್ತದೆ.

ನ್ಯೂಟ್ರಿಷನ್ ಗಾರ್ಡನ್ ಅಭಿಯಾನಕ್ಕೆ ಮುಂದಾಗಿರುವ ಸರ್ಕಾರ ಎಲ್ಲಾ ಜನರು ತಮಗೆ ಬೇಕಾದ ಆಹಾರವನ್ನು ಬೆಳೆದು ತಿನ್ನುವಂತೆ ಉತ್ತೇಜಿಸಲು ಮುಂದಾಗಿದೆ, 

ಹಳ್ಳಿಗಳಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಬೆಳೆದು ತಮ್ಮ ಮನೆಗೂ ಬಳಸಿಕೊಂಡು ಹೆಚ್ಚುವರಿ ಆದಾಯದ ಮೂಲವಾಗಿಯೂ ಇರುತ್ತದೆ.   ಪ್ರತಿ ಕುಟುಂಬಕ್ಕೆ ಸರ್ಕಾರ 2,600 ರು ಹಣ ಪಾವತಿಸುತ್ತದೆ. ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆ ಸುಮಾರು 6 ಸಾವಿರ ಕುಟುಂಬಗಳನ್ನು ಈ ಯೋಜನೆಯಡಿ ತರಲು ನಿರ್ಧರಿಸಿದೆ.

ಇಲಾಖೆವತಿಯಿಂದ ನುಗ್ಗೇಕಾಯಿ, ಪಪ್ಪಾಯ, ಸೀಬೆಹಣ್ಣು, ಹಲಸಿನಹಣ್ಣು, ಮಾವಿನ ಹಣ್ಣು, ಸಪೋಟ, ನಿಂಬೆಹಣ್ಣು, ಕರಿ ಬೇವು ಮುಂತಾದ ಬೀಜಗಳನ್ನು ನೀಡುತ್ತದೆ, ಜಾಗ ಇರುವವರು ತಮಗೆ ಬೇಕಾದ ಬೀಜಗಳನ್ನು ತೆಗೆದುಕೊಂಡು ಪಂಚಾಯಿತಿಯಿಂದ ತೆಗೆದುಕೊಂಡು ಬೆಳೆಸಬಹುದಾಗಿದೆ, ರಾಜ್ಯದಲ್ಲಿ ಸುಮಾರು 6,027 ಗ್ರಾಮ ಪಂಚಾಯಿತಿಗಳಿದ್ದು, ಪ್ರತಿ ಪಂಚಾಯಿತಿಯಲ್ಲಿ 10 ಕುಟುಂಬಗಳನ್ನು ಆಯ್ಕೆ ಮಾಡಲಾಗುತ್ತದೆ.  ಈಗಾಗಲೇ ಈ ಅಭಿಯಾನ ಆರಂಭವಾಗಿದ್ದು, ನವೆಂಬರ್ ಅಂತ್ಯದೊಳಗೆ ಮುಗಿಯಲಿದೆ,

ಹಳ್ಳಿಗಳಲ್ಲಿ ಪೌಷ್ಟಿಕಯುತ ಹಣ್ಣು ಮತ್ತು ತರಕಾರಿಗಳನ್ನು ಬೆಳೆಸುವಂತೆ ಪ್ರೋತ್ಸಾಹಿಸಲು ಹಾಗೂ ಕುಟುಂಬಕ್ಕೆ ಹೆಚ್ಚುವರಿ ವರಮಾನ ತಂದುಕೊಡುವಲ್ಲಿ ಈ ಅಭಿಯಾನ ಸಹಾಯ ಮಾಡುತ್ತದೆ., ಜಾರ್ಖಂಡ್ ನಲ್ಲಿ ಈಗಾಗಲೇ ಈ ಪ್ರಯೋಗ ಮಾಡಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಎಲ್ ಕೆ ಅತೀಕ್ ತಿಳಿಸಿದ್ದಾರೆ.

ಬಾಗಲಕೋಟೆ  (1,980), ಬೆಳಗಾವಿ (5,060), ಧಾರವಾಡ (1,440), ಹಾವೇರಿ (2,240), ಉತ್ತರ ಕನ್ನಡ (2,310), ಶಿವಮೊಗ್ಗ (2,710), ಬೆಂಗಳೂರು ಗ್ರಾಮೀಣ (1,050), ರಾಮನಗರ (1,270), ಕೋಲಾರ (1,560), ಬೆಂಗಳೂರು ನಗರ (960) ), ತುಮಕೂರು (3,310), ಬಳ್ಳಾರಿ (2,370), ಕಲ್ಬುರ್ಗಿ (2,640), ದಕ್ಷಿಣ ಕನ್ನಡ (2,300), ಹಾಸನ (2,670),
ಕೊಡಗು (1,040), ಮಂಡ್ಯ (2,340), ಮೈಸೂರು (2,660) ಕುಟುಂಬಗಳು ಈ ಅಭಿಯಾನದ ಪ್ರಯೋಜನ ಪಡೆಯಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com