ರಾಜ್ಯದ ಕಾಸರಗೋಡು, ಪಡುಬಿದ್ರಿ ಬೀಚ್ ಗೆ ಅಂತರಾಷ್ಟ್ರೀಯ 'ಬ್ಲೂ ಫ್ಲಾಗ್' ಪ್ರಮಾಣಪತ್ರ 

ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಕಾಸರಗೋಡು ಹಾಗೂ ಉಡುಪಿಯ ಪಡುಬಿದ್ರೆಯ ಕಡಲ ತೀರಗಳು (ಬೀಚ್) ಪ್ರತಿಷ್ಠಿತ ಅಂತರಾಷ್ಟ್ರೀಯ ಬ್ಲೂ ಫ್ಲಾಗ್ ಮಾನ್ಯತೆ ಪಡೆದಿವೆ. 
ಕಾಸರಗೋಡು ಬೀಚ್
ಕಾಸರಗೋಡು ಬೀಚ್

ಕಾರವಾರ/ಉಡುಪಿ: ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಕಾಸರಗೋಡು ಹಾಗೂ ಉಡುಪಿಯ ಪಡುಬಿದ್ರೆಯ ಕಡಲ ತೀರಗಳು (ಬೀಚ್) ಪ್ರತಿಷ್ಠಿತ ಅಂತರಾಷ್ಟ್ರೀಯ ಬ್ಲೂ ಫ್ಲಾಗ್ ಮಾನ್ಯತೆ ಪಡೆದಿವೆ. 

ಕಾಸರಕೋಡಿನಲ್ಲಿರುವ ಇಕೋ ಬೀಚ್ ಹಾಗೂ ಪಡುಬಿದ್ರಿಯ ಬೀಚ್ ಗಳು  ತನ್ನ ಮೊದಲ ಪ್ರಯತ್ನದಲ್ಲೇ ಅಂತರಾಷ್ಟ್ರೀಯ ಮಾನ್ಯತೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಈ ಎರಡೂ ಬೀಚ್ ಗಳಲ್ಲಿ ಪ್ರವಾಸಿಗರು ಕುಳಿತುಕೊಳ್ಳುವ ಆಸನಗಳಿಂಡ ಹಿಡಿದು ಕುಡಿಯುವ ನೀರು, ಮಕ್ಕಳ ಆಟಿಕೆಗಳು, ಜೀವರಕ್ಷಕ ಸಿಬ್ಬಂದಿ ಹಾಗೂ ಮುಖ್ಯವಾಗಿ ಕಡಲತೀರದ ಸ್ವಚ್ಛತೆ ಸೇರಿ ಎಲ್ಲವೂ ಅಚ್ಚುಕಟ್ಟಾಗಿದೆ.

ಇನ್ನು ದೇಶದಲ್ಲಿ ಒಟ್ಟಾರೆ ಹನ್ನೆರಡು ಕಡಲ ತೀರಗಳು ಬ್ಲೂ ಫ್ಲಾಗ್ ಮಾನ್ಯತೆ ಪಡೆದಿದ್ದು ಕರ್ನಾಟಕ ಹೊರತುಪಡಿಸಿ ಕೇರಳದ ಕಪ್ಪಾಡ್, ಆಂಧ್ರಪ್ರದೇಶದ ಋಷಿಕೊಂಡ, ಒಡಿಶಾದ ಗೋಲ್ಡನ್, ಮತ್ತು ಅಂಡಮಾನ್‌ ದ್ವೀಪದ ರಾಧಾನಗರ, ಗುಜರಾತ್‌ನ ಶಿವರಾಜಪುರ, ಡಿಯುನ ಘೋಗ್ಲಾ,ಬೀಚ್ ಗಳಿಗೆ ಈ ಗೌರವ ದೊರಕಿದೆ.

ಬ್ಲೂ ಫ್ಲಾಗ್ ಎಂದರೇನು?

ಕಡಲ ತೀರ (ಬೀಚ್) ಗಳಲ್ಲಿನ ಸ್ವಚ್ಚತೆ, ಪರಿಸರ ಸ್ನೇಹಿ ವಾತಾವರಣ ಮತ್ತಿತರೆ ಅಂಶಗಳನ್ನು ಪರಿಗಣಿಸಿ ಪರಿಸರ ಶಿಕ್ಷಣಕ್ಕಾಗಿ ವೇದಿಕೆ’ (ಎಫ್.ಇ.ಇ) ಈ ಬ್ಲೂ ಫ್ಲಾಗ್ ಪ್ರಮಾಣ ಪತ್ರ ನೀಡುತ್ತದೆ. ಇಂತಹಾ ಪ್ರಮಾಣಪತ್ರ ಪಡೆದ ಬೀಚ್ ಗಳಲ್ಲಿ ನೀಲಿ ಬಣ್ಣದ ಧ್ವಜವನ್ನು ಆರೋಹಣ ಮಾಡಲಾಗುವುದು.  ವಿದೇಶಗಳಲ್ಲಿ ಇಂತಹಾ ಪ್ರಮಾಣಪತ್ರ ಪಡೆದ ಬೀಚ್ ಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹಾಗಾಗಿ ಭಾರತೀಯ ಪ್ರವಾಸೋದ್ಯಮ ಅಭಿವೃದ್ದಿ ದೃಷ್ಟಿಯಿಂದ ಇಂತಹಾ ಪ್ರಮಾಣಪತ್ರ ಪಡೆಯುವುದು ಅತ್ಯಂತ ಪ್ರಮುಖವಾಗಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com