ಮಂಗಳೂರು: ನಕಲಿ ನೋಟುಗಳ ಚಲಾವಣೆ ನಡೆಸಿದ್ದ ನಾಲ್ವರ ಬಂಧನ

ನಕಲಿ ನೋಟು  ಚಲಾವಣೆಯಲ್ಲಿ ತೊಡಗಿದ್ದ ನಾಲ್ವರನ್ನು ಮಂಗಳವಾರ ಉಲ್ಲಾಳದಲ್ಲಿ ಬಂಧಿಸಲಾಗಿದ್ದು, ಅವರಿಂದ 2.4 ಲಕ್ಷ ರೂ. ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.

Published: 13th October 2020 12:24 PM  |   Last Updated: 13th October 2020 01:16 PM   |  A+A-


Posted By : Raghavendra Adiga
Source : Online Desk

ಮಂಗಳೂರು: ನಕಲಿ ನೋಟು  ಚಲಾವಣೆಯಲ್ಲಿ ತೊಡಗಿದ್ದ ನಾಲ್ವರನ್ನು ಮಂಗಳವಾರ ಉಲ್ಲಾಳದಲ್ಲಿ ಬಂಧಿಸಲಾಗಿದ್ದು, ಅವರಿಂದ 2.4 ಲಕ್ಷ ರೂ. ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತರನ್ನು ಹರಿಸ್, ಮೊಹಮ್ಮದ್ ಜಮಾನ್, ಫೈಸಲ್ ಖಾನ್ ಮತ್ತು ಸೈಯದ್ ಹಕೀಬ್ ಎಂದು ಗುರ್ತಿಸಲಾಗಿದ್ದು ಇನೊಬ್ಬನ ಹೆಸರು ಬಹಿರಂಗವಾಗಿಲ್ಲ.

ನೈಟ್ ಬೀಟ್ ಪೋಲೀಸರು ತಪಾಸಣೆ ನಡೆಸಿದಾಗ ಬೀಚ್ ಸಮೀಪ ನಾಲ್ವರು ಕಾರಿನೊಳಗೆ ಕುಳಿತಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೂಡಲೇ ಇಬ್ಬರು ಕತ್ತಲಲ್ಲಿ ತಪ್ಪಿಸಿಕೊಂಡಿದ್ದಾರೆ. ಇದು ಪೋಲೀಸರಿಗೆ ಇನ್ನಷ್ಟು ಅನುಮಾನಕ್ಕೆ ಅವಕಾಶ ನೀಡಿದೆ.

ಕಾರನ್ನು ಪರಿಶೀಲಿಸಿ ವಿಚಾರಣೆ ನಡೆಸಿದಾಗ  ಕಾರಿನಲ್ಲಿದ್ದ ನಾಲ್ವರು ನಕಲಿ ಕರೆನ್ಸಿ ನೋಟುಗಳನ್ನು ವಿತರಿಸಲು ಪ್ರಯತ್ನಿಸುತ್ತಿರುವುದಾಗಿ ಒಪ್ಪಿಕೊಂಡರು.

ಬಂಧಿತರಿಂದ ಕಾರು, ಐದು ಮೊಬೈಲ್ ಫೋನ್ ಮತ್ತು ಸುಮಾರು 2.4 ಲಕ್ಷ ರೂಪಾಯಿ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.

Stay up to date on all the latest ರಾಜ್ಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp