ಲಾಕ್‌ಡೌನ್ ನಂತರ ತನ್ನ ನುರಿತ ತಂತ್ರಜ್ಞರನ್ನು ವಾಪಸ್ ಕರೆತರಲು ವಿಮಾನ ಟಿಕೆಟ್ ಬುಕ್ ಮಾಡಿದ ಹುಬ್ಬಳ್ಳಿ ಉದ್ಯಮಿ!

ತನ್ನ ಚರ್ಮದ ಕಾರ್ಖಾನೆಯನ್ನು ಪ್ರಾರಂಭಿಸುವ ಸಲುವಾಗಿ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನ ತಂತ್ರಜ್ಞರನ್ನು ಮರಳಿ ಕರೆತರಲು ಹುಬ್ಬಳ್ಳಿಯ ಉದ್ಯಮಿಯೊಬ್ಬರು ವಿಮಾನ ಟಿಕೆಟ್ ನೀಡಿದ್ದಾರೆ.
ಕೆಲಸಗಾರರು
ಕೆಲಸಗಾರರು

ಹುಬ್ಬಳ್ಳಿ: ತನ್ನ ಚರ್ಮದ ಕಾರ್ಖಾನೆಯನ್ನು ಪ್ರಾರಂಭಿಸುವ ಸಲುವಾಗಿ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನ ತಂತ್ರಜ್ಞರನ್ನು ಮರಳಿ ಕರೆತರಲು ಹುಬ್ಬಳ್ಳಿಯ ಉದ್ಯಮಿಯೊಬ್ಬರು ವಿಮಾನ ಟಿಕೆಟ್ ನೀಡಿದ್ದಾರೆ.

ಹುಬ್ಬಳ್ಳಿಯ ಗಮನಗಟ್ಟಿ ಮತ್ತು ತಾರಿಹಾಲ್ ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಖಾನೆಯನ್ನು ಪ್ರಾರಂಭಿಸಲು ಚಂದ್ರಕಾಂತ್ ಗಡಿಕರ್ ಸುಮಾರು 1 ಕೋಟಿ ರೂ. ವ್ಯಯಿಸಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ನಿರ್ಮಾಣ ಕಾರ್ಯ ಮತ್ತು ಯಂತ್ರೋಪಕರಣಗಳ ಅಳವಡಿಕೆ ಕಾರ್ಯಗಳು ಪೂರ್ಣಗೊಂಡವು ಆದರೆ ಒಂದು ತಿಂಗಳ ನಂತರ ಕಂಪನಿಯು ಲಾಕ್‌ಡೌನ್ ನಂತರ ಕಾರ್ಯಾಚರಣೆಯನ್ನು ನಿಲ್ಲಿಸಬೇಕಾಯಿತು.

ಲಾಕ್‌ಡೌನ್ ಸಡಿಲಗೊಂಡ ನಂತರ, ಗಡಿಕರ್ ಅವರು ಕಾರ್ಯಾಚರಣೆಯನ್ನು ಪುನರಾರಂಭಿಸಲು ಬಯಸಿದ್ದರು. ಹೀಗಾಗಿ ತವರು ಕ್ಷೇತ್ರಗಳಿಗೆ ತೆರಳಿದ್ದ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಮೂಲದ ತಂತ್ರಜ್ಞರ ಪೈಕಿ ಐವರಿಗೆ ಹುಬ್ಬಳ್ಳಿಗೆ ಬರಲು ವಿಮಾನ ಟಿಕೆಟ್ ನೀಡಲು ನಿರ್ಧರಿಸಿದರು. ಅದರಂತೆ ಈ ವಾರ ಮೂವರು ಕೋಲ್ಕತ್ತಾದಿಂದ ಬೆಂಗಳೂರಿಗೆ ಬಂದಿಳಿಯಲಿದ್ದಾರೆ. ಇಬ್ಬರು ಮುಂದಿನ ವಾರ ಚೆನ್ನೈನಿಂದ ಹುಬ್ಬಳ್ಳಿಗೆ ಹಾರಲಿದ್ದಾರೆ.

ರಫ್ತು ಗುಣಮಟ್ಟದ ಉತ್ಪನ್ನಗಳಾದ ಜಾಕೆಟ್‌ಗಳು, ಚೀಲಗಳು, ತೊಗಲಿನ ಚೀಲಗಳು, ಕೈಗವಸುಗಳು, ಪಾದರಕ್ಷೆಗಳು ಮತ್ತು ಇತರ ಚರ್ಮದ ಉತ್ಪನ್ನಗಳನ್ನು ತಯಾರಿಸಲು ಚರ್ಮದ ಕಾರ್ಖಾನೆಯನ್ನು ಪ್ರಾರಂಭಿಸಿದ್ದೇನೆ ಎಂದು ಗಡಿಕರ್ ಹೇಳಿದರು.

"ನಾನು ಕಾರ್ಖಾನೆಯಲ್ಲಿ 30 ಜನರನ್ನು ಹೊಂದಿದ್ದೇನೆ. ಚರ್ಮದ ಸಂಬಂಧಿತ ಯಂತ್ರೋಪಕರಣಗಳನ್ನು ನಿರ್ವಹಿಸಲು ಸ್ಥಳೀಯ ತಂತ್ರಜ್ಞರು ಇಲ್ಲ. ಆದ್ದರಿಂದ ನಾನು ಇತರ ರಾಜ್ಯಗಳಿಂದ ಐದು ತಂತ್ರಜ್ಞರನ್ನು ನೇಮಿಸಿಕೊಂಡಿದ್ದೇ. ಅವರು ಕೆಲಸಕ್ಕೆ ಮರಳಿದ ನಂತರ, ತುರ್ತು ಸಂದರ್ಭಗಳಲ್ಲಿ ನಮಗೆ ಸಹಾಯ ಮಾಡುವ ಯಂತ್ರೋಪಕರಣಗಳನ್ನು ನಿರ್ವಹಿಸಲು ಸ್ಥಳೀಯರಿಗೆ ತರಬೇತಿ ನೀಡುತ್ತೇವೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com