ಪ್ರಧಾನಿ ನರೇಂದ್ರ ಮೋದಿ ಭಾಷಣದ ನಂತರ ಮುಧೋಳ ನಾಯಿಗೆ ಹೆಚ್ಚಿದ ಬೇಡಿಕೆ!

ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮುಧೋಳ ನಾಯಿ ಸೇರಿದಂತೆ ದೇಶೀಯ ತಳಿಗಳನ್ನು ಹೊಗಳಿದ ನಂತರ ಈ ತಳಿಯ ನಾಯಿಗಳಿಗೆ ಬೇಡಿಕೆ ಹೆಚ್ಚಿದೆ.
ಮುಧೋಳ ನಾಯಿ
ಮುಧೋಳ ನಾಯಿ

ಬಾಗಲಕೋಟೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮುಧೋಳ ನಾಯಿ ಸೇರಿದಂತೆ ದೇಶೀಯ ತಳಿಗಳನ್ನು ಹೊಗಳಿದ ನಂತರ ಈ ತಳಿಯ ನಾಯಿಗಳಿಗೆ ಬೇಡಿಕೆ ಹೆಚ್ಚಿದೆ.

ಅರೆ ಸೇನಾಪಡೆ, ಅರಣ್ಯ ಮತ್ತು ಇತರೆ ಇಲಾಖೆಗಳು ಮುಧೋಳ ನಾಯಿಗಳನ್ನು ತೆಗೆದುಕೊಳ್ಳಲು ಮುಂದೆ ಬಂದಿದ್ದಾರೆ ಎಂದು ಬಾಗಲಕೋಟೆಯ ತಿಮ್ಮಾಪುರದಲ್ಲಿರುವ ಪಶು ಸಂಶೋಧನಾ ಕೇಂದ್ರವು ಬಿಎಸ್ ಎಫ್ ಮತ್ತು ಬಂಡಿಪುರ ಹುಲಿ ಸಂರಕ್ಷಣಾ ಕೇಂದ್ರಕ್ಕೆ ನಾಲ್ಕು ನಾಯಿ ಮರಿಗಳನ್ನು ನೀಡಿದೆ.

ಬಿಎಸ್ ಎಫ್ ಮತ್ತು ಅರಣ್ಯ ಇಲಾಖೆಗಳು ನಾಲ್ಕು ನಾಯಿ ಮರಿಗಳಿಗೆ ಬೇಡಿಕೆ ಇಟ್ಟಿದ್ದವು ಎಂದು ಬೀದರ್ ನಲ್ಲಿರುವ ಕರ್ನಾಟಕ ಪಶು ವೈದ್ಯಕೀಯ, ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ ತಿಳಿಸಿದೆ.

ಒಪ್ಪಂದದ ಪ್ರಕಾರ ನಾವು ಎರಡು ಹೆಣ್ಣು ಮತ್ತು ಎರಡು ಗಂಡು ನಾಯಿ ಮರಿಗಳನ್ನು ನೀಡಿದ್ದೇವೆ,ಪ್ರತಿ ಜೋಡಿಗೆ 25 ಸಾವಿರ ರು ಬೆಲೆ ನಿಗದಿ ಪಡಿಸಿದ್ದೇವೆ ಎಂದು ವಿವಿ ಮುಖ್ಯಸ್ಥ ಮಹೇಶ್ ಆಕಾಶಿ ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ ಬಿಎಸ್ ಎಫ್ ಮತ್ತು ಅರಣ್ಯ ಇಲಾಖೆ ಮುಧೋಳ ನಾಯಿಗಳನ್ನು ಸೇರಿಸಿಕೊಂಡಿದೆ,  ಭಾರತೀಯ ಶಸಸ್ತ್ರ ಪಡೆ ಮತ್ತು ಸಿಆರ್ ಪಿಎಫ್ ಮತ್ತು ವಿವಿಧ ರಾಜ್ಯಗಳ ಪೊಲೀಸ್ ಸ್ಕ್ವಾಡ್ ಗಳು ಮುಧೋಳ ನಾಯಿ ತೆಗೆದುಕೊಳ್ಳಲು ಮುಂದಾಗಿವೆ.

ಮುಧೋಳ ನಾಯಿಯು ಉತ್ತಮ ಜೆರ್ಮನ್ ಶೆಫರ್ಡ್ ಆಗಿದ್ದು, ತುಂಬಾ ಆಕ್ರಮಣಕಾರಿಯಾಗಿದ್ದು, ಅಪರಾಧಗಳನ್ನು ಶೀಘ್ರವಾಗಿ ಪತ್ತೆ ಹಚ್ಚುತ್ತದೆ, ನಮ್ಮ ಶ್ವಾನದಳದಲ್ಲಿ ಇದೇ ಮೊದಲ ಬಾರಿಗೆ ನಾವು ಮುಧೋಳ ನಾಯಿಯನ್ನು ಸೇರಿಸಿಕೊಂಡಿದ್ದೇವೆ, ವಿದೇಶಕ್ಕಿಂತ ಸ್ಥಳೀಯ ತಳಿಗಳಿಗೆ ಮನ್ನಣೆ ನೀಡಬೇಕೆಂದು ನಾವು ಬಯಸಿದ್ದೇವೆ ಎಂದು ಬಂಡೀಪುರ ಮೀಸಲು ಅರಣ್ಯದ ನಿರ್ದೇಶಕ ಟಿ ಬಾಲಚಂದ್ರ ತಿಳಿಸಿದ್ದಾರೆ.

ಕರ್ತವ್ಯಕ್ಕೂ ಬಿಡುವ ಮುನ್ನ ಸುಮಾರು 3 ತಿಂಗಳ ಕಾಲ ಈ ನಾಯಿಗಳಿಗೆ ತರಬೇತಿ ನೀಡುತ್ತೇವೆ, ನಂತರ ಅಪರಾಧಿಗಳ ಪತ್ತೆಗೆ ಬಿಡುತ್ತೇವೆ ಎಂದು ಹೇಳಿದ್ದಾರೆ. ಸಂಶೋಧನಾ ಉದ್ದೇಶಕ್ಕಾಗಿ 40 ನಾಯಿಳ ಸಂತಾನೋತ್ಪತ್ತಿ ಮಾಡಲಾಗಿದೆ,

40 ತಳಿಯಲ್ಲಿ 37 ಮುಧೋಳ ನಾಯಿಗಳಿವೆ, ಅದರಲ್ಲಿ 29 ಹೆಣ್ಣು ಮತ್ತು 8 ಗಂಡು ನಾಯಿಗಳು, ಉಳಿದವು ಪಾಶ್ಮಿ ತಳಿಗಳಾಗಿವೆ. ಮನ್ ಕೀ ಬಾತ್ ನಲ್ಲಿ ಪ್ರಧಾನಿಯವರು ಮುಧೋಳ ನಾಯಿಯ ಬಗ್ಗೆ ಉಲ್ಲೇಖಿಸಿದ ನಂತರ , ಪ್ರತಿ ದಿನ ದೇಶ ವಿದೇಶಗಳಿಂದ ನೂರಾರು ಕರೆಗಳು ಬರುತ್ತಿದ್ದು, ನಾಯಿಗಳಿಗೆ ಬೇಡಿಕೆ ಇಟ್ಟಿದ್ದಾರೆ. ನಾವು ವರ್ಷಕ್ಕೆ ಎರಡು ಬಾರಿ ಸಂತಾನೋತ್ಪತ್ತಿ ಕಾರ್ಯ ಮಾಡಲಿದ್ದು ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಮಹೇಶ್ ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com