ಕೆಂಪೇಗೌಡ ಏರ್ ಪೋರ್ಟ್ ಗೆ ಮಹಿಳೆಯರು ಸುರಕ್ಷಿತವಾಗಿ ಪ್ರಯಾಣಿಸಬೇಕೆ: ನಿಮಗಾಗಿ ಸದಾ ಸಿದ್ದವಿದೆ 'ಗೋಪಿಂಕ್' ಸೇವೆ!

ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ಇದು ಸಿಹಿ ಸುದ್ದಿ ಆಗಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಹಿಳಾ ಪ್ರಯಾಣಿಕರಿಗೆ ಇನ್ನೊಬ್ಬರು ಮಹಿಳೆಯೇ ಟ್ಯಾಕ್ಸಿ ಸೇವೆ ಒದಗಿಸುತ್ತಿದ್ದಾರೆ.
ಮಹಿಳಾ ಟ್ಯಾಕ್ಸಿಯಲ್ಲಿ ಪ್ರಯಾಣಿಕರು
ಮಹಿಳಾ ಟ್ಯಾಕ್ಸಿಯಲ್ಲಿ ಪ್ರಯಾಣಿಕರು

ಬೆಂಗಳೂರು: ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ಇದು ಸಿಹಿ ಸುದ್ದಿ ಆಗಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಹಿಳಾ ಪ್ರಯಾಣಿಕರಿಗೆ ಇನ್ನೊಬ್ಬರು ಮಹಿಳೆಯೇ ಟ್ಯಾಕ್ಸಿ ಸೇವೆ ಒದಗಿಸುತ್ತಿದ್ದಾರೆ.

ಈ ಟ್ಯಾಕ್ಸಿ ಸೇವೆಯ ಹೆಸರು ಗೋಪಿಂಕ್ ಎಂದು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಲ್ಲಿ ಇದು ಅತ್ಯಂತ ಪ್ರಖ್ಯಾತ.

ದೇಶಾದ್ಯಂತ ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ 25ರಿಂದ ದೇಶೀಯ ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿತ್ತು. ನಂತರ ವಂದೇ ಭಾರತ್ ಮಿಷನ್ ನಡಿ ಮೇ 25ರಿಂದ ವಿಮಾನಗಳ ಹಾರಾಟ ಆರಂಭವಾಯಿತು. ವಂದೇ ಭಾರತ್ ಮತ್ತು ಏರ್ ಟ್ರಾವಲ್ ಬಬಲ್ ವಿಮಾನಗಳು ಹಾರಾಟ ನಡೆಸಲಾರಂಭಿಸಿದವು.

ಮಹಿಳಾ ಟ್ಯಾಕ್ಸಿ ಸೇವೆ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಗೋಪಿಂಕ್ ಸಹ ಸ್ಥಾಪಕಿ ಅನುರಾಧ ಉದಯ್ ಶಂಕರ್, ನಮ್ಮ ವ್ಯಾಪಾರ ಲಾಕ್ ಡೌನ್ ನಂತರ ಈಗೀಗ ಚೇತರಿಸಿಕೊಳ್ಳುತ್ತಿದೆ. ಕಳೆದ ಎರಡು-ಮೂರು ತಿಂಗಳಿನಿಂದ ನಮ್ಮ ಚಾಲಕರು ಬ್ಯುಸಿಯಾಗಿದ್ದಾರೆ. ನಮ್ಮ ಕ್ಯಾಬ್ ಡ್ರೈವರ್ ಗಳು ದಿನಕ್ಕೆ ನಾಲ್ಕರಿಂದ 5 ಟ್ರಿಪ್ ಹೊಡೆಯುತ್ತಾರೆ. ಅಲ್ಲದೆ ಬೆಂಗಳೂರಿನಿಂದ ಹೊರಗೆ ಪ್ರಯಾಣಿಸಲು ಸಹ ಪ್ರಯಾಣಿಕರು ಕೇಳುತ್ತಾರೆ ಎಂದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟ್ಯಾಕ್ಸಿ ಸೇವೆ ಆರಂಭವಾಗಿದ್ದು 2019ರ ಜನವರಿ 7ರಂದು. ಟ್ಯಾಕ್ಸಿಗೆ ಜಿಪಿಎಸ್, ಪ್ಯಾನಿಕ್ ಬಟನ್, ಮೊಬೈಲ್ ಡಾಟಾ ಟರ್ಮಿನಲ್ ಡಿವೈಸ್, ಪೆಪ್ಪರ್ ಸ್ಪ್ರೇಸ್ ಗಳನ್ನು ಸಹ ಪ್ರಯಾಣಿಕರು ಮತ್ತು ಚಾಲಕರ ಸುರಕ್ಷತೆಗೆ ಅಳವಡಿಸಲಾಗಿದೆ.

ಗೋಪಿಂಕ್ ಟ್ಯಾಕ್ಸಿ ಸೇವೆಯಲ್ಲಿ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಬುಕ್ ಮಾಡಿ ಪ್ರಯಾಣಿಸುತ್ತಾರೆ. ಮೊದಲೇ ಬುಕ್ಕಿಂಗ್ ಜೊತೆಗೆ ಸ್ಪಾಟ್ ಬುಕ್ಕಿಂಗ್ ಗೂ ಸಹ ಅವಕಾಶವಿದೆ. ಹಿಂದೆ ನಾವು 24*7 ಸೇವೆಯನ್ನು ಒದಗಿಸುತ್ತಿದ್ದೆವು.ಈಗ ಮುಂಜಾನೆ 5.30ರಿಂದ ಮಧ್ಯರಾತ್ರಿಯವರೆಗೆ ಇನ್ನು ಕೆಲವು ಸಂದರ್ಭಗಳಲ್ಲಿ ಒಂದು ಗಂಟೆ ಹೆಚ್ಚು ಸೇವೆ ನೀಡುತ್ತೇವೆ ಎಂದು ಹೇಳಿದರು.

ಈ ಕೋವಿಡ್ ಸಮಯದಲ್ಲಿ ಯಾವ ರೀತಿ ಸುರಕ್ಷತೆ ಕೈಗೊಳ್ಳುತ್ತೀರಿ ಎಂದು ಕೇಳಿದಾಗ, ವಾಹನವನ್ನು ಪ್ರತಿ ಟ್ರಿಪ್ ಆದ ನಂತರ ಸ್ಯಾನಿಟೈಸ್ ಮಾಡುತ್ತೇವೆ. ಮಾಸ್ಕ್ ಧರಿಸಿ ಶಾರೀರಿಕ ಅಂತರ ಕಾಯ್ದುಕೊಳ್ಳುತ್ತೇವೆ. ಇದುವರೆಗೆ ನಮ್ಮ ಯಾವುದೇ ಚಾಲಕರಿಗೆ ಕೊರೋನಾ ಸೋಂಕು ತಗುಲಿಲ್ಲ. ಮೊದಲ ಬಾರಿ ರಾಷ್ಟ್ರಮಟ್ಟದಲ್ಲಿ ಲಾಕ್ ಡೌನ್ ಹೊರತುಪಡಿಸಿ ಇತ್ತೀಚೆಗೆ ಪ್ರತಿದಿನ ಸೇವೆ ಒದಗಿಸುತ್ತೇವೆ ಎಂದು ಅನುರಾಧ ಉದಯ್ ಶಂಕರ್ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com