ದ್ವಿಚಕ್ರ ವಾಹನ ಕಳ್ಳರ ಬಂಧನ: 10 ಲಕ್ಷ ರೂ. ಮೌಲ್ಯದ 19 ವಾಹನ ವಶ
ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಮಹಾಲಕ್ಷ್ಮೀಲೇಔಟ್ ಪೊಲೀಸರು 10 ಲಕ್ಷ ರೂ. ಮೌಲ್ಯದ 19 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
Published: 28th October 2020 12:04 PM | Last Updated: 28th October 2020 01:31 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಮಹಾಲಕ್ಷ್ಮೀಲೇಔಟ್ ಪೊಲೀಸರು 10 ಲಕ್ಷ ರೂ. ಮೌಲ್ಯದ 19 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ನಿವಾಸಿ ಬೆಂಗಳೂರಿನ ಕಮಲಾ ನಗರ ಮಾರ್ಕೆಟ್ ನಲ್ಲಿ ವಾಸಿಸುತ್ತಿದ್ದ ವಿಜಯ ಅಲಿಯಾಸ್ ಬೊಂಡಿ(22), ತಮಿಳುನಾಡಿನ ಚಂಗಲ್ ಪಟ್ಟ್ ಜಿಲ್ಲೆಯ ನಿವಾಸಿ, ಬೆಂಗಳೂರಿನ ಲಗ್ಗೆರೆಯಲ್ಲಿ ವಾಸವಾಗಿದ್ದ ಕಾರ್ತಿಕ್ (19), ತಮಿಳುನಾಡಿನ ಸೇಲಂ ಜಿಲ್ಲೆಯ ನಿವಾಸಿ ಬೆಂಗಳೂರಿನ ಕಾಮಾಕ್ಷಿಪಾಳ್ಯ ವೃಷಭಾವತಿ ನಗರ ನಿವಾಸಿ ಗಣೇಶ್ ಅಲಿಯಾಸ್ ಚಾರ್ಲಿ (24) ಬಂಧಿತ ಆರೋಪಿಗಳು.
ಮಹಾಲಕ್ಷ್ಮೀಲೇಔಟ್ ನಿವಾಸಿ ಶ್ರೀಕಾಂತ ಅಯ್ಯರ ವೆಂಕಟೇಶ (37) ಎಂಬವರು ಸೆಪ್ಟಂಬರ್ 25ರಂದು ಬೆಳಿಗ್ಗೆ ತಮ್ಮ ಮನೆಯ ಮುಂಭಾಗದಲ್ಲಿ ಬೀಗ ಹಾಕಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಯಾರೊ ಅಪರಿಚಿತ ಅಸಾಮಿಗಳು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.