ಪ್ರಾಯೋಗಿಕ ಮಾದರಿಯಲ್ಲಿ ಮತ್ತೆ 2 ಎಲೆಕ್ಟ್ರಿಕ್ ಬಸ್ಸುಗಳ ಸಂಚಾರ: ಬಿಎಂಟಿಸಿ

ನಗರದಲ್ಲಿ ಇನ್ನೆರಡು ಹೆಚ್ಚಿನ ಎಲೆಕ್ಟ್ರಿಕ್ ಬಸ್ಸುಗಳನ್ನು ಪ್ರಾಯೋಗಿಕ ಮಾದರಿಯಲ್ಲಿ ಸಂಚರಿಸಲು ಬೆಂಗಳೂರು ಮೆಟ್ರೊಪಾಲಿಟನ್ ಸಾರಿಗೆ ನಿಗಮ ನಿರ್ಧರಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದಲ್ಲಿ ಇನ್ನೆರಡು ಹೆಚ್ಚಿನ ಎಲೆಕ್ಟ್ರಿಕ್ ಬಸ್ಸುಗಳನ್ನು ಪ್ರಾಯೋಗಿಕ ಮಾದರಿಯಲ್ಲಿ ಸಂಚರಿಸಲು ಬೆಂಗಳೂರು ಮೆಟ್ರೊಪಾಲಿಟನ್ ಸಾರಿಗೆ ನಿಗಮ ನಿರ್ಧರಿಸಿದೆ.

ಜೆಬಿಎಂ ಬಸ್ಸುಗಳು ಮತ್ತು ವೀರ ವಾಹನದ ಬಸ್ಸುಗಳು ಇನ್ನು 10 ದಿನಗಳೊಳಗೆ ನಗರಕ್ಕೆ ಬರಲು ಸಜ್ಜಾಗಿವೆ. 6 ವರ್ಷಗಳ ನಂತರ ನಗರದಲ್ಲಿ ಎಲೆಕ್ಟ್ರಿಕ್ ಬಸ್ಸುಗಳ ಪ್ರಾಯೋಗಿಕ ಸಂಚಾರವನ್ನು ಬಿಎಂಟಿಸಿ ಕಳೆದ ವಾರ ಆರಂಭಿಸಿದೆ. 12 ಮೀಟರ್ ಉದ್ದದ ಎಸಿ ಇ-ಬಸ್ಸುಗಳನ್ನು ಹೈದರಾಬಾದ್ ಮೂಲದ ಒಲೆಕ್ಟ್ರಾ ಗ್ರೀನ್ ಟೆಕ್ ಲಿಮಿಟೆಡ್ ಒದಗಿಸಿದೆ.

ಎರಡು ವಾರಗಳ ಹಿಂದೆಯೇ ಪ್ರಾಯೋಗಿಕ ಸಂಚಾರ ಆರಂಭವಾಗಬೇಕಿತ್ತು. ಆದರೆ ರಾಜ್ಯ ಸರ್ಕಾರದಿಂದ ಒಪ್ಪಿಗೆ ಸಿಗದಿದ್ದ ಕಾರಣ ವಿಳಂಬವಾಯಿತು. ಬಿಎಂಟಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದು ಅದಕ್ಕೆ ಪ್ರತಿಯಾಗಿ ಸರ್ಕಾರ ಪ್ರಾಯೋಗಿಕವಾಗಿ ಸಂಚಾರ ನಡೆಸಲು ಅನುಮತಿ ಕೊಟ್ಟಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಬಸ್ಸುಗಳು ಪ್ರಮುಖ ರಸ್ತೆಗಳಾದ ನಗರದ ಮತ್ತಿಕೆರೆ, ನಂದಿನಿ ಲೇ ಔಟ್, ನೆಲಮಂಗಲ, ವಿದ್ಯಾರಣ್ಯಪುರ, ಕಾಡುಗೋಡಿ, ಸರ್ಜಾಪುರ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬನ್ನೇರುಘಟ್ಟಗಳಲ್ಲಿ ಸಂಚರಿಸಲಿವೆ. ಸದ್ಯಕ್ಕೆ 37 ಮಂದಿ ಕುಳಿತುಕೊಳ್ಳುವ ಸಾಮರ್ಥ್ಯ ಬಸ್ಸಿನಲ್ಲಿದ್ದು ಅದನ್ನು 60ಕ್ಕೆ ವಿಸ್ತರಿಸಲಾಗುವುದು ಎಂದರು.

ಪ್ರಾಯೋಗಿಕ ಸಂಚಾರ ಒಂದು ತಿಂಗಳವರೆಗೆ ಮುಂದುವರಿಯಲಿದೆ. ಪ್ರಯಾಣಿಕರ ಬದಲಿಗೆ ಸದ್ಯಕ್ಕೆ ಮರಳಿನ ಬ್ಯಾಗುಗಳನ್ನು ಇರಿಸಲಾಗುವುದು. ನವೆಂಬರ್ ಮೊದಲ ವಾರದಲ್ಲಿ ಟೆಂಡರ್ ಕರೆಯಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com