ಆಲಮಟ್ಟಿ ಹಿನ್ನೀರು ಸಂತ್ರಸ್ತರಿಗಾಗಿ ಯನಿಟ್-3ರ ನೀಲನಕ್ಷ ಸಿದ್ದ: ಚರಂತಿಮಠ

ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಬಾದಿತಗೊಳ್ಳಲಿರುವ ಆರ್.ಎಲ್ ೫೨೩ ರಿಂದ ೫೨೫ ಮೀಟರ್ ವರೆಗಿನ ಯುನಿಟ್-೩ರ ನಿರ್ಮಾಣದ ನೀಲನಕ್ಷೆ ಸಿದ್ದಗೊಂಡಿದ್ದು, ಅದಕ್ಕೆ ಶೀಘ್ರ ಅನುಮೋದನೆ ಸಿಗಲಿದೆ ಎನ್ನುವ ಆಶಾ ಭಾವನೆಯನ್ನು ಶಾಸಕ ವೀರಣ್ಣ ಚರಂತಿಮಠ ವ್ಯಕ್ತ ಪಡಿಸಿದರು.
ವೀರಣ್ಣ ಚರಂತಿಮಠ
ವೀರಣ್ಣ ಚರಂತಿಮಠ

ಬಾಗಲಕೋಟೆ: ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಬಾದಿತಗೊಳ್ಳಲಿರುವ ಆರ್.ಎಲ್ ೫೨೩ ರಿಂದ ೫೨೫ ಮೀಟರ್ ವರೆಗಿನ ಯುನಿಟ್-೩ರ ನಿರ್ಮಾಣದ ನೀಲನಕ್ಷೆ ಸಿದ್ದಗೊಂಡಿದ್ದು, ಅದಕ್ಕೆ ಶೀಘ್ರ ಅನುಮೋದನೆ ಸಿಗಲಿದೆ ಎನ್ನುವ ಆಶಾ ಭಾವನೆಯನ್ನು ಶಾಸಕ ವೀರಣ್ಣ ಚರಂತಿಮಠ ವ್ಯಕ್ತ ಪಡಿಸಿದರು.

ಬಾಗಲಕೋಟೆ ಪಟ್ಟಣ ಅಭಿವೃಧ್ದಿ ಪ್ರಾಧಿಕಾರದ ಸಭಾಂಗಣದಲ್ಲಿ ಇಂದು ನಡೆದ  ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಯುನಿಟ್-೩ರ ವ್ಯಾಪ್ತಿಯಲ್ಲಿ ಕೈಗೊಂಡ ಸಮೀಕ್ಷೆಯನ್ವಯ ೨೪೨೧ ಮಾಲಿಕರು ಹಾಗೂ ೧೧೬೩ ಬಾಡಿಗೆದಾರು ಸಂತಸ್ತರಾಗಿದ್ದು, ಇವರಿಗೆ ನವನಗರದ ಯುನಿಟ್-೩ರಲ್ಲಿ ಪುನರ್‌ವಸತಿ ಕಲ್ಪಿಸಲು ಕಟ್ಟಡಗಳ ಸ್ವಾಧೀನ ಐತೀರ್ಪು ಆಗಿದ್ದು, ಪರಿಹಾರಧನ ಪಾವತಿಸಲಾಗಿದೆ ಎಂದರು.

ಈ ವ್ಯಾಪ್ತಿಯಲ್ಲಿ ಬರುವ ಸಂತ್ರಸ್ತರ ಪುನರ್‌ವಸತಿಗಾಗಿ ೧೬೪೦ ಎಕರೆ ಜಮೀನು ಬಾಗಲಕೋಟೆ ಮುಚಖಂಡಿ ತಾಂಡಾ ಹಾಗೂ ಸಿಗಿಕೇರಿ ಗ್ರಾಮಗಳ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದ್ದು, ಅದರಲ್ಲಿ ೧೨೨೪.೦೫ ಎಕರೆ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಉಳಿದ ಜಮೀನಿನ ಮಾಲಿಕರು ನ್ಯಾಯಾಲಯದಿಂದ ಸ್ವಾದೀನ ಪ್ರಕ್ರಿಯೆಗೆ ತಡೆಯಾಜ್ಞೆ ತಂದಿದ್ದು, ಇಂತವರ ಜಮೀನುಗಳನ್ನು ನ್ಯಾಯಾಲಯದ ತೀರ್ಮಾನದ ನಂತರ ಸ್ವಾದೀನಕ್ಕೆ ಕ್ರಮಕೈಗೊಳ್ಳಲಾಗುತ್ತಿದೆ. ಇವೆಲ್ಲವನ್ನೂ ಸೇರಿಸಿ ನೀಲನಕ್ಷೆ ತಯಾರಿಸಿದ್ದ್ದು, ಅನುಮೋದನೆ ನಂತರ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದೆಂದು ತಿಳಿಸಿದರು.

ಯುನಿಟ್-೩ರನ್ನು ೩೦೦ ರಿಂದ ೫೦೦ ಎಕರೆಗೆ ೧ ಬ್ಲಾಕ್‌ದಂತೆ ಆಧುನಿಕ ಮಾದರಿಯ ೫ ಬ್ಲಾಕ್‌ಗಳನ್ನೊಳಗೊಂಡ ಲೇಔಟ್ ಪ್ಲಾನ್ ತಯಾರಿಸಿದ್ದು, ನಗರ ಯೋಜನಾ ಇಲಾಖೆಗೆ ಅನುಮೋದನೆಗೆ ಸಲ್ಲಿಸಲಾಗಿದೆ. ಅದು ಅನುಮೋದನೆ ಹಂತದಲ್ಲಿದ್ದು, ೧೨.೨೭ ಕೋಟಿ ರೂ. ಶುಲ್ಕ ಪಾತಿಸಿಗೆ ನಗರ ಯೋಜನಾ ಪ್ರಾಧಿಕಾರವು ತಿಳಿಸಿದೆ. ಈ ಶುಲ್ಕಕ್ಕೆ ವಿನಾಯಿತಿ ಕೋರಿ ಜಲಸಂಪನ್ಮೂಲ ಇಲಾಖೆ ಮುಖಾಂತರ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸದರಿ ಪ್ರಸ್ತಾವನೆ ಪರಿಗಣಿಸಿ ಶುಲ್ಕ ವಿನಾಯಿತಿ ನೀಡಿದ್ದು, ಈಗ ೯.೪೫ ಕೋಟಿ ರೂ. ಪಾವತಿಸಲಾಗಿದ್ದು, ಯುನಿಟ್-೩ರ ನೀಲನಕ್ಷೆಗೆ ಶೀಘ್ರವೇ ಅನುಮೋದನೆ ದೊರೆಯಲಿದೆ ಎಂದರು. 

ಯುನಿಟ್-೧ರ ಆರ್.ಎಲ್ ೫೨೧ ಮೀಟರ್ ವ್ಯಾಪ್ತಿಯಲ್ಲಿ ಬರುವ ೪೫೮೫ ಯೋಜನಾ ಸಂತ್ರಸ್ತರನ್ನು ಸ್ಥಳಾಂತರಿಸಿ ನವನಗರದ ಯುನಿಟ್-೧ರಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಯುನಿಟ್-೧ರ ನವೀಕರಣ ಮತ್ತು ದುರಸ್ಥಿ ಕಾಮಗಾರಿಗಳನ್ನು ಕೈಗೊಳ್ಳಲು ೧೩೩ ಕೋಟಿ ರೂ.ಗಳೊಂದಿಗೆ ನಗರಸಭೆಗೆ ಹಸ್ತಾಂತರಿಸಲಾಗಿತ್ತು, ಸರಕಾರದ ಆದೇಶದನ್ವು ಆ ಹಣವನ್ನು ಮರಳಿ ಅದರ ಮೇಲಿನ ಆಕರಿಸಿದ ಬಡ್ಡಿಯ ಸಮೇತ ಪ್ರಾಧಿಕಾರಕ್ಕೆ ಪಡೆದುಕೊಳ್ಳಲಾಗಿದೆ. ಸರಕಾರದ ಆದೇಶದನ್ವಯ ೧೫೦ ಕೋಟಿ ರೂ.ಗಳಿಗೆ ಮೀರದಂತೆ ನವನಗರದ ಯುನಿಟ್-೧ರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸದ್ಯದಲ್ಲಿಯೇ ಕಾಮಗಾರಿ ಅನುಷ್ಠಾನಗೊಳ್ಳಲಿದೆ ಎಂದರು.

ಯುನಿಟ್-೨ರ ವ್ಯಾಪ್ತಿಯ ಸಂತ್ರಸ್ತರ ಕುಟುಂಬಗಳಿಗೆ ನವನಗರದ ಯುನಿಟ್-೨ರಲ್ಲಿ ಪುನರ್‌ವಸತಿ ಕಲ್ಪಿಸಲು ಉದ್ದೇಶಿಸಿದ್ದು, ಬಿಟಿಡಿಎ ವ್ಯಾಪ್ತಿಯಲ್ಲಿ ಬರುವ ೧೩೩೩ ಎಕರೆ ಪ್ರದೇಶದಲ್ಲಿ ಈಗಾಗಲೇ ೫೩ ಸೆಕ್ಟರ್‌ಗಳನ್ನು ಗುರುತಿಸಿದ್ದು, ಅದರಕ್ಕಿ ೪೨ ಸೆಕ್ಟರ್‌ಗಳನ್ನು ವಸತಿಗಾಗಿ, ೬ ಸೆಕ್ಟರ್‌ಗಳನ್ನು ಸರಕಾರಿ, ಅರೆ ಸರಕಾರಿ, ಸಂಸ್ಥೆಗಳು ಇತ್ಯಾದಿಗಳಿಗೆ ಮೀಸಲಿಡಲಾಗಿದೆ. ೩೬ ವಸತಿ ಸೆಕ್ಟರ್‌ಗಳಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ಮಳೆ ನೀರು ಚರಂಡಿ, ನೀರು ಸರಬರಾಜು, ಒಳಚರಂಡಿ, ವಿದ್ಯುತ್ತೀಕರಣ ಅಭಿವೃದ್ದಿ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ ಎಂದು ತಿಳಿಸಿದರು.

ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಸದಸ್ಯರಾದ ಕುಮಾರ ಎಳ್ಳಿಗುತ್ತಿ, ಮೋಹನ ನಾಡಗೌಡ, ಶಿವಾನಂದ ಠವಳಿ, ಮಾಜಿ ಸಭಾಪತಿ ಜಿ.ಎನ್.ಪಾಟೀಲ ಹಾಗೂ ಮುಖಂಡರಾದ ಪ್ರಕಾಶ ತಪಶೆಟ್ಟಿ ಇದ್ದರು.
-ವಿಠಲ ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com