ಕರ್ನಾಟಕ ಶೀಘ್ರದಲ್ಲೇ ದಿನಕ್ಕೆ 1 ಲಕ್ಷ ಕೊವಿಡ್ ಪರೀಕ್ಷೆಯ ಗುರಿ ತಲುಪಲಿದೆ: ಸಚಿವ ಸುಧಾಕರ್

ರಾಜ್ಯದಲ್ಲಿ ಕೊರೋನಾ ಪರೀಕ್ಷೆಯ ಪ್ರಯೋಗಾಲಯಗಳ ಸಂಖ್ಯೆ ಮತ್ತು ಪರೀಕ್ಷೆಗಳನ್ನು ಹೆಚ್ಚಿಸಿರುವುದರಿಂದ ಕರ್ನಾಟಕ ಶೀಘ್ರದಲ್ಲೇ ದಿನಕ್ಕೆ ಒಂದು ಲಕ್ಷ ಕೊವಿಡ್ -19 ಪರೀಕ್ಷೆ ನಡೆಸುವ ಗುರಿ ತಲುಪಲಿದೆ...
ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್
ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪರೀಕ್ಷೆಯ ಪ್ರಯೋಗಾಲಯಗಳ ಸಂಖ್ಯೆ ಮತ್ತು ಪರೀಕ್ಷೆಗಳನ್ನು ಹೆಚ್ಚಿಸಿರುವುದರಿಂದ ಕರ್ನಾಟಕ ಶೀಘ್ರದಲ್ಲೇ ದಿನಕ್ಕೆ ಒಂದು ಲಕ್ಷ ಕೊವಿಡ್ -19 ಪರೀಕ್ಷೆ ನಡೆಸುವ ಗುರಿ ತಲುಪಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ಶನಿವಾರ ಹೇಳಿದ್ದಾರೆ.

ಒಂದು ಪರೀಕ್ಷಾ ಪ್ರಯೋಗಾಲಯದಿಂದ, ನಾವು ಆರು ತಿಂಗಳಲ್ಲಿ 108 ಲ್ಯಾಬ್‌ಗಳನ್ನು ತೆರೆದಿದ್ದೇವೆ. ದಿನಕ್ಕೆ 300 ಪರೀಕ್ಷೆಗಳಿಂದ ನಾವು ಅದನ್ನು 75,000 ಕ್ಕೆ ಹೆಚ್ಚಿಸಿದ್ದೇವೆ. ಇದು ಶೀಘ್ರದಲ್ಲೇ ದಿನಕ್ಕೆ ಒಂದು ಲಕ್ಷ ಪರೀಕ್ಷೆಗಳ ಗುರಿಯನ್ನು ತಲುಪಲಿದೆ ಎಂದು ಸುಧಾಕರ್ ಹೇಳಿದ್ದಾರೆ.

ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಬದ್ಧತೆಯನ್ನು ರಾಜ್ಯ ಸರ್ಕಾರ ತೋರಿಸಿದೆ ಮತ್ತು ಯಶಸ್ವಿಯಾಗಿದೆ ಎಂದು ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com