ಪ್ಲಾಸ್ಮಾ ಬ್ಯಾಂಕ್ ಗೆ ಪರ್ಯಾಯವಾಗಿ ಕೆಲಸ ನಿರ್ವಹಿಸುತ್ತಿದೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ!

ಉತ್ತರ ಕರ್ನಾಟಕದಲ್ಲಿ ಪ್ಲಾಸ್ಮಾ ಬ್ಯಾಂಕ್ ಸ್ಥಾಪಿಸಬೇಕು ಎಂಬ ಬೇಡಿಕೆ ಹೆಚ್ಚುತ್ತಿರುವ ಬೆನ್ನಲ್ಲೆ ಕಿಮ್ಸ್ ಆಸ್ಪತ್ರೆ ಪ್ಲಾಸ್ಮಾ ಬ್ಯಾಂಕ್ ಗೆ ಪರ್ಯಾಯವಾಗಿ ಕಿಮ್ಸ್ ಆಸ್ಪತ್ರೆ ಕೆಲಸ ಮಾಡುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಪ್ಲಾಸ್ಮಾ ಬ್ಯಾಂಕ್ ಸ್ಥಾಪಿಸಬೇಕು ಎಂಬ ಬೇಡಿಕೆ ಹೆಚ್ಚುತ್ತಿರುವ ಬೆನ್ನಲ್ಲೆ ಕಿಮ್ಸ್ ಆಸ್ಪತ್ರೆ ಪ್ಲಾಸ್ಮಾ ಬ್ಯಾಂಕ್ ಗೆ ಪರ್ಯಾಯವಾಗಿ ಕಿಮ್ಸ್ ಆಸ್ಪತ್ರೆ ಕೆಲಸ ಮಾಡುತ್ತಿದೆ.

ಗದಗ, ಹಾವೇರಿ, ಉತ್ತರ ಕನ್ನಡ, ಬಾಗಲಕೋಟೆ, ಬಳ್ಳಾರಿ, ಕೊಪ್ಪಳ, ಬೆಳಗಾವಿ ಜಿಲ್ಲೆಗಳ ತುರ್ತು ರೋಗಿಗಳನ್ನು ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತಿದೆ. 

ಇಲ್ಲಿಯವರೆಗೆ, ಹುಬ್ಬಳ್ಳಿ ಕಿಮ್ಸ್ ಮತ್ತು ಇತರ ಖಾಸಗಿ ಆಸ್ಪತ್ರೆಗಳಲ್ಲಿ ಕೇವಲ 50 ಕ್ಕೂ ಹೆಚ್ಚು ಪ್ಲಾಸ್ಮಾ ಚಿಕಿತ್ಸೆ ನಡೆಸಲಾಗಿದೆ. ಆದರೆ ಪ್ಲಾಸ್ಮಾ ದಾನ ನೀಡುವವರ ಸಂಖ್ಯೆ
ಕೊರತೆಯಿಂದಾಗಿ ಹೆಚ್ಚಿನ ಆಸ್ಪತ್ರೆಗಳ ಪ್ಲಾಸ್ಮಾ ಘಟಕಗಳು ಸಮಸ್ಯೆ ಅನುಭವಿಸುತ್ತಿವೆ. 

ಒಂದು ವರ್ಷಕ್ಕಾಗಿ ನಾವು 200 ಪ್ಲಾಸ್ಮಾ ಯೂನಿಟ್ ಸಂಗ್ರಹಿಸಬಹುದಾಗಿದೆ, ಕಿಮ್ಸ್ ಆಸ್ಪತ್ರೆ ಬೇರೆ ಆಸ್ಪತ್ರೆಗಳಿಗೂ ಪ್ಲಾಸ್ಮಾ ನೀಡುತ್ತಿದೆ, ಸಂಗ್ರಹಿಸಿದ ಪ್ಲಾಸ್ಮಾ ಮನೆಯೊಳಗಿನ ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಕಾಗುವುದಿಲ್ಲ. ಚೇತರಿಸಿಕೊಂಡ ರೋಗಿಗಳು ಪ್ಲಾಸ್ಮಾ ದಾನ ಮಾಡುವಂತೆ ಜಾಗೃತಿ ಮೂಡಿಸಬೇಕು  ಎಂದು ಕಿಮ್ಸ್ ವೈದ್ಯರೊಬ್ಬರು ತಿಳಿಸಿದ್ದಾರೆ. ಪ್ಲಾಸ್ಮಾ ಸಂಗ್ರಹಿಸಲು 10 ಸಾವಿರ ರು ಖರ್ಚಾಗುತ್ತದೆ, ಆದರೆ ನಾವು ಇದನ್ನು ಉಚಿತವಾಗಿ ನೀಡುತ್ತಿದ್ದೇವೆ, ಪ್ಲಾಸ್ಮಾ ದಾನ ಉತ್ತೇಜಿಸಲು ದಾನಿಗಳಿಗೆ 5ಸಾವಿರ ರು ನೀಡುತ್ತಿದ್ದೇವೆ ಎಂದು ಧಾರವಾಡ ಡಿಸಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com