ಸ್ಯಾಂಡಲ್ ವುಡ್ ನಲ್ಲಿ ನಶೆ ಗೌಜಲು: ಮೊಳಕಾಲ್ಮೂರಿನಲ್ಲಿ ಗಾಂಜಾ ಗಮ್ಮತ್ತು; ಕಟಾವಿಗೆ ಬಂದ 20 ಸಾವಿರ ಕೆಜಿ ಗಾಂಜಾ ವಶ

ಮೊಳಕಾಲ್ಮೂರು ತಾಲ್ಲೂಕಿನ ವಡೇರಹಳ್ಳಿ ಗ್ರಾಮದ 4 ಎಕರೆ 20 ಕುಂಟೆಯಲ್ಲಿ ಜಮೀನಿನಲ್ಲಿ 2 ಕೋಟಿಗೂ ಅಧಿಕ ಮೌಲ್ಯದ ಗಾಂಜಾ ಪತ್ತೆಯಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕಿನ ವಡೇರಹಳ್ಳಿ ಗ್ರಾಮದ 4 ಎಕರೆ 20 ಕುಂಟೆಯಲ್ಲಿ ಜಮೀನಿನಲ್ಲಿ 2 ಕೋಟಿಗೂ ಅಧಿಕ ಮೌಲ್ಯದ  ಗಾಂಜಾ ಪತ್ತೆಯಾಗಿದೆ. 

ಗಾಂಜಾ ಕುರಿತು ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ರಾಂಪುರ ಪೊಲೀಸರು, ಗಾಂಜಾ ತೋಟ ಸೀಜ್ ಮಾಡಿದ್ದಾರೆ. ಅಷ್ಟೆ ಅಲ್ಲದೇ ನಾಲ್ಕು ಮಂದಿ ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ. ಗಾಂಜಾ ಬೆಳೆದ ಕಿಂಗ್ ಪಿನ್​ನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಜಿಲ್ಲೆಯಲ್ಲಿ ಹಿಂದೆಂದೂ ಇಷ್ಟು ದೊಡ್ಡ ಮಟ್ಟದಲ್ಲಿ ಗಾಂಜಾ ಬೆಳೆ ನೋಡಿರದ ಜನರು ಗಾಂಜಾ ಗಿಡ ನೋಡಲು ಮುಗಿಬಿದ್ದಿದ್ದರು. 2 ಕೋಟಿ ರು ಮೌಲ್ಯದ ಗಾಂಜಾ ಸೊಪ್ಪು ಸೀಜ್ ಮಾಡಿದ್ದು ಸುಮಾರು 20 ಸಾವಿರ ಕೆಜಿ ಇದೆ ಎಂದು ಎಸ್ ಪಿ ಜಿ. ರಾಧಿಕಾ ತಿಳಿಸಿದ್ದಾರೆ.

ಮಧ್ಯವರ್ತಿ ಮೂಲಕ  ಜಮೀನು ಗುತ್ತಿಗೆ ನೀಡಿದ್ದರು. ಐದು ಎಕರೆ ಜಮೀನಿಗೆ ಪ್ರತೀ ವರ್ಷಕ್ಕೆ ಒಂದು ಲಕ್ಷ ರೂ. ನಂತೆ ಒಪ್ಪಂದ ಮಾಡಿಕೊಂಡಿದ್ದರು. ಜಮೀನು ಗುತ್ತಿಗೆ ಪಡೆದಿದ್ದ ವ್ಯಕ್ತಿಎಕರೆ 20 ಗುಂಟೆ ಭೂಮಿಯಲ್ಲಿ ಗಾಂಜಾ ಬೆಳೆ ಹಾಕಿದ್ದಾನೆ. ಗಾಂಜಾ ಬೆಳೆ ಹಾಕಿ ಐದು ತಿಂಗಳುಗಳ ಬಳಿಕ ಇದೀಗ ಈ ಪ್ರಕರಣ  ಬೆಳಕಿಗೆ ಬಂದಿದೆ. 

ಚಿತ್ರದುರ್ಗದಲ್ಲಿ ನಿನ್ನೆ ನಡೆದದ್ದು ರಾಜ್ಯದಲ್ಲೇ ಅತ್ಯಂತ ದೊಡ್ಡ ಗಾಂಜಾ ರೇಡ್ ಎನ್ನಲಾಗುತ್ತಿದೆ. ಇದೀಗ ರಾಜ್ಯದಲ್ಲಿ ಸುದ್ದಿಯಾಗುತ್ತಿರುವ ಸ್ಯಾಂಡಲ್ ವುಡ್ ಡ್ರಗ್ಸ್ ಲಿಂಕ್ ಕುರಿತು ಕೂಡಾ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com