ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದಲ್ಲಿ ಮಾಜಿ ಸಚಿವ ಜೀವರಾಜ್ ಆಳ್ವ ಪುತ್ರ: ಆದಿತ್ಯ ಆಳ್ವಗಾಗಿ ಪೊಲೀಸರ ಶೋಧ
ಮಾಜಿ ಸಚಿವ ದಿವಂಗತ ಜೀವರಾಜ್ ಆಳ್ವ ಹಾಗೂ ನೃತ್ಯಗಾರ್ತಿ ನಂದಿನಿ ಆಳ್ವ ಅವರ ಪುತ್ರ ಆದಿತ್ಯ ಆಳ್ವ ಈ ಪ್ರಕರಣದಲ್ಲಿ ಆರನೇ ಆರೋಪಿಯಾಗಿದ್ದಾರೆ.
Published: 07th September 2020 07:44 AM | Last Updated: 07th September 2020 07:44 AM | A+A A-

ಆದಿತ್ಯ ಆಳ್ವ
ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಬೆಳಕಿಗೆ ಬಂದ ಡ್ರಗ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಈಗ ರಾಜ್ಯದ ಪ್ರಕರಣಕ್ಕೂ ಬಾಲಿವುಡ್ ಮಾದಕವಸ್ತು ಪ್ರಕರಣಕ್ಕೂ ಸಂಬಂಧ ಇರುವ ವಾಸನೆ ಬಡಿಯುತ್ತಿದೆ.
ಮಾಜಿ ಸಚಿವ ದಿವಂಗತ ಜೀವರಾಜ್ ಆಳ್ವ ಹಾಗೂ ನೃತ್ಯಗಾರ್ತಿ ನಂದಿನಿ ಆಳ್ವ ಅವರ ಪುತ್ರ ಆದಿತ್ಯ ಆಳ್ವ ಈ ಪ್ರಕರಣದಲ್ಲಿ ಆರನೇ ಆರೋಪಿಯಾಗಿದ್ದಾರೆ. ಆದಿತ್ಯ ಅವರ ಸೋದರಿ ಪ್ರಿಯಾಂಕಾ ಅವರು ನಟ ವಿವೇಕ್ ಒಬೆರಾಯ್ ವರಿಸಿದ್ದಾರೆ. ಆದಿತ್ಯ ಆಳ್ವ ಅವರ ಸದಾಶಿವ ನಗರದಲ್ಲಿರುವ ಮನೆ ಸದ್ಯ ಖಾಲಿಯಾಗಿದ್ದು, ಆಳ್ವ ಎಲ್ಲಿದ್ದಾರೆ ಎಂಬುದರ ಮಾಹಿತಿಯಿಲ್ಲ. ಹೀಗಾಗಿ ಆದಿತ್ಯ ಆಳ್ವನನ್ನು ಪತ್ತೆ ಹಚ್ಚಲು ಪೊಲೀಸರು ಮೂರು ವಿಶೇಷ ತಂಡ ರಚಿಸಿದ್ದಾರೆ.
ಡ್ರಗ್ಸ್ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ದಿಲ್ಲಿ ಮೂಲದ ವೀರೇನ್ ಖನ್ನಾ ಸ್ವಂತ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ನಡೆಸುತ್ತಿದ್ದಾನೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಈ ಮೂಲಕ ಮುಂಬಯಿ, ಬೆಂಗಳೂರು, ದಿಲ್ಲಿ ಸಹಿತ ಸಹಿತ ದೇಶದ ವಿವಿಧೆಡೆ ಸೆಲೆಬ್ರಿಟಿಗಳಾಗಿಯೇ ದೊಡ್ಡ ದೊಡ್ಡ ಪಾರ್ಟಿಗಳನ್ನು ಆಯೋಜಿಸುತ್ತಿದ್ದ. ಇದರಲ್ಲಿ ವಿವಿಧ ರಾಜ್ಯಗಳ ಚಿತ್ರರಂಗ ಕಲಾವಿದರು ಭಾಗಿಯಾಗುತ್ತಿದ್ದರು ಎಂದು ತನಿಖೆ ವೇಳೆ ಗೊತ್ತಾಗಿದೆ.
ಇನ್ನೂ ಪಾರ್ಟಿಗಳಿಗೆ ಹೋದಾಗ ಸ್ನೇಹಿತ ರವಿಶಂಕರ್ ಡ್ರಗ್ಸ್ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದ ಎಂದು ನಟಿ ರಾಗಿಣಿ ಸಿಸಿಬಿ ವಿಚಾರಣೆ ವೇಳೆ ತಿಳಿಸಿದ್ದಾರೆ.ಇನ್ನು ರಾಗಿಣಿ ಅವರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ.