ಕಳಪೆ ಗುಣಮಟ್ಟದ ಬಿತ್ತನೆ ಬೀಜಗಳಿಗೆ ಹಾನಿಕಾರಕ ಕೆಮಿಕಲ್ಸ್ ಲೇಪಿಸುವುದರಿಂದ ಆರೋಗ್ಯಕ್ಕೆ ಕುತ್ತು!

ಬಿತ್ತನೆ ಬೀಜಗಳಿಗೆ ಹಾನಿಕರವಾದ ರಸಾಯನಿಕಗಳನ್ನು ಲೇಪಿಸುವುದರಿಂದ ಮನುಷ್ಯರು ಮತ್ತು ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ವರದಿ ಬಹಿರಂಗ ಪಡಿಸಿದೆ
ಬಿಸಿ ಪಾಟೀಲ್
ಬಿಸಿ ಪಾಟೀಲ್

ಬೆಂಗಳೂರು: ಬಿತ್ತನೆ ಬೀಜಗಳಿಗೆ ಹಾನಿಕರವಾದ ರಸಾಯನಿಕಗಳನ್ನು ಲೇಪಿಸುವುದರಿಂದ ಮನುಷ್ಯರು ಮತ್ತು ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ವರದಿ ಬಹಿರಂಗ ಪಡಿಸಿದೆ.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೃಷಿ ಇಲಾಖೆ ಅಧಿಕಾರಿಗಳು 16,510 ಬ್ಯಾಗ್ ಜೋಳ ಮತ್ತು 721 ಬ್ಯಾಗ್ ಸೂರ್ಯಕಾಂತಿ ಬೀಜ ಸೇರಿಸಿ 5,91 ಕೋಟಿ ರು ಮೌಲ್ಯದ 10 ಸಾವಿರ ಕ್ವಿಂಟಾಲ್ ಬೀಜಗಳನ್ನು ವಶಪಡಿಸಿಕೊಂಡಿದ್ದರು.ಕಳೆದ ಕೆಲವು ತಿಂಗಳಲ್ಲಿ ವಶ ಪಡಿಸಿಕೊಂಡಿದ್ದ ಅತಿ ದೊಡ್ಡ ಪ್ರಮಾಣದ್ದಾಗಿತ್ತು.

ಬಳ್ಳಾರಿ, ಹಾವೇರಿ, ಹುಬ್ಬಳ್ಳಿ, ಮತ್ತು ಧಾರವಾಡದಲ್ಲಿ ಪ್ರಕರಣ ದಾಖಲಾಗಿದ್ದು, 1996 ಬಿತ್ತನೆ ಬೀಜ ಕಾಯಿದೆ ಪ್ರಕಾರ, ಕಾನೂನು ಕ್ರಮ ಕೈಗೊಳ್ಳಲಾಗಿದೆ. 9 ಕೇಸ್ ಗಳನ್ನು ದಾಖಲಿಸಿದ್ದು 40 ರಿಂದ 65 ತಪ್ಪಿತಸ್ಥರನ್ನು ಬಂಧಿಸಲಾಗಿದೆ, ಈ ಬಿತ್ತನೆ ಬೀಜಗಳಿಗೆ ಥಿಯಾಮೆಥೊಕ್ಸಮ್, ಇಮಿಡಾಕ್ಲೋಪ್ರಿಡ್ ಮತ್ತು ಮೆಟಲ್ ಆಕ್ಸೈಡ್ ಅನ್ನು ಬೀಜಗಳ ಮೇಲೆ ಲೇಪಿಸಲಾಗಿತ್ತು ಎಂದು ಪ್ರಯೋಗಾಲಯದ ವರದಿ ತಿಳಿಸಿದೆ.

ಇನ್ನೂ ಮೂರು ಪ್ರಕರಣಗಳ ವರದಿ ಬರಬೇಕಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತನಿಖೆಯ ಭಾಗವಾಗಿ ತಜ್ಞರ ಅಭಿಪ್ರಾಯ ಕೇಳಲಾಗಿತ್ತು.

ತಜ್ಞರ ಪ್ರಕಾರ ಈ ರಾಸಾನಿಕ ಲೇಪಿತ ಬೀಜಗಳಿಂದ ಮನುಷ್ಯರು ಮತ್ತು ಪ್ರಾಣಿಗಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಅವರು ತಿಳಿಸಿದ್ದಾರೆ.

ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ಕೃಷಿ ಸಚಿವ ಬಿಸಿ ಪಾಟೀಲ್ ತನಿಖೆ ಪ್ರಕ್ರಿಯೆ ಮುಂದುವರಿದಿದ್ದು, ಶೀಘ್ರವೇ ಅವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com