ಬಾಲಿವುಡ್ ಡ್ಯಾನ್ಸರ್ ಕಿಶೋರ್ ಶೆಟ್ಟಿಯೊಂದಿಗೆ ಡ್ರಗ್ ಸೇವಿಸಿದ್ದ ಯುವತಿ ಬಂಧನ

ಮಾದಕ ಜಾಲದಡಿ ಬಾಲಿವುಡ್ ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಶೋರ್ ಜತೆಗೆ ಡ್ರಗ್ ಪಾರ್ಟಿ ಮಾಡಿದ್ದ ಯುವತಿಯೋರ್ವಳನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಿವುಡ್ ಡ್ಯಾನ್ಸರ್ ಕಿಶೋರ್ ಶೆಟ್ಟಿಯೊಂದಿಗೆ ಡ್ರಗ್ ಸೇವಿಸಿದ್ದ ಯುವತಿ ಬಂಧನ

ಮಂಗಳೂರು: ಮಾದಕ ಜಾಲದಡಿ ಬಾಲಿವುಡ್ ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಶೋರ್ ಜತೆಗೆ ಡ್ರಗ್ ಪಾರ್ಟಿ ಮಾಡಿದ್ದ ಯುವತಿಯೋರ್ವಳನ್ನು ಪೊಲೀಸರು ಬಂಧಿಸಿದ್ದಾರೆ.

ಆಸ್ಕಾ ಎಂಬ ಯುವತಿಯನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆಸ್ಕಾ, ಮಣಿಪುರ ಮೂಲದವಳಾಗಿದ್ದು, ಮಂಗಳೂರಿನ ಸ್ಪಾ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಳು ಎಂದು ತಿಳಿದು ಬಂದಿದೆ.  ಆಕೆಯನ್ನು ಡ್ರಗ್ಸ್ ಪರೀಕ್ಷೆಗೆ ಒಳಪಡಿಸಲಾಯಿತು ಮತ್ತು ಫಲಿತಾಂಶವು ಸಕಾರಾತ್ಮಕವಾಗಿದೆ ಎಂದು ವರದಿಯಾಗಿದೆ.

ಡ್ರಗ್ಸ್ ಪ್ರಕರಣದ ಬಗ್ಗೆ ಪೊಲೀಸರು ತಮ್ಮ ತನಿಖೆಯನ್ನು ತೀವ್ರಗೊಳಿಸಿದ್ದಾರೆ, ಇನ್ನು ಡ್ಯಾನ್ಸರ್ ಕಿಶೋರ್ ಶೆಟ್ಟಿ ಹಾಗೂ ಇನ್ನೋರ್ವನಿಗೆ ಭಾನುವಾರ ನ್ಯಾಯಾಲಯ ಏಳು ದಿನಗಳ ಕಾಲ ಪೋಲೀಸ್ ಕಸ್ಟಡಿ ವಿಧಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com