ನೆದರ್‌ಲ್ಯಾಂಡ್ ನಿಂದ ಉಡುಪಿಗೆ ಡ್ರಗ್ಸ್ ತರಿಸಿ ಮಾರಾಟ: ನಾಲ್ವರ ಬಂಧನ

ಡಾರ್ಕ್ ನೆಟ್ ಮೂಲಕ ದೂರದ ನೆದರ್‌ಲ್ಯಾಂಡ್ ನಿಂದ ಡ್ರಗ್ಸ್ ಖರೀದಿಸಿ ಉಡುಪಿಯ ಸುತ್ತಮುತ್ತ ಮಾರಾಟ ಮಾಡುತ್ತಿದ್ದ ನಾಲ್ವರು ಡ್ರಗ್ ಪೆಡ್ಲರ್ ಗಳನ್ನು ಎನ್‌ಸಿಬಿ  ಬಂಧಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಡಾರ್ಕ್ ನೆಟ್ ಮೂಲಕ ದೂರದ ನೆದರ್‌ಲ್ಯಾಂಡ್ ನಿಂದ ಡ್ರಗ್ಸ್ ಖರೀದಿಸಿ ಉಡುಪಿಯ ಸುತ್ತಮುತ್ತ ಮಾರಾಟ ಮಾಡುತ್ತಿದ್ದ ನಾಲ್ವರು ಡ್ರಗ್ ಪೆಡ್ಲರ್ ಗಳನ್ನು ಎನ್‌ಸಿಬಿ  ಬಂಧಿಸಿದೆ.

ಬಂಧಿತರನ್ನು ಕೇರಳದ ಕೆ. ಪ್ರಮೋದ್, ಫಾಹಿಮ್ ಹಾಗೂ ಕರ್ನಾಟಕದ  ಎ. ಹಶೀರ್ ಹಾಗೂ ಎಸ್‌.ಎಸ್‌. ಶೆಟ್ಟಿ  ಎಂದು ಗುರುತಿಸಲಾಗಿದೆ.

ಬಂಧಿತರಿಂದ ದ 750 ಎಂಡಿಎಂಎ ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ.

ಕಳೆದ ಎರಡು ವರ್ಷಗಳಿಂದ ಈ ಡ್ರಗ್ಸ್ ವಹಿವಾಟು ನಡೆದಿತ್ತು. ಉಡುಪಿಯ ಮಣಿಪಾಲ್ ವಿವಿ,  ಎನ್‌ಎಂಎಎಂಐಟಿ ಕಾಲೇಜು, ಮಣಿಪಾಲ್ ಕ್ಲಬ್‌ ಗಳಲ್ಲಿ ಇದನ್ನು ಮಾರುತ್ತಿದ್ದರು. ಪೋಸ್ಟಲ್ ಕವರ್ ಮೇಲೆ ಯಾರಿಂದ ಬಂತೆನ್ನುವ ವಿಳಾಸವಿರುತ್ತಿರಲಿಲ್ಲ. 

ಡಾರ್ಕ್ ನೆಟ್ ಮೂಲಕ ಡ್ರಗ್ಸ್ ಗೆ ಆರ್ಡರ್ ಕೊಟ್ಟು ಬಿಟ್ ಕಾಯಿನ್ ಗಳ ಮೂಲಕ ಹಣ ಪಾವತಿಸಿ ಡ್ರಗ್ಸ್ ಪಡೆದುಕೊಂಡು ಅದನ್ನು ಉಡುಪಿಯ ಸುತ್ತಮುತ್ತಲ ಕಾಲೇಜು, ಕ್ಲಬ್ ಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು ತನಿಖೆ ಮುಂದುವರಿದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com