ಸರ್ಕಾರದ ಬೆದರಿಕೆ ತಂತ್ರಗಳಿಗೆ ಹೆದರುವುದಿಲ್ಲ, ಮುಷ್ಕರ ಮುಂದುವರಿಕೆ: ಕೋಡಿಹಳ್ಳಿ ಚಂದ್ರಶೇಖರ್

ಸಾರಿಗೆ ನೌಕರರ ಮುಷ್ಕರ ಮೂರನೇ ದಿನ ಮುಂದುವರಿಯುತ್ತಿದ್ದು ಇಲಾಖೆ ನೌಕರರ ಭವಿಷ್ಯ, ಜೀವನದ ಅನೇಕ ಪ್ರಶ್ನೆಗಳನ್ನು ಸರ್ಕಾರದ ಮುಂದಿಡಲಾಗಿದೆ. ನೌಕರರ ಜೀವನ ಸುಧಾರಣೆಗೆ ಸರ್ಕಾರ ತಾರತಮ್ಯ ನೀತಿಯನ್ನು ಅನುಸರಿಸಬಾರದು ಎಂದು ರಾಜ್ಯ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್
ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಮೂರನೇ ದಿನ ಮುಂದುವರಿಯುತ್ತಿದ್ದು ಇಲಾಖೆ ನೌಕರರ ಭವಿಷ್ಯ, ಜೀವನದ ಅನೇಕ ಪ್ರಶ್ನೆಗಳನ್ನು ಸರ್ಕಾರದ ಮುಂದಿಡಲಾಗಿದೆ. ನೌಕರರ ಜೀವನ ಸುಧಾರಣೆಗೆ ಸರ್ಕಾರ ತಾರತಮ್ಯ ನೀತಿಯನ್ನು ಅನುಸರಿಸಬಾರದು ಎಂದು ರಾಜ್ಯ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿಂದು ಮಾತನಾಡಿದ ಅವರು,  ಸರ್ಕಾರ ವೇತನ ಶ್ರೇಣಿಯ ವ್ಯತ್ಯಾಸ ಮಾಡುತ್ತಿದೆ. ಸಾರಿಗೆ ನೌಕರರ ವಿಚಾರದಲ್ಲಿ ತಾರತಮ್ಯ ಮಾಡ್ತಿದ್ದಾರೆ. ನಿನ್ನೆಯ ಸಭೆಯಲ್ಲಿ ಯಾವುದೇ ತೀರ್ಮಾನಗಳು ಆಗಿಲ್ಲ. ರಾಜ್ಯ ಸರ್ಕಾರ ನಮ್ಮ‌ ಬೇಡಿಕೆಯನ್ನ ಈಡೇರಿಸಲೇಬೇಕು. ಯಾವ ನೌಕರರೂ ಆತ್ಮಹತ್ಯೆ ಮಾಡಿಕೊಳ್ಳಬಾರದು. ದಿಟ್ಟತನದಿಂದ ಹೋರಾಡಿ, ಪರಿಹಾರ ಕಂಡುಕೊಳ್ಳಲಿ. ಸಾರಿಗೆ ನೌಕರರ ಆತ್ಮಹತ್ಯೆ ವಿಷಾದನೀಯ. ನೋಟಿಸ್ ನೀಡಿ ಸರ್ಕಾರ ಬೆದರಿಕೆ ತಂತ್ರ ಮಾಡುತ್ತಿದೆ. ಇದಕ್ಕೆ ಸಾರಿಗೆ ನೌಕರರು ಹೆದರುವುದಿಲ್ಲ ಎಂದು ಹೇಳಿದ್ದಾರೆ.

40 ವರ್ಷದ ಮೇಲಾದರೂ ಕೂಡ ಸರ್ಕಾರ ಸಾರಿಗೆ ಇಲಾಖೆ ನೌಕರರಿಗೆ ಸರಿಯಾದ ವೇತನ ಜಾರಿಗೆ ತಂದಿಲ್ಲ. 6ನೇ ವೇತನ ಆಯೋಗದ ಶಿಫಾರಸುಗಳನ್ನು ಕೂಡಲೇ ಜಾರಿಗೊಳಿಸಬೇಕು. ಆ ನಿಟ್ಟಿನಲ್ಲಿ ನಿರ್ಧಾರಗಳನ್ನು ಕೂಡಲೇ ಪ್ರಕಟಿಸಬೇಕು ಎಂದು ಒತ್ತಾಯಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com