ಶಿವಮೊಗ್ಗ ನಾಯಕ ಮಾಲ್ ಗುತ್ತಿಗೆ ಅವಧಿ ವಿಸ್ತರಣೆಗೆ ಸಭೆಯಲ್ಲಿ ಪ್ರಸ್ತಾಪ ಸುತ್ತ ಅನುಮಾನದ ಹುತ್ತ!

ನಗರದ ಶಿವಪ್ಪ ನಾಯಕ ಮಾಲ್  ಕಟ್ಟಡದ ಗುತ್ತಿಗೆ(ಭೋಗ್ಯ) ಅವಧಿಯನ್ನು ಈಗಿರುವ 32 ವರ್ಷದಿಂದ 99 ವರ್ಷಕ್ಕೆ ವಿಸ್ತರಿಸಬೇಕೆಂಬ ಪ್ರಸ್ತಾಪ ನಾಡಿದ್ದು ಸೋಮವಾರ ನಡೆಯಲಿರುವ ಶಿವಮೊಗ್ಗ ನಗರ ಪಾಲಿಕೆ ಸಭೆಯಲ್ಲಿ ಚರ್ಚೆಗೆ ಬರಲಿದೆ. ಮಾಲ್ ನ ಗುತ್ತಿಗೆ ಅವಧಿ ಮುಗಿಯಲು ಇನ್ನೂ 20 ವರ್ಷ ಬಾಕಿಯಿದೆ.
ಶಿವಪ್ಪ ನಾಯಕ ಮಾಲ್
ಶಿವಪ್ಪ ನಾಯಕ ಮಾಲ್
Updated on

ಶಿವಮೊಗ್ಗ: ನಗರದ ಶಿವಪ್ಪ ನಾಯಕ ಮಾಲ್  ಕಟ್ಟಡದ ಗುತ್ತಿಗೆ(ಭೋಗ್ಯ) ಅವಧಿಯನ್ನು ಈಗಿರುವ 32 ವರ್ಷದಿಂದ 99 ವರ್ಷಕ್ಕೆ ವಿಸ್ತರಿಸಬೇಕೆಂಬ ಪ್ರಸ್ತಾಪ ನಾಡಿದ್ದು ಸೋಮವಾರ ನಡೆಯಲಿರುವ ಶಿವಮೊಗ್ಗ ನಗರ ಪಾಲಿಕೆ ಸಭೆಯಲ್ಲಿ ಚರ್ಚೆಗೆ ಬರಲಿದೆ. ಮಾಲ್ ನ ಗುತ್ತಿಗೆ ಅವಧಿ ಮುಗಿಯಲು ಇನ್ನೂ 20 ವರ್ಷ ಬಾಕಿಯಿದೆ.

ಸಭೆಯ ವಿಷಯಗಳಲ್ಲಿ ಮಾಲ್ ನ ಭೋಗ್ಯದ ಅವಧಿ ವಿಸ್ತರಣೆ ಬಗ್ಗೆ ಪ್ರಸ್ತಾಪಿಸಲು ಯಾರು ಹೇಳಿದರು ಎಂದು ಯಾರಿಗೂ ತಿಳಿದಿಲ್ಲ. ತಮ್ಮ ಗಮನಕ್ಕೆ ಬರದೆ ವಿಷಯವನ್ನು ಸಭೆಯ ಅಜೆಂಡಾದಲ್ಲಿ ತರಲಾಗಿದೆ ಎನ್ನುತ್ತಾರೆ ಶಿವಮೊಗ್ಗ ನಗರ ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ.

ಒಪ್ಪಂದ ಪ್ರಕಾರ ಲೀಸ್ ಅವಧಿ ಮುಗಿಯಲು ಇನ್ನೂ 20 ವರ್ಷವಿರುವಾಗ ಈಗಲೇ ಸಭೆಯಲ್ಲಿ ವಿಷಯ ಪ್ರಸ್ತಾಪವೇಕೆ ಎಂದು ವಿರೋಧ ಪಕ್ಷದ ಕಾರ್ಪೊರೇಟರ್ ಗಳು ಈ ಹಿಂದಿನ ಸಭೆಯಲ್ಲಿಯೇ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಮತ್ತೆ ಸಭೆಯ ಅಜೆಂಡಾದಲ್ಲಿ ಅನುಮೋದನೆಗೆ ಚರ್ಚೆಗೆ ಬರುತ್ತಿರುವುದು ವಿರೋಧ ಪಕ್ಷದವರು ಕೆಂಗಣ್ಣು ಮಾಡಿದೆ. ಇದರ ಹಿಂದೆ ಪಿತೂರಿ ನಡೆಯಿದ್ದು ಗುತ್ತಿಗೆ ಅವಧಿ ಮುಗಿಯುವ ಮೊದಲೇ ಅದನ್ನು 99 ವರ್ಷಕ್ಕೆ ವಿಸ್ತರಿಸುವ ಅಗತ್ಯವೇನಿದೆ ಎಂದು ಕಾಂಗ್ರೆಸ್ ಪ್ರಶ್ನೆ ಮಾಡುತ್ತಿದೆ.

ಎಲ್ಲಾ ಕಾರ್ಪೊರೇಟರ್ ಗಳಿಗೆ ಹೊರಡಿಸಲಾದ ಸುತ್ತೋಲೆಯಲ್ಲಿ, ಮಾಲ್‌ನ ಪರವಾನಗಿ ಶುಲ್ಕ ಹೊಂದಿರುವ ಬೇರಿಸ್ ಗೋಲ್ಡನ್ ಹಾರ್ವೆಸ್ಟ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ ಪರವಾನಗಿ ಶುಲ್ಕ ಅವಧಿಯನ್ನು 32 ವರ್ಷದಿಂದ 99 ವರ್ಷಗಳಿಗೆ ವಿಸ್ತರಿಸಲು ಕೋರಿದೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಕಾಂಗ್ರೆಸ್ ಕಾರ್ಪೊರೇಟರ್ ರಮೇಶ್ ಹೆಗ್ದೆ, 2009ರಲ್ಲಿ ಮಾಲ್ ನ್ನು ನಿರ್ಮಿಸಲು ಖಾಸಗಿ ಕಂಪೆನಿ ಜೊತೆ ನಗರ ಪಾಲಿಕೆ ಒಪ್ಪಂದ ಮಾಡಿಕೊಂಡಿತ್ತು ಎಂದು ಹೇಳಿದ್ದಾರೆ.

ಶಿವಪ್ಪ ನಾಯಕ ಮಾರುಕಟ್ಟೆಯನ್ನು ಮಾಲ್ ನಿರ್ಮಿಸಲು ನೆಲಸಮ ಮಾಡಲಾಯಿತು. ನಿಗಮ ಮತ್ತು ಕಂಪನಿಯ ನಡುವಿನ ಒಪ್ಪಂದದ ಪ್ರಕಾರ, ನಿರ್ಮಾಣ ಅವಧಿ ಎರಡು ವರ್ಷಗಳಾಗಿತ್ತು, ಮುಂದಿನ 30 ವರ್ಷಗಳವರೆಗೆ ವಾಣಿಜ್ಯ ಕಾರ್ಯಾಚರಣೆ, ಒಪ್ಪಂದವು ಬಿಲ್ಡ್-ಆಪರೇಟ್-ವರ್ಗಾವಣೆ ಆಧಾರದ ಮೇಲೆ ಇತ್ತು. ಗುತ್ತಿಗೆ ಅವಧಿ ಮುಗಿಯಲು 20 ವರ್ಷಗಳು ಬಾಕಿ ಇದ್ದರೂ, ಗುತ್ತಿಗೆ ವಿಸ್ತರಿಸುವ ಪ್ರಸ್ತಾವನೆಯನ್ನು ತೆರಿಗೆಯ ಸ್ಥಾಯಿ ಸಮಿತಿಯ ಮುಂದೆ ತರಲಾಯಿತು. ಆಗ ಸಮಿತಿ ಈ ಪ್ರಸ್ತಾಪವನ್ನು ತಿರಸ್ಕರಿಸಿತು. ಮತ್ತೆ, ಅದೇ ವಿಷಯವನ್ನು ಕಾರ್ಯಸೂಚಿಯಲ್ಲಿ ಸೇರಿಸಲಾಗಿದ್ದು, ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com