ಯಾದಗಿರಿ: ಪ್ರಯಾಣಿಕರ ಮೇಲೆ ಸಿಮೆಂಟ್ ಲಾರಿ ಹರಿದು ಭೀಕರ ಅಪಘಾತ, ಬಾಲಕಿ ದುರ್ಮರಣ, ನಾಲ್ವರಿಗೆ ಗಂಭೀರ ಗಾಯ

ಬಸ್ ನಿಲ್ದಾಣದಲ್ಲಿ ನಿಂತಿದ್ದ ಪ್ರಯಾಣಿಕರ ಮೇಲೆ ಸಿಮೆಂಟ್ ಲಾರಿಯಿಂದು ಹರಿದ ಪರಿಣಾಮ ಬಾಲಕಿಯೊಬ್ಬಳು ದುರ್ಮರಣಕ್ಕೀಡಾಗಿ ನಾಲ್ವರಿಗೆ ಗಂಭೀರ ಗಾಯಗಳಾದ ಘಟನೆ ಯಾದಗಿರಿ ಜಿಲ್ಲೆಗುರುಮಠಕಲ್ ನ ಬೋರಬಂಡ ಎಂಬಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಯಾದಗಿರಿ: ಬಸ್ ನಿಲ್ದಾಣದಲ್ಲಿ ನಿಂತಿದ್ದ ಪ್ರಯಾಣಿಕರ ಮೇಲೆ ಸಿಮೆಂಟ್ ಲಾರಿಯಿಂದು ಹರಿದ ಪರಿಣಾಮ ಬಾಲಕಿಯೊಬ್ಬಳು ದುರ್ಮರಣಕ್ಕೀಡಾಗಿ ನಾಲ್ವರಿಗೆ ಗಂಭೀರ ಗಾಯಗಳಾದ ಘಟನೆ ಯಾದಗಿರಿ ಜಿಲ್ಲೆಗುರುಮಠಕಲ್ ನ ಬೋರಬಂಡ ಎಂಬಲ್ಲಿ ನಡೆದಿದೆ.

ಪ್ರಯಾಣಿಕರು ಗುರುಮಠಕಲ್ ಗೆ ತೆರಳುವುದಕ್ಕಾಗಿ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಏಕಾಏಕಿ ಬಂದ ಸಿಮೆಂಟ್ ಲಾರಿ ಅವರ ಮೇಲೆ ನುಗ್ಗಿದೆ. ಈ ವೇಳೆ ಮೋನಿಕಾ ಎಂಬ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಆಕೆಯ ದೇಹ ಛಿದ್ರ ಛಿದ್ರವಾಗಿದೆ.

ಸಕಾಲದಲ್ಲಿ ಅಂಬ್ಯುಲೆನ್ಸ್ ಸಿಕ್ಕದ ಕಾರಣ 112 ಮತ್ತು ಹೈವೆ ಪ್ಯಾಟ್ರೋಲಿಂಗ್ ವಾಹನಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಲಾರಿ ಚಾಲಕನನ್ನು ಪೋಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com