ಕೊರೋನಾ ನಿಯಂತ್ರಣಕ್ಕೆ ನಿಬಂಧನೆ ಹಾಕಿಕೊಳ್ಳೋಣ, ಲಾಕ್ ಡೌನ್ ಯಾಕೆ?: ಡಾ. ಕೆ.ಸುಧಾಕರ್

ಲಾಕ್ ಡೌನ್ ಹೇರಿಕೆಯಿಂದ ಎಷ್ಟು ಕಷ್ಟವಾಗುತ್ತದೆ, ಜನಸಾಮಾನ್ಯರಿಗೆ ಯಾವ ರೀತಿ ತೊಂದರೆಯಾಗುತ್ತದೆ ಎಂಬ ಅರಿವು ಸರ್ಕಾರಕ್ಕಿದೆ, ಆದರೆ ಪರಿಸ್ಥಿತಿ ಕೈ ಮೀರಿದರೆ ಲಾಕ್ ಡೌನ್ ಮಾಡುವುದು ಅನಿವಾರ್ಯವಾಗುತ್ತದೆ, ನಾವು ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.
ಡಾ ಕೆ ಸುಧಾಕರ್
ಡಾ ಕೆ ಸುಧಾಕರ್

ಬೆಂಗಳೂರು: ಲಾಕ್ ಡೌನ್ ಹೇರಿಕೆಯಿಂದ ಎಷ್ಟು ಕಷ್ಟವಾಗುತ್ತದೆ, ಜನಸಾಮಾನ್ಯರಿಗೆ ಯಾವ ರೀತಿ ತೊಂದರೆಯಾಗುತ್ತದೆ ಎಂಬ ಅರಿವು ಸರ್ಕಾರಕ್ಕಿದೆ, ಆದರೆ ಪರಿಸ್ಥಿತಿ ಕೈ ಮೀರಿದರೆ ಲಾಕ್ ಡೌನ್ ಮಾಡುವುದು ಅನಿವಾರ್ಯವಾಗುತ್ತದೆ, ನಾವು ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನಾಗಲಿ, ಮುಖ್ಯಮಂತ್ರಿಗಳಾಗಲಿ ಲಾಕ್ ಡೌನ್ ಹೇರಿಕೆ ಮಾಡುತ್ತೇವೆ ಎಂದು ಹೇಳಿಲ್ಲ. ಸರ್ಕಾರದ ಕಡೆಯಿಂದ ಏನು ಮಾಡಲು ಸಾಧ್ಯ ಅದನ್ನು ಶಕ್ತಿಮೀರಿ ಮಾಡುತ್ತಿದ್ದೇವೆ. ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸುತ್ತಿದ್ದೇವೆ. ಲಾಕ್ ಡೌನ್ ಬೇಡವೆಂದಾದರೆ ಜನರು ನೀವೇ ನಿಬಂಧನೆಗಳನ್ನು ಹಾಕಿಕೊಳ್ಳಿ, ಸ್ಯಾನಿಟೈಸ್ ಮಾಡಿಕೊಳ್ಳಿ, ಮಾಸ್ಕ್ ಧರಿಸಿಕೊಳ್ಳಿ, ಅಂತರ ಕಾಯ್ದಿಕೊಳ್ಳಿ, ಅನಗತ್ಯ ಗುಂಪು ಸೇರಬೇಡಿ, ಅನಗತ್ಯ ಪ್ರಯಾಣ ಮಾಡಬೇಡಿ, ಲಾಕ್ ಡೌನ್ ಹೇರುವ ಅನಿವಾರ್ಯತೆ ಸೃಷ್ಟಿಸಬೇಡಿ ಎಂದು ಹೇಳಿದರು.

ಜನ ಸಹಕಾರ ನೀಡಿದರೆ ಎರಡನೇ ಅಲೆಯನ್ನು ನಿಯಂತ್ರಿಸಬಹುದು ಎಂದರು. ಕೊರೋನಾ ಪರಿಶೀಲನೆ,ಪರಿಸ್ಥಿತಿಯನ್ನು ಪರಾಮರ್ಶಿಸಿ ಕಾಲಕಾಲಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತಿರುವ ತಾಂತ್ರಿಕ ತಜ್ಞರ ಸಮಿತಿ ಅಲ್ಪ ಅವಧಿಗೆ ಲಾಕ್ ಡೌನ್ ಹೇರಿಕೆ ಮಾಡಿದರೆ ಉತ್ತಮ ಎಂದು ಸಲಹೆ ನೀಡಿರುವ ಸಂದರ್ಭದಲ್ಲಿ ಈ ಮಾತುಗಳು ಕೇಳಿಬರುತ್ತಿವೆ.

ಕೊರೋನಾ ಮಹಾಮಾರಿಯ ಎರಡನೇ ಅಲೆ ಮತ್ತಷ್ಟು ತೀವ್ರವಾಗಿದೆ. ಆರ್ಥಿಕ ಚಟುವಟಿಕೆಗೆ ಬ್ರೇಕ್ ಹಾಕದೆ, ಲಾಕ್ ಡೌನ್ ಹೇರಿಕೆ ಮಾಡದೆ ಕಟ್ಟುನಿಟ್ಟಿನ ನಿಯಮ ಜಾರಿಗೆ ತರುವ ಸಂಬಂಧ ಕನಿಷ್ಠ ಇನ್ನು ಎರಡು ತಿಂಗಳು ಜನರು ಎಚ್ಚರಿಕೆಯಿಂದಿರಿ ಎಂದು ತಜ್ಞರು ಹೇಳುತ್ತಿದ್ದಾರೆ.

ಮೇ ತಿಂಗಳ ಮೊದಲ ವಾರದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಲಿದ್ದು, ತಿಂಗಳ ಅಂತ್ಯದಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಪೂರಕ ಕ್ರಮಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ಸಹ ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com