ಕಿಡ್ನಿ ಮಾರಲು ಮುಂದಾಗಿದ್ದ ಮಹಿಳೆಗೆ 2.2 ಲಕ್ಷ ರೂಪಾಯಿ ವಂಚನೆ 

ಕಿಡ್ನಿ ಮಾರಲು ಮುಂದಾಗಿದ್ದ ಮಹಿಳೆಗೆ 2.2 ಲಕ್ಷ ರೂಪಾಯಿ ವಂಚನೆ ಮಾಡಿರುವ ಘಟನೆ ಹೊಂಗಸಂದ್ರದ ಬಾಲಾಜಿ ಲೌಟ್ ನಲ್ಲಿ ನಡೆದಿದೆ. 

35 ವರ್ಷದ ಮಹಿಳೆ ತನಗೆ ವಂಚನೆಯಾದ ಬಗ್ಗೆ ಮಹಿಳೆ ಸೈಬರ್ ಕ್ರೈಮ್ ಗೆ ದೂರು ನೀಡಿದ್ದಾರೆ. "ನನಗೆ ಆರ್ಥಿಕ ಸಮಸ್ಯೆ ಇದ್ದ ಕಾರಣ ಕಿಡ್ನಿ ಮಾರಾಟ ಮಾಡಲು ನಿರ್ಧರಿಸಿದ್ದೆ. ಆದರೆ ಇದಕ್ಕಾಗಿ ಯಾರನ್ನು ಸಂಪರ್ಕ ಮಾಡಬೇಕೆಂದು ತಿಳಿಯಲಿಲ್ಲ. ಆನ್ ಲೈನ್ ನಲ್ಲಿ ಹುಡುಕಿದಾಗ ಜ.31 ರಂದು ವೆಬ್ ಸೈಟ್ ಒಂದರಲ್ಲಿ ಇದಕ್ಕೆ ಸಂಬಂಧಿಸಿದ ಸಂಪರ್ಕ ದೂರವಾಣಿ ಸಂಖ್ಯೆ ಸಿಕ್ಕಿತ್ತು. 

ಕರೆ ಸ್ವೀಕರಿಸಿದ ಮಹಿಳೆ ತನ್ನನ್ನು ನಿರ್ಮಲಾ ದಾಸ್ ಎಂದು ಪರಿಚಯ ಮಾಡಿಕೊಂಡು, ಕಿಡ್ನಿ ಅಗತ್ಯವಿರುವವರ ಸಂಪರ್ಕ ಕೊಡಿಸುವುದಾಗಿ ತಿಳಿಸಿದ್ದರು. ಅಷ್ಟೇ ಅಲ್ಲದೇ ಇದಕ್ಕಾಗಿ ದಾನಿಗಳ ಶುಲ್ಕ ಹಾಗೂ ವಿಮೆ ಶುಲ್ಕಗಳನ್ನು ನೀಡಬೇಕೆಂದು ಕೇಳಿದ್ದರು. ಹಲವಾರು ವಹಿವಾಟುಗಳಲ್ಲಿ ಒಟ್ಟು 2.20 ಲಕ್ಷ ರೂಪಾಯಿ ಆಕೆಯ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದೆ. ಮಾ.17 ರ ನಂತರ ಆಕೆ ನನ್ನ ಕರೆಗೆ ಪ್ರತಿಕ್ರಿಯೆ ನೀಡುವುದನ್ನು ನಿಲ್ಲಿಸಿದರು. ನನಗೆ ವಂಚನೆಯಾಗಿದೆ" ಎಂದು ವಂಚನೆಗೊಳಗಾದ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಮಹಿಳೆಯ ದೂರಿನ ಆಧಾರದಲ್ಲಿ ಸೈಬರ್ ಕ್ರೈಮ್ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com