ಮುಂದುವರಿದ ಸಾರಿಗೆ ನೌಕರರ ಮುಷ್ಕರ: ಭಿಕ್ಷೆ ಬೇಡುವ‌ ಮೂಲಕ ವಿನೂತನ ಪ್ರತಿಭಟನೆ

6ನೇ ವೇತನ ಆಯೋಗ ಜಾರಿಗಾಗಿ ಆಗ್ರಹಿಸಿ ಕಳೆದ 7 ದಿನಗಳಿಂದ ಕೆಎಸ್​ಆರ್​ಟಿಸಿ ನೌಕರರು ಪ್ರತಿಭಟನೆ ನಡೆಸುತ್ತಿದ್ದು ಯುಗಾದಿ ಹಬ್ಬದ ದಿನವಾದ ನಿನ್ನೆ ಭಿಕ್ಷೆ ಬೇಡುವ‌ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: 6ನೇ ವೇತನ ಆಯೋಗ ಜಾರಿಗಾಗಿ ಆಗ್ರಹಿಸಿ ಕಳೆದ 7 ದಿನಗಳಿಂದ ಕೆಎಸ್​ಆರ್​ಟಿಸಿ ನೌಕರರು ಪ್ರತಿಭಟನೆ ನಡೆಸುತ್ತಿದ್ದು ಯುಗಾದಿ ಹಬ್ಬದ ದಿನವಾದ ನಿನ್ನೆ ಭಿಕ್ಷೆ ಬೇಡುವ‌ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಿಕ್ಷೆ ಬೇಡುವ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ತಮಗೆ 6ನೇ ವೇತನ ಆಯೋಗ ಜಾರಿ ಮಾಡುವ ತನಕ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಬಿಗಿ ಪಟ್ಟು ಹಿಡಿದಿದ್ದಾರೆ. ಮಾರ್ಚ್ ತಿಂಗಳ ಸಂಬಳವನ್ನು ಬಿಡುಗಡೆ ಮಾಡಬೇಕೆಂದು ಇದೇ ವೇಳೆ ಅವರು ಒತ್ತಾಯಿಸಿದ್ದಾರೆ.

ಇನ್ನೂ ಭಿಕ್ಷೆ ಬೇಡುವ ಮೂಲಕ ಪ್ರತಿಭಟಿಸುತ್ತಿದ್ದ ಸಿಬ್ಬಂದಿಯನ್ನು ಪೊಲೀಸರು ಅಲ್ಲಿಂದ ಕಳುಹಿಸಲು ಹರಸಾಹಸ ನಡೆಸಿದರು.

ಯುಗಾದಿ ಮುಗಿದ ನಂತರ ನೌಕರರು ಕೆಲಸಕ್ಕೆ ಹಾಜರಾಗಬೇಕು, ಒಂದು ವೇಳೆ ತಪ್ಪಿದ್ದಲ್ಲಿ, ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಅಂತರ ನಿಗಮ ವರ್ಗಾವಣೆ ಆದೇಶವನ್ನು ರದ್ಧುಗೊಳಿಸುವುದಾಗಿ ತಿಳಿಸಿದೆ. ಆದರೆ ಇಂತರ ವರ್ಗಾವಣೆಗಳಿಗೆ ಆದ್ಯತೆಯಿಲ್ಲ ಎಂದು ಮೂಲಗಳು ತಿಳಿಸಿವೆ. 

ಆದರೆ 2012 ರಲ್ಲಿ ಸರ್ಕಾರ ನೌಕರರನ್ನು ವರ್ಗಾವಣೆ ಮಾಡಲು ಒಂದು ಬಾರಿ ಒಪ್ಪಂದ ಮಾಡಿಕೊಂಡು ಸರ್ಕಾರವು ಒಂದು ಆದೇಶವನ್ನು ಹೊರಡಿಸಿತು, ವಾರ್ಷಿಕವಾಗಿ, ಶೇಕಡಾ 2 ರಷ್ಟು ಉದ್ಯೋಗಿಗಳನ್ನು ಅಂತರ ನಿಗಮ ವರ್ಗಾವಣೆಗಳಿಗೆ ಪರಿಗಣಿಸಬಹುದಾಗಿದೆ.

ಈ ನಡುವೆ ಬಿಎಂಟಿಸಿ 2,237 ಉದ್ಯೋಗಿಗಳನ್ನು ಏಪ್ರಿಲ್ 15 ರೊಳಗೆ ಕೆಲಸಕ್ಕೆ ಮರಳುವಂತೆ ಆದೇಶಿಸಿದೆ. ಹಾಗೂ ಪ್ರತಿಭಟನೆಯಲ್ಲಿ ಪಾಲ್ಗೋಂಡಿದ್ದ 51 ರಿಂದ 55 ವರ್ಷದೊಳಗಿನವರಿಗೆ ನಿವೃತ್ತಿ ಆದೇಶಗಳನ್ನು ನೀಡಿದ. ಜೊತೆಗೆ 260 ಉದ್ಯೋಗಿಗಳನ್ನು ಅಮಾನತುಗೊಳಿಸಿದೆ. 

ಸೋಮವಾರ ಸಂಜೆ 6 ಗಂಟೆಯ ಹೊತ್ತಿಗೆ 1,588 ಕೆಎಸ್‌ಆರ್‌ಟಿಸಿ ಬಸ್‌ಗಳು, 446 ಬಿಎಂಟಿಸಿ, 700 ಎನ್‌ಕೆಎಸ್‌ಆರ್‌ಟಿಸಿ ಮತ್ತು 495 ಎನ್‌ಡಬ್ಲ್ಯೂಕೆಎಸ್‌ಆರ್‌ಟಿ ಬಸ್‌ಗಳು ಕಾರ್ಯಾಚರಣೆ ಆರಂಭಿಸಿದವು. 

ಸಾರಿಗೆ ನಿಗಮ ಸಂಘಗಳ ಸದಸ್ಯರು ಸೋಮವಾರ ಬೆಳಿಗ್ಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಪ್ರತಿಭಟನೆಗೆ ತಮ್ಮ ಬೆಂಬಲ ಕೋರಿದ್ದಾರೆ. ನಾಲ್ಕು ಸಾರಿಗೆ ನಿಗಮಗಳು ಮತ್ತೆ ಕರ್ತವ್ಯಕ್ಕೆ ವರದಿ ಮಾಡಿದ ಕೆಲವು ನೌಕರರ ವೇತನವನ್ನು ಬಿಡುಗಡೆ ಮಾಡಲಾಗಿದೆ.

ಕೆಎಸ್‌ಆರ್‌ಟಿಸಿಯ 4,256 ಚಾಲಕರು ಮತ್ತು ಕಂಡಕ್ಟರ್‌ಗಳು, ಬಿಎಂಟಿಸಿಯ 960, ಎನ್‌ಡಬ್ಲ್ಯೂಕೆಆರ್‌ಟಿಸಿಯ 1,837 ಮತ್ತು ಎನ್‌ಇಕೆಆರ್‌ಟಿಸಿಯ 3,377 ಪಾವತಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ನೌಕರರು ಕೆಲಸಕ್ಕೆ ಮರಳುತ್ತಿದ್ದಂತೆ, ಅವರು ಮುಷ್ಕರದಲ್ಲಿದ್ದ ದಿನಗಳ ಸಂಖ್ಯೆಯನ್ನು ಕಡಿತಗೊಳಿಸಿದ ನಂತರ ಅವರ ಸಂಬಳವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೇತನ ಪಾವತಿಗಳಲ್ಲಿ ಏಕರೂಪತೆ ಇರಬೇಕು. ಸರ್ಕಾರ ಕಠಿಣವಾಗಿ ಮುಂದುವರಿಯುತ್ತಿದ್ದರೆ, ನಾವೂ ಬಗ್ಗುವುದಿಲ್ಲ. ಖಾಸಗಿ ಬಸ್ ಮತ್ತು ವ್ಯಾನ್ ಚಾಲಕರು ಚಾಮರಾಜನಗರ ಬಳಿ ಕೆಎಸ್‌ಆರ್‌ಟಿಸಿ ಅಥವಾ ಎನ್‌ಡಬ್ಲ್ಯೂಕೆಆರ್‌ಟಿಸಿ ಬಸ್‌ಗಳನ್ನು ಓಡಿಸುತ್ತಿದ್ದು, ಅನೇಕರ ಪ್ರಾಣಕ್ಕೆ ಅಪಾಯವಿದೆ ಎಂದು ಪ್ರತಿಭಟನಾ ನಿರತ ಸಾರಿಗೆ ಸಿಬ್ಬಂದಿ ಆರೋಪಿಸಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com