ತುಳಸಿದಾಸ್ ಆಸ್ಪತ್ರೆ ಕೋವಿಡ್ ಚಿಕಿತ್ಸೆಗೆ ಪರಿವರ್ತನೆ; ಸಿದ್ಧತೆ ಪರಿಶೀಲಿಸಿದ ಎಸ್.ಟಿ. ಸೋಮಶೇಖರ್

ಮೈಸೂರಿನ ತುಳಸೀದಾಸ್ ಆಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯಾಗಿ ಪರಿವರ್ತಿಸಲಾಗುವುದು ಎಂದು ಮೈಸೂರು ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.
ಸಚಿವ ಎಸ್ ಟಿ ಸೋಮಶೇಖರ್
ಸಚಿವ ಎಸ್ ಟಿ ಸೋಮಶೇಖರ್

ಮೈಸೂರು: ಮೈಸೂರಿನ ತುಳಸೀದಾಸ್ ಆಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯಾಗಿ ಪರಿವರ್ತಿಸಲಾಗುವುದು ಎಂದು ಮೈಸೂರು ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.

ಪ್ರಸ್ತುತ ನವೀಕರಣಗೊಂಡಿರುವ ತುಳಸಿದಾಸ್ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗುತ್ತಿದ್ದು, ಈ ಕುರಿತು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಮಾಹಿತಿ ನೀಡಿದರು. ಇಂದು ಆಸ್ಪತ್ರೆಗೆ ತೆರಳಿ ಸಿದ್ಧತೆ ಪರಿಶೀಲಿಸಿದ ಅವರು, ಆಸ್ಪತ್ರೆ  ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, 'ಮುಡಾ ಅಧ್ಯಕ್ಷರಾದ ಹೆಚ್.ವಿ.ರಾಜೀವ್ ಅವರ ನೇತೃತ್ವದಲ್ಲಿ ತುಳಸಿದಾಸ್ ಆಸ್ಪತ್ರೆ ಮತ್ತು ಕಾವೇರಿ ಆಸ್ಪತ್ರೆಯ ಸಹಯೋಗದಲ್ಲಿ ತುಳಸಿದಾಸ್ ಆಸ್ಪತ್ರೆಯನ್ನು 100 ಆಕ್ಸಿಜನೇಟೆಡ್ ಹಾಸಿಗೆ ಸೌಲಭ್ಯದ ಆಸ್ಪತ್ರೆಯಾಗಿ ಮಾಡಲಾಗುತ್ತಿದೆ. ಹಗಲು ರಾತ್ರಿ ಸಿದ್ಧತೆ ಕಾರ್ಯ  ನಡೆಯುತ್ತಿದ್ದು, ಶೀಘ್ರದಲ್ಲೇ ಕಾರ್ಯಾರಂಭಿಸಲಿದೆ ಎಂದರು. ಅಂತೆಯೇ ಬೇಕಾದ ಸಾಮಗ್ರಿ ಸಲಕರಣೆಗಳು ಈಗಾಗಲೇ ಬಂದಿವೆ. ಶೇ. 50 ರಷ್ಟು ಸೌಲಭ್ಯವನ್ನು ಮುಡಾ ಒದಗಿಸಲಿದೆ. ಸರ್ಕಾರದಿಂದ ಬೇಕಾದ ಅನುಮೋದನೆ ಕೊಡಿಸಲಾಗುವುದು. ಸ್ವಲ್ಪ ದಿನಗಳಲ್ಲೇ ಸೇವೆಗೆ ಈ ಆಸ್ಪತ್ರೆ ಲಭ್ಯವಾಗಲಿದೆ ಎಂದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com