18 ವರ್ಷ ಮೇಲ್ಪಟ್ಟವರಿಗೆ ರಾಜ್ಯದಲ್ಲಿ ಕೋವಿಡ್ ಲಸಿಕೆ ಮೇ ಮಧ್ಯಭಾಗದಿಂದಷ್ಟೇ ಲಭ್ಯ: ಸರ್ಕಾರದ ಮೂಲಗಳಿಂದ ಮಾಹಿತಿ 

18ರಿಂದ 44 ವರ್ಷದೊಳಗಿನವರಿಗೆ ಕೋವಿಡ್ ಲಸಿಕೆ ಮೇ 1ರಿಂದ ಲಭ್ಯವಾಗುತ್ತದೆ ಎಂದು ಈಗಾಗಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಲಕ್ಷಾಂತರ ಮಂದಿ ಕೋವಿನ್ ಆಪ್ ತೆರೆದ ತಕ್ಷಣವೇ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ಕೊರೋನಾದಿಂದ ಮೃತಪಟ್ಟವರನ್ನು ಚಿತಾಗಾರದಲ್ಲಿ ಸುಡಲು ಆಂಬ್ಯುಲೆನ್ಸ್ ಗಳು ಸಾಲಿನಲ್ಲಿ ನಿಂತಿರುವ ದೃಶ್ಯ ಬೆಂಗಳೂರಿನಲ್ಲಿ ಪೀಣ್ಯ ಚಿತಾಗಾರ ಸಮೀಪ ಕಂಡುಬಂದದ್ದು ಹೀಗೆ
ಕೊರೋನಾದಿಂದ ಮೃತಪಟ್ಟವರನ್ನು ಚಿತಾಗಾರದಲ್ಲಿ ಸುಡಲು ಆಂಬ್ಯುಲೆನ್ಸ್ ಗಳು ಸಾಲಿನಲ್ಲಿ ನಿಂತಿರುವ ದೃಶ್ಯ ಬೆಂಗಳೂರಿನಲ್ಲಿ ಪೀಣ್ಯ ಚಿತಾಗಾರ ಸಮೀಪ ಕಂಡುಬಂದದ್ದು ಹೀಗೆ

ಬೆಂಗಳೂರು: 18ರಿಂದ 44 ವರ್ಷದೊಳಗಿನವರಿಗೆ ಕೋವಿಡ್ ಲಸಿಕೆ ಮೇ 1ರಿಂದ ಲಭ್ಯವಾಗುತ್ತದೆ ಎಂದು ಈಗಾಗಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಲಕ್ಷಾಂತರ ಮಂದಿ ಕೋವಿನ್ ಆಪ್ ತೆರೆದ ತಕ್ಷಣವೇ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

ಈ ಕೊರೋನಾ ಸಂಕಷ್ಟ ಕಾಲದಲ್ಲಿ, ಅಪಾರ ಸಾವು-ನೋವುಗಳಾಗುತ್ತಿರುವಾಗ ಲಸಿಕೆ ಹಾಕಿಸಿಕೊಂಡು ಸ್ವಲ್ಪ ಬಚಾವಾಗೋಣ ಎಂಬ ಆಲೋಚನೆ ಎಲ್ಲರದ್ದಾಗಿರುತ್ತದೆ.ಆದರೆ ಕರ್ನಾಟಕದಲ್ಲಿ ಈ ವಯಸ್ಸಿನ ಗುಂಪಿನವರಿಗೆ ಮೇ ಎರಡನೇ ವಾರದಿಂದ ಅಥವಾ ಮೇ 3 ಮೂರನೇ ವಾರದ ಆರಂಭದಲ್ಲಿ ಲಸಿಕೆ ನೀಡುವ ಅಭಿಯಾನ ಆರಂಭವಾಗುತ್ತದಷ್ಟೆ ಎಂದು ಹೇಳಲಾಗುತ್ತಿದೆ.

ಲಸಿಕೆಗೆ ಹಲವು ರಾಜ್ಯಗಳಲ್ಲಿ ಈಗಾಗಲೇ ಸಾಕಷ್ಟು ಬೇಡಿಕೆಯಿದೆ, ಆರ್ಡರ್ ಗಳು ಕೂಡ ಸಾಕಷ್ಟು ಬರುತ್ತಿವೆ. ಕೇಂದ್ರ ಸರ್ಕಾರಕ್ಕೆ ಮಾಡಿಕೊಂಡ ಪೂರ್ವ ಬದ್ಧತೆಯಂತೆ ಲಸಿಕೆ ಉತ್ಪಾದಕರು ಲಸಿಕೆಗಳ ಮೊದಲ ಭಾಗವನ್ನು ಕರ್ನಾಟಕಕ್ಕೆ ಮೇ ಮಧ್ಯಭಾಗದಲ್ಲಿ ಪೂರೈಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ನಿನ್ನೆ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ನಾಲ್ಕನೇ ಹಂತದ ಕೊರೋನಾ ಲಸಿಕೆ ಅಭಿಯಾನವನ್ನು ಹಂತ ಹಂತವಾಗಿ ಕೈಗೊಳ್ಳಲಾಗುತ್ತಿದೆ. ಈಗಾಗಲೇ ನೋಂದಾಯಿಸಿಕೊಂಡಿರುವ ಕೋಟ್ಯಂತರ ಮಂದಿ ತಮಗೆ ಲಸಿಕೆಯ ದಿನಾಂಕ ಮತ್ತು ಕೇಂದ್ರಗಳು ಕೋವಿನ್ ಆಪ್ ನಲ್ಲಿ ತೋರಿಸುತ್ತಿಲ್ಲ ಎಂದು ದೂರುಗಳು ಬಂದಿದ್ದು, ಲಸಿಕೆಗಳು ಸಾಕಷ್ಟು ಬಂದ ನಂತರ ಅಭಿಯಾನ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ ಒಂದು ಕೋಟಿ ಲಸಿಕೆ ಡೋಸ್ ಗಳನ್ನು ಸಂಗ್ರಹಿಸುತ್ತಿದೆ. ಇನ್ನೂ ಹೆಚ್ಚುವರಿ ಒಂದು ಕೋಟಿ ಡೋಸ್ ಗಳನ್ನು ಸಂಗ್ರಹಿಸಲು ಆರ್ಡರ್ ಮಾಡಲಾಗಿದೆ. ಲಸಿಕೆ ಅಭಿಯಾನದ ನಾಲ್ಕನೇ ಹಂತವನ್ನು ಹಂತ ಹಂತವಾಗಿ ಕೈಗೊಳ್ಳಲಾಗುತ್ತದೆ. ಹೆಚ್ಚುತ್ತಿರುವ ಬೇಡಿಕೆಗಳನ್ನು ಈಡೇರಿಸಲು ಫಾರ್ಮ ಕಂಪೆನಿಗಳು ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳುತ್ತಿವೆ. ಮೂರನೇ ಲಸಿಕೆ ಆಯ್ಕೆಯನ್ನು ಸಹ ಪರಿಚಯಿಸಲಾಗುವುದು. ಈ ಪರಿಸ್ಥಿತಿಗಳ ಮಧ್ಯೆ, ಲಸಿಕೆಗಳ ಲಭ್ಯತೆ ನೋಡಿಕೊಂಡು ಅಭಿಯಾನ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಲಸಿಕೆ ಅಭಿಯಾನ ಕ್ರಮಬದ್ಧವಾಗಿ, ಶಿಸ್ತುಬದ್ಧವಾಗಿ ಮತ್ತು ಸರಾಗವಾಗಿ ಜಾರಿಗೆ ಬರಲು ಯೋಜನೆ ರೂಪಿಸುತ್ತಿದ್ದೇವೆ ಎಂದ ಮುಖ್ಯಮಂತ್ರಿಗಳು ಈಗಾಗಲೇ ಆರ್ಡರ್ ಕೊಟ್ಟಿರುವ ಲಸಿಕೆಗಳು ಯಾವಾಗ ಬರುತ್ತವೆ ಎಂದು ಹೇಳಲಿಲ್ಲ. ಮೇ ಎರಡನೇ ವಾರದಲ್ಲಿ ಸೆರಂ ಇನ್ಸ್ ಟಿಟ್ಯೂಟ್ ನಿಂದ ಕೋವಿಶೀಲ್ಡ್ ಒಂದು ಕೋಟಿ ಲಸಿಕೆಗಳು ಕರ್ನಾಟಕಕ್ಕೆ ಬರಬಹುದು ಎಂಬ ಮಾಹಿತಿ ಸರ್ಕಾರ ಮೂಲದಿಂದ ಸಿಕ್ಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com