ಮಡಿಕೇರಿ: ಬಾಲ್ಯ ವಿವಾಹದ ನಂತರ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದ ಮಹಿಳೆಯೊಬ್ಬರು 18 ವರ್ಷಗಳ ನಂತರ ತನ್ನ ಮಗನೊಂದಿಗೆ ಎಸ್ಎಸ್ಎಲ್ ಸಿ ಪರೀಕ್ಷೆ ಬರೆದು ಇಬ್ಬರೂ ಒಟ್ಟಿಗೆ ಪಾಸ್ ಆಗಿದ್ದಾರೆ.
ಕೊಡಗಿನ ಕೈಕೇರಿ ಗ್ರಾಮದ ನಿವಾಸಿಯಾದ ಪಡಿಕಲ್ ಕುಸುಮಾ ಚಂದ್ರಶೇಖರ್(31) ಅವರು ಸಮಾಜ ಸೇವಕಿ ಎಂದು ಗುರುತಿಸಿಕೊಂಡಿದ್ದಾರೆ.
ಕುಸುಮಾ ಅವರು ಟಿ ಶೆಟ್ಟೇಗೇರಿಯ ಮಾಯನಮಾಡ ಮಂದಣ್ಣ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಕುಸುಮಾ ಅವರು 18 ವರ್ಷಗಳ ಹಿಂದೆ 9ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣಳಾದ ನಂತರ ಮದುವೆಯಾಗಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದರು.
ಆದಾಗ್ಯೂ, ಕುಸುಮಾ ಈಗ ತನ್ನ ಮಗನ ಜೊತೆಯಲ್ಲಿ ಈ ವರ್ಷ ಪರೀಕ್ಷೆ ಬರೆದಿದ್ದು, ಉತ್ತೀರ್ಣರಾಗಿದ್ದಾರೆ. ಕುಸುಮಾ ಅವರು ತಮ್ಮ ಮೊದಲ ಪ್ರಯತ್ನದಲ್ಲಿ ಗಣಿತದಲ್ಲಿ ಅನುತ್ತೀರ್ಣನಾದ ನಂತರ ಎರಡನೇ ಬಾರಿ ಪರೀಕ್ಷೆ ಬರೆದು ತನ್ನ ಮಗ ಪಿ ಗೌತಮ್ ಜೊತೆಗೆ ಎಸ್ಎಸ್ಎಲ್ ಸಿ ಪಾಸ್ ಮಾಡಿದ್ದಾರೆ.
ತಾಯಿ ಮತ್ತು ಮಗ ಇಬ್ಬರೂ ಪರೀಕ್ಷೆಯಲ್ಲಿ ಕ್ರಮವಾಗಿ 267 ಮತ್ತು 294 ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ.
Advertisement