ಬೆಂಗಳೂರು: ದೇಶದಲ್ಲಿ ಅತಿ ಹೆಚ್ಚು ಕೋವಿಡ್-19 ಮಾದರಿ ಪರೀಕ್ಷೆಗಳನ್ನು ನಡೆಸುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕ 3ನೇ ಸ್ಥಾನದಲ್ಲಿದೆ.
ಮಾದರಿ ಪರೀಕ್ಷೆಗಳ ಸಂಖ್ಯೆ 4 ಕೋಟಿಯನ್ನು ತಲುಪಿದ್ದು ಸಾಂಕ್ರಾಮಿಕದ ವಿರುದ್ಧ ಮತ್ತೊಂದು ಮೈಲಿಗಲ್ಲು ಇದಾಗಿದೆ ಎಂದು ಡಾ.ಕೆ ಸುಧಾಕರ್ ಹೇಳಿದ್ದಾರೆ.
ರಾಜ್ಯದಲ್ಲಿ ನಡೆಸಲಾಗುವ ಸೋಂಕು ಪತ್ತೆ ಪರೀಕ್ಷೆಗಳ ಪೈಕಿ ಶೇ.80 ರಷ್ಟು ಪರೀಕ್ಷೆಗಳು ಆರ್ ಟಿ-ಪಿಸಿಆರ್ ಪರೀಕ್ಷೆಗಳಾಗಿವೆ ಹಾಗೂ ಕರ್ನಾಟಕ ದೇಶದಲ್ಲಿ ಅತಿ ಹೆಚ್ಚು ಪರೀಕ್ಷೆಗಳನ್ನು ನಡೆಸುತ್ತಿರುವ ಮೂರನೇ ರಾಜ್ಯವಾಗಿದೆ ಎಂದು ಸುಧಾಕರ್ ಹೇಳಿದ್ದಾರೆ.
ರಾಜ್ಯದಲ್ಲಿ 3,338 ಸ್ವಾಬ್ ಕಲೆಕ್ಷನ್ ಕೇಂದ್ರಗಳಿದ್ದು, 252 ಕೋವಿಡ್-19 ಟೆಸ್ಟಿಂಗ್ ಲ್ಯಾಬ್ ಗಳಿವೆ. ಶೇ.81 ರಷ್ಟು ಪರೀಕ್ಷೆಗಳು ಆರ್ ಟಿಪಿಸಿ ಆರ್ ಪರೀಕ್ಷೆಗಳಾಗಿವೆ ಎಂದು ಸಚಿವರು ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ. ಮಂಗಳವಾರ ಒಂದೇ ದಿನ 1,26,400 ಪರೀಕ್ಷೆಗಳನ್ನು ನಡೆಸಲಾಗಿದೆ.
Advertisement