ನವಭಾರತದ ಶಿಲ್ಪಿ ಸರ್ ಎಂ ವಿಶ್ವೇಶ್ವರಯ್ಯ ಕೊಡುಗೆ ಸ್ಮರಣೀಯ: ಉಪರಾಷ್ಟ್ರಪತಿ ವೆಂಕಯ್ಯನಾಯ್ಡು

ರಾಷ್ಟ್ರ ನಿರ್ಮಾಣದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅಗ್ರಗಣ್ಯರಾಗಿದ್ದು, ಅವರ ಅಗಾಧ ಪರಿಶ್ರಮ ಮತ್ತು ದೂರದೃಷ್ಟಿಯಿಂದ ಸಮಾಜಮುಖಿ ಯೋಜನೆಗಳು ನಿರ್ಮಾಣಗೊಂಡಿವೆ. ಹೊಸ ಅನ್ವೇಷಣೆಯ ಹರಿಕಾರರಾಗಿದ್ದ ವಿಶ್ವೇಶ್ವರಯ್ಯ ದೇಶವನ್ನು ಕೈಗಾರಿಕೀಕರಣಗೊಳಿಸುವ ಮೂಲಕ ನವಭಾರತ ನಿರ್ಮಾಣದ ಶಿಲ್ಪಿಯಾಗಿದ್ದರು.
ವೆಂಕಯ್ಯ ನಾಯ್ಡು
ವೆಂಕಯ್ಯ ನಾಯ್ಡು

ಬೆಂಗಳೂರು: ರಾಷ್ಟ್ರ ನಿರ್ಮಾಣದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅಗ್ರಗಣ್ಯರಾಗಿದ್ದು, ಅವರ ಅಗಾಧ ಪರಿಶ್ರಮ ಮತ್ತು ದೂರದೃಷ್ಟಿಯಿಂದ ಸಮಾಜಮುಖಿ ಯೋಜನೆಗಳು ನಿರ್ಮಾಣಗೊಂಡಿವೆ. ಹೊಸ ಅನ್ವೇಷಣೆಯ ಹರಿಕಾರರಾಗಿದ್ದ ವಿಶ್ವೇಶ್ವರಯ್ಯ ದೇಶವನ್ನು ಕೈಗಾರಿಕೀಕರಣಗೊಳಿಸುವ ಮೂಲಕ ನವಭಾರತ ನಿರ್ಮಾಣದ ಶಿಲ್ಪಿಯಾಗಿದ್ದರು ಎಂದು ಗೌರವಾನ್ವಿತ ಉಪರಾಷ್ಟ್ರಪತಿ ಶ್ರೀ ಎಂ ವೆಂಕಯ್ಯ ನಾಯ್ಡು ಅವರು ಹೇಳಿದರು. 

ಬುಧವಾರ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ವತಿಯಿಂದ ವಿಧಾನಸೌಧದ ಬಾಂಕ್ವೆಟ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸರ್ ಎಂ ವಿ ಸ್ಮಾರಕ ಪ್ರಶಸ್ತಿ ಸಮಾರಂಭದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಎಂ ಎಸ್ ರಾಮಯ್ಯ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ ಎಂ ಆರ್ ಜಯರಾಂ ಅವರಿಗೆ ಸರ್ ಎಂ ವಿ ಸ್ಮಾರಕ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಿದರು. 

ನಂತರ ಮಾತನಾಡಿದ ಅವರು. ಭಾರತದ ಶ್ರೇಷ್ಟ ಪುತ್ರರಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಒಬ್ಬರು. ಇಡೀ ಜೀವರಾಶಿಗಳನ್ನು ಕಾಪಾಡುವ ಜಲಸಂಪನ್ಮೂಲ ರಕ್ಷಣೆಯಲ್ಲಿ ಮುಖ್ಯ ಪಾತ್ರವಹಿಸಿರಿರುವ ಸರ್ ಎಂ ವಿ, ಆಧುನಿಕ ಭಾರತದ ಪ್ರತಿಭಾನ್ವಿತ ವ್ಯಕ್ತಿ ಹಾಗೂ ದೇಶದಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸುಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.

ಇಂತಹ ಮಹಾನ್ ನಾಯಕನ ತತ್ವಾದರ್ಶಗಳನ್ನು ಇಂದಿನ ಯುವಪೀಳಿಗೆ ಅನುಸರಿಸಿ, ಇಂದಿನ ಯುವಜನತೆ ನೂತನ ಆವಿಷ್ಕಾರ ಹೊಸ ಚಿಂತನೆಗಳೊಂದಿಗೆ ಆತ್ಮ ನಿರ್ಭರ ಭಾರತ ಸಾಕಾರಕ್ಕೆ ಕೊಡುಗೆ ನೀಡಬೇಕು ಎಂದ ಅವರು, ದೇಶದ ಆರ್ಥಿಕ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ ಎಂ ಎಸ್ ರಾಮಯ್ಯ ಸಮೂಹ ಸಂಸ್ಥೆಗಳ ಅಧ್ಯಕ್ಷರಿಗೆ ಜಯರಾಂ ಅವರಿಗೆ ಭಾರತ ರತ್ನ ಸರ್ ಎಂ ವಿ ಸ್ಮಾರಕ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯಾಗಿದೆ ಎಂದರು.

ಘನತೆವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಉದ್ಯೋಗ, ವ್ಯಾಪಾರ ಕ್ಷೇತ್ರದಲ್ಲಿ ಎಫ್ ಕೆಸಿಸಿಐ ಸಾಧನೆ ಅನ್ಯನವಾಗಿದೆ. ಉದ್ಯೋಗ ಸೃಷ್ಟಿ ಆರ್ಥಿಕ ಕೊಡುಗೆಯಲ್ಲಿ ಮುಂಚೂಣಿಯಲ್ಲಿರುವ ಮಾಹನ್ ಸಂಸ್ಥೆಯೊಂದು ಸರ್ ಎಂ ವಿಶ್ವೇಶ್ವರಯ್ಯ ನವರಂತಹ ಶ್ರೇಷ್ಠ ವ್ಯಕ್ತಿಯ ಹೆಸರಿನಲ್ಲಿ ಪ್ರಶಸ್ತಿ ನೀಡುವುದರ ಮೂಲಕ ಅವರ ಆದರ್ಶಗಳನ್ನು ಪಾಲಿಸುವುದರೊಂದಿಗೆ ಸಮಾಜಕ್ಕಾಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಮೈಸೂರಿನಲ್ಲಿ ಕೃಷ್ಟರಾಜಸಾಗರ ಜಲಾಶಯ ನಿರ್ಮಿಸಿ, ಜಲಸಂಪನ್ಮೂಲ ಸಂರಕ್ಷಿಸುವಂತೆ ದೇಶದ ಅನೇಕ ರಾಜ್ಯಗಳಲ್ಲಿ ಅವರು ಇದೇ ರೀತಿಯ ಯೋಜನೆಗಳನ್ನು ಸಾಕಾರಗೊಳಿಸಿದ್ದಾರೆ. ಸರ್ವಾಗಿಂಣ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಪಾರ. ಇಂತಹ ಆದರ್ಶ ನಾಯಕ ಕನಸನ್ನು ಸಾಕಾರಗೊಳಿಸುವಲ್ಲಿ ಎಫ್ ಕೆಸಿಸಿಐ ಅನೇಕ ಕಾರ್ಯಕ್ರಮಗಳು, ವಿಚಾರಸಂಕಿರಣ ಮತ್ತು ಕಾರ್ಯಗಾರಗಳನ್ನು ಹಮ್ಮಿಕೊಳ್ಳುತ್ತಿರುವುದು ಪ್ರಶಂಸನೀಯ ಎಂದರು.

ಎಂ ಎಶ್ ರಾಮಯ್ಯ ಸಂಸ್ಥೆ ಅಧ್ಯಕ್ಷರಾದ ಡಾ.ಎಂ ಆರ್ ಜಯರಾಮ್ ಅವರು ಶಿಕ್ಷಣ, ಆರೋಗ್ಯ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜಮುಖಿ ಕಾರ್ಯ ಕೈಗೊಂಡಿದ್ದಾರೆ. ಜಯರಾಂ ಅವರಿಗೆ ಭಾರತ ರತ್ನ ಸರ್ ಎಂ ವಿ ಸ್ಮಾರಕ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದ ಅವರು, ಎಫ್ ಕೆಸಿಸಿ ಕರ್ನಾಟದ ಆರ್ಥಿಕ ಅಭಿವೃದ್ಧಿಗೆ ಮತ್ತಷ್ಟು ತನ್ನದೇ ಆದ ಕೊಡುಗೆ ನೀಡಲಿ ಎಂದು ಆಶೀಸುತ್ತೇನೆಂದರು. 

ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು, ಕರ್ನಾಟಕದಲ್ಲಿ ಕೈಗಾರಿಕಾ ಪ್ರಗತಿಗೆ ಮೂಲಕಾರಣ ಸರ್ ಎಂ ವಿಶ್ವೇಶ್ವರಯ್ಯ ನವರು. ಬ್ಯಾಂಕಿಂಗ್ ಹಾಗೂ ಇಂಜಿನಿಯರಿಂಗ್ ಸೇರಿದಂತೆ ಇನ್ನಿತರ ವಲಯಗಳಲ್ಲೂ ಅವರ ಕೊಡುಗೆ ಅಪಾರ. ಜ್ಞಾನ ವಿಜ್ಞಾನ ಐಟಿ ಬಿಟಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನ ಘನತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿಶ್ವೇಶ್ವರಯ್ಯನವರಂತಹ ವ್ಯಕ್ತಿಗಳ ಆದರ್ಶ ಇಂದಿನ ಸಮಾಜಕ್ಕೆ ಅಗತ್ಯವಾಗಿದೆ. ಮುಂಬರುವ ದಿನಗಳಲ್ಲಿ ಕರನಾಟಕವೂ ಕೈಗಾರಿಕಾ ನಕ್ಷೆಯಲ್ಲಿ ಮೊದಲ ಸ್ಥಾನದಲ್ಲಿದ್ದು, ಅದಕ್ಕಾಗಿ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು.

ಪ್ರಸ್ತುತ ದಿನಗಳಲ್ಲಿ ಒಬ್ಬ ವಿಶ್ವೇಶ್ವರಯ್ಯರವರ ಅಗತ್ಯತೆ ಇದೆ. ಮತ್ತೇ ಸರ್ ಎಂ ವಿ ಹುಟ್ಟೀ ಬರಬೇಕು. ಈಗೀರುವ ಯುವ ಇಂಜಿನಿಯರ್ ಗಳಲ್ಲಿ ಸರ್ ಎಂ ವಿಶ್ವೇಶ್ವರಯ್ಯನವರನ್ನು ಕಾಣುವಂತಾಗಬೇಕು. ಬೆಂಗಳೂರು ಐಟಿ ಬಿಟಿ ನಗರವಾಗಿದೆ. ತಾಂತ್ರಿಕ, ವೈಜ್ಞಾನಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿಯಾಗಿದೆ. ಇಂತಹ ನಗರದಲ್ಲಿ ಪ್ರತಿಯೊಬ್ಬ ಪ್ರತಿಭಾವಂತನಿಗೆ ತನ್ನ ಪ್ರತಿಭೆ ತೋರಿಸುವ ಅವಕಾಶವನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು. 

ಸಮಾರಂಭದಲ್ಲಿ ಸಂಸದರಾದ ಪಿ ಸಿ ಮೋಹನ್, ಎಪ್ ಕೆಸಿಸಿಐ ಅಧ್ಯಕ್ಷ ಪರಿಕಲ್ ಎಂ ಸುಂದರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com