ಶಸ್ತ್ರಾಸ್ತ್ರ ದುರ್ಬಳಕೆ ಪ್ರಕರಣ ಹೆಚ್ಚಳ: ಪರವಾನಗಿ ಪ್ರಕ್ರಿಯೆ ಕಠಿಣಗೊಳಿಸಿದ ಮಂಗಳೂರು ನಗರ ಪೊಲೀಸರು

ಕೃಷಿ ಉದ್ದೇಶಗಳಿಗೆಂದು ಕೆಲವರಿಗೆ ಪರವಾನಗಿ ನೀಡಲಾಗಿತ್ತು. ಅವರಲ್ಲಿ ಕೆಲವರು ಬೇಟೆ ಮತ್ತು ಡಕಾಯಿತಿ ಕೃತ್ಯಗಳಿಗೆ ಶಸ್ತ್ರಾಸ್ತ್ರ ಬಳಕೆ ಮಾಡಿದ್ದು ಕಂಡುಬಂಡಿತ್ತು.
ಇತ್ತೀಚಿಗೆ ಮೂಡಬಿದ್ರೆಯಲ್ಲಿ ವಶಪಡಿಸಿಕೊಳ್ಳಲಾದ ಅಕ್ರಮ ಶಸ್ತ್ರಾಸ್ತ್ರಗಳನ್ನು ಪರಿಶೀಲಿಸುತ್ತಿರುವ ಆಯುಕ್ತ ಎನ್ ಶಶಿ ಕುಮಾರ್ ಮತ್ತು ಡಿಸಿಪಿ ಹರಿರಾಂ ಶಂಕರ್
ಇತ್ತೀಚಿಗೆ ಮೂಡಬಿದ್ರೆಯಲ್ಲಿ ವಶಪಡಿಸಿಕೊಳ್ಳಲಾದ ಅಕ್ರಮ ಶಸ್ತ್ರಾಸ್ತ್ರಗಳನ್ನು ಪರಿಶೀಲಿಸುತ್ತಿರುವ ಆಯುಕ್ತ ಎನ್ ಶಶಿ ಕುಮಾರ್ ಮತ್ತು ಡಿಸಿಪಿ ಹರಿರಾಂ ಶಂಕರ್
Updated on

ಮಂಗಳೂರು: ನಗರದಲ್ಲಿ ಶಸ್ತ್ರಾಸ್ತ್ರ ಇಟ್ಟುಕೊಳ್ಳಲು ಹೆಚ್ಚಿನ ಸಂಖ್ಯೆಯ ಅರ್ಜಿಗಳು ದಾಖಲಾಗಿದ್ದು, ಇದರಿಂದ ಸಂಸ್ಕೃತಿ ಹೆಚ್ಚಳವಾಗುತ್ತಿರುವುದಕ್ಕೆ ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ. ಪರವಾನಗಿ ಪಡೆದಿದ್ದವರು ಆಯುಧಗಳನ್ನು ದುರ್ಬಳಕೆ ಮಾಡಿದ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಪೊಲಿಸರು ಪರವಾನಗಿ ನೀಡಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. 

ಕಳೆದ 8 ತಿಂಗಳ ಅವಧಿಯಲ್ಲಿ ಶಸ್ತ್ರಾಸ್ತ್ರ ಪರವಾನಗಿ ಹೊಂದಿದ್ದವರು ಅಕ್ರಮ ಉದ್ದೇಶಗಳಿಗೆ ಶಸ್ತ್ರಾಸ್ತ್ರ ಬಳಕೆ ಮಾಡಿದ ೫ ಪ್ರಕರಣಗಳು ದಾಖಲಾಗಿವೆ. ಕೃಷಿ ಉದ್ದೇಶಗಳಿಗೆಂದು ಕೆಲವರಿಗೆ ಪರವಾನಗಿ ನೀಡಲಾಗಿತ್ತು. ಅವರಲ್ಲಿ ಕೆಲವರು ಬೇಟೆ ಮತ್ತು ಡಕಾಯಿತಿ ಕೃತ್ಯಗಳಿಗೆ ಶಸ್ತ್ರಾಸ್ತ್ರ ಬಳಕೆ ಮಾಡಿದ್ದು ಕಂಡುಬಂಡಿತ್ತು.

ಇವೆಲ್ಲದರಿಂದಾಗಿ ಶಸ್ತ್ರಾಸ್ತ್ರ ಪರವಾನಗಿ ನೀಡಿಕೆ ಪ್ರಕ್ರಿಯೆಯನ್ನು ಕಠಿಣಗೊಳಿಸಿರುವುದಾಗಿ ಮಂಗಳೂರು ನಗರ ಉಪ ಆಯುಕ್ತರಾದ ಹರಿರಾಂ ಶಂಕರ್ ಹೇಳಿದ್ದಾರೆ. ಈ ವರ್ಷ ಒಟ್ಟು 23 ಮಂದಿ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಕೇವಲ 5 ಅರ್ಜಿದಾರರಿಗೆ ಮಾತ್ರ ಪರವಾನಗಿ ನೀಡಲಾಗಿದೆ ಎಂದವರು ಮಾಹಿತಿ ಹಂಚಿಕೊಂಡಿದ್ದಾರೆ.
ಎರಡು ಆಯುಧಗಳನ್ನು ಹೊಂದಿದ್ದವರಿಗೆ, ಹೆಚ್ಚುವರಿ ಆಯುಧವನ್ನು ಮಾರಾಟ ಮಾಡಲು ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com