ಸುಖಾ ಸುಮ್ಮನೆ ನನ್ನ ಹೆಸರು ಬಳಸಿದವರ ವಿರುದ್ಧ ಮಾನನಷ್ಟ ಮೊಕದ್ದಮೆ: ನಟ ಕೋಮಲ್

ಸೆಲೆಬ್ರಿಟಿ ಎನ್ನುವ ಕಾರಣಕ್ಕೆ ನನ್ನ ಹೆಸರನ್ನು ವಿನಾಕಾರಣ ಬಳಸಿಕೊಂಡು ಮಸಿ ಬಳೆಯುವ ಪ್ರಯತ್ನ ಮಾಡಲಾಗುತ್ತಿದ್ದು, ಅಂತಹವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆಂದು ನಟ ಕೋಮಲ್ ಅವರು ಎಚ್ಚರಿಸಿದ್ದಾರೆ. 
ನಟ ಕೋಮಲ್
ನಟ ಕೋಮಲ್

ಬೆಂಗಳೂರು: ಸೆಲೆಬ್ರಿಟಿ ಎನ್ನುವ ಕಾರಣಕ್ಕೆ ನನ್ನ ಹೆಸರನ್ನು ವಿನಾಕಾರಣ ಬಳಸಿಕೊಂಡು ಮಸಿ ಬಳೆಯುವ ಪ್ರಯತ್ನ ಮಾಡಲಾಗುತ್ತಿದ್ದು, ಅಂತಹವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆಂದು ನಟ ಕೋಮಲ್ ಅವರು ಎಚ್ಚರಿಸಿದ್ದಾರೆ. 

ತಮ್ಮ ವಿರುದ್ಧ ಕೇಳಿ ಬಂದಿರುವ ಗಂಭೀರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ನನ್ನ ಮೇಲೆ ಏನೇನು ಆರೋಪ ಬಂದಿದೆಯೋ ಅದನ್ನು ವಿಚಾರಣೆ ಮಾಡಲಿ. ನಾನು ತಪ್ಪಿತಸ್ಥ ಎಂದು ಸಾಬೀತಾದರೆ ಬೇಕಾದ್ದನ್ನು ಮಾಡಲಿ. ಸುಮ್ಮನೆ ನನ್ನ ಹೆಸರು ಬಳಸಿದರೆ ಅಂತಹವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆಂದು ಹೇಳಿದ್ದಾರೆ. 

ನಾನು ಟೆಂಡರ್ ತಗೊಂಡೇ ಇಲ್ಲ. ನನಗೂ ಅದಕ್ಕೂ ಸಂಬಂಧವಿಲ್ಲ. ನಾನು ಯಾವ ಸ್ವೆಟರ್ ವ್ಯವಹಾರವನ್ನೂ ಮಾಡಿಲ್ಲ. ಸೆಲೆಬ್ರಿಟಿ ಹೆಸರು ಹೇಳಿಕೊಂಡು ಪ್ರಚಾರ ಆಗುತ್ತೆ ಎಂದು ನಮ್ಮ ಹೆಸರನ್ನು ಬೇಕಾಬಿಟ್ಟಿ ಬಳಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬಿಬಿಎಂಪಿ ಪ್ರತಿವರ್ಷ ತನ್ನ ಪಾಲಿಕೆ ವ್ಯಾಪ್ತಿಯ ಮಕ್ಕಳಿಗೆ ಸ್ವೇಟರ್​ನ್ನು ವಿತರಿಸುತ್ತದೆ. ಈ ಸ್ವೆಟರ್​ ವಿತರಣೆಗೆ ಟೆಂಡರ್​ ಕರೆಯಲಾಗುತ್ತದೆ. ಈ ಟೆಂಡರ್​ ಅನ್ನು ನಟ ಕೋಮಲ್​ ಪಡೆದಿದ್ದಾರೆ. ಕಳೆದ ವರ್ಷ ಈ ಸ್ವೇಟರ್​ ಟೆಂಡರ್​ ಅನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೇ, ಇದಕ್ಕೆ ಸಂಬಂಧಿಸಿದಂತೆ ಹಣವನ್ನು ಕೂಡ ಬಿಡುಗಡೆ ಮಾಡಿಸಿಕೊಂಡಿದ್ದಾರೆ. ವಿಪರ್ಯಾಸ ಎಂದರೆ, ಕಳೆದ ವರ್ಷ ಶಾಲೆಗಳೆ ನಡೆದಿಲ್ಲ. ಆದರೂ ಕೂಡ ಸ್ವೇಟರ್​ ವಿತರಣೆ ಮಾಡಿದ್ದೇವೆ ಎಂದು ಹಣ ಬಿಡುಗಡೆ ಮಾಡಿಸಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಆರೋಪಿಸಿದೆ.

ಈ ಸಂಬಂಧ ನಿನ್ನೆ ಬಿಬಿಎಂಪಿ ಕೇಂದ್ರ ಕಚೇರಿ ಮುಂದೆ ಸ್ವೇಟರ್ ಹರಾಜು ಹಾಕುವ ಮೂಲಕ ಪ್ರತಿಭಟನೆ ನಡೆಸಿತು. ಕಮಿಷನರ್ ಕಚೇರಿ ಮುಂಭಾಗ ನೂರಾರು ಸ್ವೆಟರ್ ಗಳನ್ನು ಸುರಿದು ಒಂದು ಸ್ವೆಟರ್ ರೂ.50 ಬೆಲೆ ನಿಗದಿ ಮಾಡಿ ಹರಾಜು ಮಾಡಿ ಪ್ರತಿಭಟನೆ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com