
ತುಮಕೂರು: ತುಮಕೂರಿನ ಚೋಟಸಾಬರಪಾಳ್ಯದಲ್ಲಿ 30 ವರ್ಷದ ಮಹಿಳೆ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ 15 ಮಂದಿ ಸದಸ್ಯರ ತಂಡ ರಚಿಸಲಾಗಿದೆ.
ಕೇಂದ್ರ ವಲಯ ಐಜಿಪಿ ಎಂ.ಚಂದ್ರಶೇಖರ್ ಗುರುವಾರ ತುಮಕೂರಿಗೆ ಭೇಟಿ ನೀಡಿದ್ದರು. ಮಳೆಯ ಕಾರಣ ಘಟನೆ ನಡೆದ ಸ್ಥಳಕ್ಕೆ ಐಜಿಪಿ ಭೇಟಿ ನೀಡಲು ಸಾಧ್ಯವಾಗಲಿಲ್ಲ,
ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲವು ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಎಂದು ಮೂಲಗಳು ತಿಳಿಸಿವೆ.
ಹಿರೇಹಳ್ಳಿ ಸಮೀಪದ ಚೋಟಸಬಾರಪಾಳ್ಯದ ಗುಡ್ಡದಲ್ಲಿ ಮಹಿಳೆ ಕೊಲೆಯಾಗಿರುವುದು ಪತ್ತೆಯಾಗಿದೆ. ಆಕೆ ಮಂಗಳವಾರ ಸಂಜೆ ದನ ಮೇಯಿಸಲು ಗುಡ್ಡಕ್ಕೆ ಹೋಗಿದ್ದಳು.
ಆರೋಪಿಆಕೆಯ ‘ಮಂಗಳಸೂತ್ರ’ವನ್ನು ಕಿತ್ತುಕೊಂಡಿದ್ದ. ಪ್ರಕರಣವನ್ನು ಭೇದಿಸಲು ಡಿವೈಎಸ್ಪಿ ಎಚ್. ಶ್ರೀನಿವಾಸ್ ನೇತೃತ್ವದಲ್ಲಿ 15 ಸದಸ್ಯರ ತಂಡವನ್ನು ರಚಿಸಲಾಗಿದೆ ಎಂದು ಎಸ್ಪಿ ರಾಹುಲ್ ಕುಮಾರ್ ಶಹಾಪುರವಾರ್ಡ್ ತಿಳಿಸಿದ್ದಾರೆ.
Advertisement