ಕಾಲೇಜುಗಳಿಗೆ ಎನ್ಇಪಿ ಆಧಾರಿತ ಹೊಸ ಪಠ್ಯಕ್ರಮ ಸೆಪ್ಟೆಂಬರ್ ನಲ್ಲಿ ಬಿಡುಗಡೆ

ಮೊದಲ ವರ್ಷದ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಆ.23 ರಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿರುವ ಕರ್ನಾಟಕದಲ್ಲಿ ಕಾಲೇಜುಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಆಧಾರಿತ ಹೊಸ ಪಠ್ಯಕ್ರಮವನ್ನು ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗಲಿದೆ.
ವಿದ್ಯಾರ್ಥಿಗಳು, ಎನ್ಇಪಿ, (ಸಾಂಕೇತಿಕ ಚಿತ್ರ)
ವಿದ್ಯಾರ್ಥಿಗಳು, ಎನ್ಇಪಿ, (ಸಾಂಕೇತಿಕ ಚಿತ್ರ)
Updated on

ಬೆಂಗಳೂರು: ಮೊದಲ ವರ್ಷದ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಆ.23 ರಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿರುವ ಕರ್ನಾಟಕದಲ್ಲಿ ಕಾಲೇಜುಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಆಧಾರಿತ ಹೊಸ ಪಠ್ಯಕ್ರಮವನ್ನು ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗಲಿದೆ.

ಶಿಕ್ಷಣ ಇಲಾಖೆ ಈ ಹೊಸ ನೀತಿ ಅಡಿಯಲ್ಲಿ ಮಾದರಿಯ ಪಠ್ಯಕ್ರಮವನ್ನು ಸೆಪ್ಟೆಂಬರ್ ನಲ್ಲಿ ಜಾರಿಗೆ ತರಲು ಯೋಜನೆ ಹೊಂದಿದೆ.

ಈ ಬಗ್ಗೆ ಮಾತನಾಡಿರುವ ಉನ್ನತ ಶಿಕ್ಷಣ ವಿಭಾಗದ ಆಯುಕ್ತರಾದ ಪ್ರದೀಪ್ ಪಿ "ಮಾದರಿ ಪಠ್ಯಕ್ರಮದ ವಿನ್ಯಾಸ ರೂಪುಗೊಳ್ಳುತ್ತಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ" ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳ ಒಟ್ಟಾರೆ ವ್ಯಕ್ತಿತ್ವವನ್ನು ರೂಪಿಸಲು, ಪ್ರತಿ ವಿದ್ಯಾರ್ಥಿಯ ಸೃಜನಶೀಲ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಸಹಕಾರಿಯಾಗುವ, ಅಡಿಪಾಯ ಮತ್ತು ಉನ್ನತ ಮಟ್ಟದ ಸಾಮರ್ಥ್ಯಗಳು, ಮತ್ತು ಕೌಶಲ್ಯ ಮತ್ತು ಸಾಮರ್ಥ್ಯ ವರ್ಧನೆಗೆ ಸಹಕಾರಿಯಾಗುವ ಪಠ್ಯಕ್ರಮವನ್ನು ವಿನ್ಯಾಸಗೊಳಿಸುವುದಕ್ಕೆ ಶ್ರಮಿಸಲಾಗುತ್ತಿದೆ. ಇದಕ್ಕಾಗಿ ವಿವಿಧ ವಿಶ್ವವಿದ್ಯಾನಿಲಯಗಳ ವಿ.ಸಿಗಳು, ವಿಷಯ  ತಜ್ಞರನ್ನೊಳಗೊಂಡ ಸದಸ್ಯರನ್ನು ಹೊಂದಿದ 35 ಉಪಸಮಿತಿಗಳನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈಗಿನ ಪಠ್ಯಕ್ರಮದಿಂದ ಹೊಸ ಪಠ್ಯಕ್ರಮ ಶೇ.10-15 ರಷ್ಟು ಬೇರೆಯದ್ದಾಗಿರುತ್ತದೆ.

ಎನ್ಇಪಿ ಅಡಿಯಲ್ಲಿ ಪಠ್ಯಕ್ರಮ

ಕೌಶಲ್ಯ ಹಾಗೂ ಸಾಮರ್ಥ್ಯ ಕೋರ್ಸ್ ಗಳನ್ನು ರಚಿಸಲಾಗುತ್ತಿದ್ದು ಇವುಗಳನ್ನು ಪಠ್ಯ ಕ್ರಮಗಳೊಂದಿಗೆ ಸೇರಿಸಲಾಗುತ್ತದೆ. ಡಿಜಿಟಲ್ ಫ್ಲ್ಯುಯೆನ್ಸಿ, ಕೃತಕ ಬುದ್ಧಿಮತ್ತೆ (ಎಐ) ಸೈಬರ್ ಭದ್ರತೆ, ಹೊಸ ತಾಂತ್ರಿಕ ಬೆಳವಣಿಗೆಗಳು ಮತ್ತು ಆರ್ಥಿಕ ಸಾಕ್ಷರತೆ ಕೋರ್ಸ್ ಗಳು ಇವುಗಳ ಪೈಕಿ ಇರಲಿದೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದೇ ಮಾದರಿಯಲ್ಲಿ ನೀತಿಶಾಸ್ತ್ರ ಮತ್ತು ಮಾನವ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಕಡ್ಡಾಯಗೊಳಿಸಲಾಗುತ್ತಿದ್ದು, ಡ್ರಗ್ ಹಾಗೂ ಸಾಮಾಜಿಕ ಜಾಲತಾಣ ವ್ಯಸನ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಆರೋಗ್ಯ ಹಾಗೂ ಕ್ಷೇಮದ ಕೋರ್ಸ್ ಗಳು ಜೀವನದ ಜೀವನ ಕೌಶಲ್ಯಗಳನ್ನು ನೀಡಲಿವೆ.

"ಹೊಸ ನೀತಿಯಡೀ ರಚನೆಯಾಗುತ್ತಿರುವ ಹೊಸ ಪಠ್ಯಕ್ರಮದಲ್ಲಿ ಬಹುಭಾಷಾ ಪ್ರಾವೀಣ್ಯತೆಯನ್ನು ಉತ್ತೇಜಿಸಲಾಗುತ್ತದೆ ಹಾಗೂ ಪಠ್ಯಕ್ರಮದಲ್ಲಿ ಸ್ಥಳೀಯ ಸನ್ನಿವೇಶ ಮತ್ತು ವೈವಿಧ್ಯತೆಯನ್ನು ಪರಿಗಣಿಸಲಾಗುತ್ತದೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಪಠ್ಯಕ್ರಮವನ್ನು ರಾಷ್ಟ್ರೀಯ ಕೌಶಲ್ಯ ಅರ್ಹತೆ ಚೌಕಟ್ಟಿನ 5 ನೇ ಹಂತಕ್ಕೆ ಜೋಡಿಸಲಾಗುವುದು ಹಾಗೂ ಉದ್ಯೋಗ ಪಡೆಯುವುದಕ್ಕೆ ಅಗತ್ಯವಿರುವ ಎಲ್ಲಾ ಕೌಶ್ಯಗಳನ್ನೂ ವಿದ್ಯಾರ್ಥಿಗಳಿಗೆ ಕರಗತ ಮಾಡಿಸಲಾಗುವುದು ಹೊಸ ನೀತಿಯ ಉದ್ದೇಶವಾಗಿದೆ.

SWAYAM, MOOCs  ಗಳಲ್ಲಿನ ಆನ್ ಲೈನ್ ಕೋರ್ಸ್ ಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಶೇ.40 ರಷ್ಟು ಅಂಕಗಳನ್ನು ಪಡೆಯಬಹುದಾಗಿದೆ.

ಉನ್ನತ ಶಿಕ್ಷಣ ಸಚಿವ ಡಾ.ಸಿಆರ್ ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ಸಭೆ ನಡೆದ ಬಳಿಕ ರಾಜ್ಯದಲ್ಲಿನ ಎನ್ಇಪಿ ಜಾರಿಯ ಬಗ್ಗೆ ಸ್ವತಃ ಸಚಿವರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com