ಮೈಸೂರು ಗ್ಯಾಂಗ್ ರೇಪ್ ಪ್ರಕರಣಕ್ಕೆ ‘ಮಾನಿನಿ’ ಎಂದು ಹೆಸರಿಡಬೇಕು: ಇಂದ್ರಜಿತ್ ಲಂಕೇಶ್

ದೆಹಲಿಯ 'ನಿರ್ಭಯ' ಪ್ರಕರಣದ ನಂತರ ಮೈಸೂರಿನಲ್ಲಿ ನಡೆದ ಈ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ‘ಮಾನಿನಿ’ಎಂದು ಹೆಸರಿಡಬೇಕು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇಂದ್ರಜಿತ್ ಲಂಕೇಶ್
ಇಂದ್ರಜಿತ್ ಲಂಕೇಶ್

ಮೈಸೂರು: ದೆಹಲಿಯ 'ನಿರ್ಭಯ' ಪ್ರಕರಣದ ನಂತರ ಮೈಸೂರಿನಲ್ಲಿ ನಡೆದ ಈ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ‘ಮಾನಿನಿ’ ಎಂದು ಹೆಸರಿಡಬೇಕು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಅಭಿಪ್ರಾಯ ಪಟ್ಟಿದ್ದಾರೆ.

ನಗರದ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅತ್ಯಾಚಾರ ಸಂತ್ರಸ್ತೆಗೆ ರಾಜ್ಯ ಸರ್ಕಾರ ನಿರ್ಭಯ ಯೋಜನೆ ಅಡಿಯಲ್ಲಿ ಹೆಚ್ಚಿನ ಪರಿಹಾರ ಕೊಡಬೇಕು. ಸಂಪೂರ್ಣವಾಗಿ ಪೊಲೀಸರನ್ನು ಹೊಣೆ ಮಾಡುವುದು ಸರಿಯಲ್ಲ. ಇದರಲ್ಲಿ ರಾಜಕಾರಣಿಗಳ ಹಸ್ತಕ್ಷೇಪವು ಇದೆ ಎಂದರು.

ರಾಜಕಾರಣಿಗಳು ತಾಲಿಬಾನ್‌ಗಳಿಗೆ ಹೋಲಿಸುತ್ತಿದ್ದಾರೆ. ಮತ್ತೆ ಕೆಲವರು ಯುವಕ-ಯುವತಿ ಹೋಗಿದ್ದೆ ತಪ್ಪು ಎನ್ನುತ್ತಿದ್ದಾರೆ. ರಾಜಕಾರಣಿಗಳು ಏನು ಮಾತಾಡುತ್ತಿದ್ದಾರೆ? ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ಎಲ್ಲರು ಗಮನಿಸುತ್ತಿದ್ದಾರೆ ಎಂದರು.

ಅತ್ಯಾಚಾರ ಮಾಡಿದವರಿಗೆ ಯಾವ ಶಿಕ್ಷೆ ಎಂದು ಬಸ್ ನಿಲ್ದಾಣಗಳಲ್ಲಿ ಹಾಕಬೇಕಿದೆ. ರಾಜಕಾರಣಿಗಳು ನಾನೇ ಈ ನಿಲ್ದಾಣ ಮಾಡಿಸಿದ್ದು ಎಂದು ಬೋರ್ಡ್ ಹಾಕುತ್ತಾರೆ. ಆದರೆ, ಇಂದು ಅತ್ಯಾಚಾರ ಕೇಸ್​​​ಗೆ ಯಾವ ಶಿಕ್ಷೆ ಎಂದು ಬೋರ್ಡ್ ಹಾಕಬೇಕಿದೆ‌ ಎಂದರು.

ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ಯಾವ ಹಂತಕ್ಕೆ ತಲುಪಿದೆ ಅಂತ ನೋಡಿದರೆ, ತುಂಬಾ ನೋವಾಗುತ್ತದೆ. ಹಲವಾರು ಯಶಸ್ವಿ ಸಿನಿಮಾಗಳನ್ನು ಇಲ್ಲಿ ಚಿತ್ರೀಕರಣ ಮಾಡಿದ್ದೇವೆ. ಹಲ್ಲೆ, ದರೋಡೆ ಹಾಗೂ ಗ್ಯಾಂಗ್‌‌ರೇಪ್‌‌ನಂಥ ಘಟನೆಗಳು ಮೈಸೂರಿನಲ್ಲಿ ನಡೆಯುತ್ತಿರುವುದು ತುಂಬಾ ಡಿಸ್ಪರ್ಬ್ ಆಗುತ್ತಿದೆ ಎಂದಿದ್ದಾರೆ.

ದಸರಾ ಸಮಯದಲ್ಲಿ ಇಡೀ ದೇಶವೇ ಮೈಸೂರಿನ ಕಡೆ ತಿರುಗಿ ನೋಡುತ್ತದೆ. ಒಂದು ತಿಂಗಳ ಹಿಂದೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪ್ರೆಸ್‌ಮೀಟ್ ಮಾಡಿ ಡ್ರಗ್ಸ್ ಯಾವ ರೀತಿ ಮೈಸೂರಿನಲ್ಲಿ ತಾಂಡವ ಆಡುತ್ತಿದೆ ಅಂತ ಹೇಳಿದ್ದರು. ಎಷ್ಟು ಜನ ಡ್ರಗ್ಸ್ ಪೆಡ್ಲರ್‌ಗಳನ್ನು ಇದುವರೆಗೆ ಬಂಧಿಸಿದ್ದಾರೆ? ಎಂದು ಇಂದ್ರಜಿತ್ ಲಂಕೇಶ್ ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com