ಬೆಂಗಳೂರು: ಕೆರೆಗಳ ಮೇಲೆ ತಲೆ ಎತ್ತು ನಿಂತಿವೆ, ಜೈಲು, ಆಸ್ಪತ್ರೆ ಕೊಳಗೇರಿ; 204 ಪೈಕಿ 131 ಒತ್ತುವರಿ!

ಬಿಬಿಎಂಪಿ ವ್ಯಾಪ್ತಿಯ 204 ಕೆರೆಗಳ ಪೈಕಿ 131 ಒತ್ತುವರಿಯಾಗಿದ್ದು, ಕೇವಲ 20 ಮಾತ್ರ ಯಾವುದೇ ರೀತಿಯ ಒತ್ತುವರಿಯಿಂದ ಸಂಪೂರ್ಣ ಮುಕ್ತವಾಗಿವೆ ಎಂದು ಕೆರೆಗಳ ಒತ್ತುವರಿ ವಿವರವಾದ ದಾಖಲೆಯಿಂದ ತಿಳಿದು ಬಂದಿದೆ.
ವರ್ತೂರು ಕೆರೆ
ವರ್ತೂರು ಕೆರೆ

ಬೆಂಗಳೂರು:  ಬಿಬಿಎಂಪಿ ವ್ಯಾಪ್ತಿಯ 204 ಕೆರೆಗಳ ಪೈಕಿ 131 ಒತ್ತುವರಿಯಾಗಿದ್ದು, ಕೇವಲ 20 ಮಾತ್ರ ಯಾವುದೇ ರೀತಿಯ ಒತ್ತುವರಿಯಿಂದ ಸಂಪೂರ್ಣ ಮುಕ್ತವಾಗಿವೆ ಎಂದು ಕೆರೆಗಳ ಒತ್ತುವರಿ ವಿವರವಾದ ದಾಖಲೆಯಿಂದ ತಿಳಿದು ಬಂದಿದೆ.

ಕೆರೆಗಳ ದುಸ್ಥಿತಿಗೆ ಸರ್ಕಾರಿ ಮತ್ತು ಖಾಸಗಿ ಪಕ್ಷಗಳೆರಡು ಕಾರಣವಾಗಿವೆ, ಈ ಕೆರೆಗಳ ಮೇಲೆ ಕೇಂದ್ರಾ ಕಾರಾಗೃಹ, ತಹಶೀಲ್ದಾರ್ ಕಚೇರಿ ಮತ್ತು ರಸ್ತೆಗಳು ಆಸ್ಪತ್ರೆಗಳು ಹಾಗೂ ಸರ್ಕಾರಿ ಲೇಔಟ್ ಗಳು ಕೊಳಗೇರಿಗಳು ಮತ್ತು ಕಾರ್ಖಾನೆಗಳಾಗಿ ಪರಿವರ್ತನೆಯಾಗಿವೆ, ಬಿಬಿಎಂಪಿ ದಾಖಲೆ ಬಿಡುಗಡೆ ಮಾಡಿದ್ದು, ಬರೋಬ್ಬರಿ 159 ಕೆರೆಗಳನ್ನು ವಿವಿಧ ಸರ್ಕಾರಿ ಸಂಸ್ಥೆಗಳು ಒತ್ತುವರಿ ಮಾಡುತ್ತಿವೆ ಎಂದು ಹೇಳಿದೆ.

ಒಟ್ಟು 941 ಎಕರೆ ಒತ್ತುವರಿ ಮಾಡಿಕೊಂಡಿದ್ದು, ಇದುವರೆಗೆ 38 ಎಕರೆ ಮಾತ್ರ ತೆರವುಗೊಳಿಸಲಾಗಿದೆ. ಬೆಂಗಳೂರು ಕೇಂದ್ರ ಕಾರಾಗೃಹ, ಬಿಬಿಎಂಪಿ ನಡೆಸುವ ಕಟ್ಟಡಗಳು ಮತ್ತು ಕಚೇರಿಗಳು, ಬಿಡಿಎ ಲೇಔಟ್‌ಗಳು, ರೈಲ್ವೆ ಮೂಲಸೌಕರ್ಯ ಮತ್ತು ನೈಸ್ ರಸ್ತೆಯಂತಹ ಸಂಸ್ಥೆಗಳು ಬೆಂಗಳೂರಿನಾದ್ಯಂತ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿವೆ.

ಜೆಪಿ ಪಾರ್ಕ್‌ನಲ್ಲಿರುವ ನಾಲ್ಕು ಕೆರೆಗಳು ರಸ್ತೆಗಳು, ರೈಲ್ವೆ ಮತ್ತು ಉದ್ಯಾನವನದ ಮೂಲಕ ದೊಡ್ಡ ಪ್ರಮಾಣದ ಒತ್ತುವರಿಯಾಗಿದೆ, ಅಂದರೆ ಒಟ್ಟು 90 ಎಕರೆ ಒತ್ತುವರಿಯಾಗಿದೆ. ಅದೇ ರೀತಿ, ಕೌಡೇನಹಳ್ಳಿ ಕೆರೆಯಲ 58 ಎಕರೆಯಲ್ಲಿ 38 ಎಕರೆ ಒತ್ತುವರಿಯಾಗಿದೆ ಎಂದು ದಾಖಲೆಯಲ್ಲಿ ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com