ಮತಾಂತರ ನಿಷೇಧ ಕಾಯ್ದೆಯಷ್ಟೇ ಅಲ್ಲ, ಹಿಂದು ಧರ್ಮದ ಉಳಿವಿಕೆಗೆ ಧಾರ್ಮಿಕ ಮುಖ್ಯಸ್ಥರ ಪೂರ್ವಭಾವಿ ಕ್ರಮಗಳು ಅಗತ್ಯ: ಬಿಎಲ್ ಸಂತೋಷ್

ಕೇವಲ ಕಾನೂನಿನಿಂದ ಮಾತ್ರ ಹಿಂದೂ ಧರ್ಮವನ್ನು ಮತಾಂತರದ ಬೆದರಿಕೆಯಿಂದ ಪಾರು ಮಾಡಲು ಸಾಧ್ಯವಿಲ್ಲ, ಧಾರ್ಮಿಕ ಮುಖ್ಯಸ್ಥರ ಪೂರ್ವಭಾವಿ ಕ್ರಮಗಳು ಅಗತ್ಯವಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಬುಧವಾರ ಹೇಳಿದ್ದಾರೆ.
ಬಿ.ಎಲ್.ಸಂತೋಷ್
ಬಿ.ಎಲ್.ಸಂತೋಷ್
Updated on

ಉಡುಪಿ: ಕೇವಲ ಕಾನೂನಿನಿಂದ ಮಾತ್ರ ಹಿಂದೂ ಧರ್ಮವನ್ನು ಮತಾಂತರದ ಬೆದರಿಕೆಯಿಂದ ಪಾರು ಮಾಡಲು ಸಾಧ್ಯವಿಲ್ಲ, ಧಾರ್ಮಿಕ ಮುಖ್ಯಸ್ಥರ ಪೂರ್ವಭಾವಿ ಕ್ರಮಗಳು ಅಗತ್ಯವಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಬುಧವಾರ ಹೇಳಿದ್ದಾರೆ.

ಉಡುಪಿಯ ಕೃಷ್ಣ ಮಠದಲ್ಲಿ ನಡೆಯುತ್ತಿರುವ ವಿಶ್ವಾರ್ಪಣಮ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, "ಧಾರ್ಮಿಕ ಮತಾಂತರದ ವಿರುದ್ಧ ಕಾನೂನನ್ನು ರೂಪಿಸಿದ ನಂತರವೂ ಹಿಂದೂಗಳು ಇಂತಹ ಬೆದರಿಕೆಗಳ ಬಗ್ಗೆ ಅಸಡ್ಡೆ ಮತ್ತು ನಿರಾಸಕ್ತಿಯಿಂದ ಉಳಿದರೆ ಕಾನೂನಿನಿಂದ ಏನು ಪ್ರಯೋಜನವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.

ಧಾರ್ಮಿಕ ಮತಾಂತರದಿಂದ ಹಿಂದೂ ಧರ್ಮಕ್ಕೆ ದೊಡ್ಡ ಅಪಾಯವಿದ್ದು, ಧಾರ್ಮಿಕ ಮುಖ್ಯಸ್ಥರ ಹಲವಾರು ಪೂರ್ವಭಾವಿ ಕ್ರಮಗಳು ಇದನ್ನು ತಡೆಯಬಹುದು. ಇಂತಹ ಪ್ರಯತ್ನಗಳ ಕುರಿತು ಜನರು ಜಾಗೃತರಾಗಬೇಕು ಎಂದು ತಿಳಿಸಿದ್ದಾರೆ.

ಇದೇ ವೇಳೆ ಅಖಿಲ ಭಾರತ ವೀರಶೈವ ಮಹಾಸಭಾ ಒಗ್ಗಟ್ಟಾಗಿ ಮತಾಂತರದ ವಿರುದ್ಧ ಹೋರಾಡುವಂತೆ ತನ್ನ ಎಲ್ಲಾ ಜಿಲ್ಲಾ ಘಟಕಗಳಿಗೆ ಪತ್ರ ಬರೆದಿರುವುದನ್ನು ಶ್ಲಾಘಿಸಿದ ಅವರು, ಸರ್ಕಾರ ಕಾನೂನು ರೂಪಿಸಿರುವುದನ್ನು ಹೊರತುಪಡಿಸಿ ದೀರ್ಘಾವಧಿಯಲ್ಲಿ ಧಾರ್ಮಿಕ ಮತಾಂತರವನ್ನು ತಡೆಯಲು ಇಂತಹ ಕ್ರಮಗಳು ದೊಡ್ಡ ಪಾತ್ರವನ್ನು ವಹಿಸುತ್ತವೆ ಎಂದು ಹೇಳಿದ್ದಾರೆ.

ಸಮಾಜದಲ್ಲಿ ಜನಸಂಖ್ಯೆಯ ಅನುಪಾತ ಗಮನಿಸಬೇಕು. ವ್ಯತ್ಯಾಸ ಆಗ್ತಾ ಇದ್ಯಾ ನೋಡಬೇಕು. ನೆರೆಹೊರೆ ಸುರಕ್ಷಿತವಾಗಿದ್ದರೆ ನಾವು ಸುರಕ್ಷಿತ. ಚುನಾವಣೆಯಲ್ಲಿ ಕೆಲವು ಕ್ಷೇತ್ರದಲ್ಲಿ ಮುಸಲ್ಮಾನರೇ ಗೆಲ್ಲುತ್ತಾರೆ. ಗೆಲ್ಲಲಿ ಪರವಾಗಿಲ್ಲ. ಆದರೆ ಬೇರೆ ಯಾರೂ ಗೆಲ್ಲೋ ಹಾಗಿಲ್ಲ ಎಂದರೆ ಹೇಗೆ ಸಾಧ್ಯ? ಲವ್ ಜಿಹಾದ್​ಗೆ ನಮ್ಮ ಹೆಣ್ಣು ಮಕ್ಕಳು ಬಲಿಯಾಗುತ್ತಿದ್ದಾರೆ. ಮನೆ ಮತ್ತು ಸಮಾಜ ಮಕ್ಕಳನ್ನು ಸರಿಯಾಗಿ ಬೆಳಸದ ಪರಿಣಾಮವೇ ಇದಾಗಿದೆ. ನಮ್ಮ ಸುತ್ತಮುತ್ತ ವ್ಯವಸ್ಥೆಯಲ್ಲಿನ ಭಯೋತ್ಪಾದನೆ ಗುರುತಿಸಬೇಕು.

ರಾಮ ಕೃಷ್ಣರ ಹೆಸರು ಹೇಳಿಕೊಂಡು ಬದುಕಲು ಸಾಧ್ಯವಿಲ್ಲ. ಈಗ ನಡೆಸಬೇಕಾದ ಕರ್ಮ‌ ನಡೆಸಲೇಬೇಕು. ಒಗ್ಗಟ್ಟು ಪ್ರದರ್ಶನ‌ ಮಾಡಬೇಕು. ಜಾತಿ, ಊರು, ಧರ್ಮದ ಹೆಸರಲ್ಲಿ ಒಗ್ಗಟ್ಟು ಬೇಕು. ಪ್ರೇಮಕ್ಕೂ, ಪ್ರೀತಿಗೂ ಲವ್ ಜಿಹಾದ್​ಗೂ ಸಂಬಂಧವೇ ಇಲ್ಲ. ವೀರಶೈವ ಮಹಾಸಭಾದವರು ಮತಾಂತರದ ವಿರುದ್ದ ಸಣ್ಣ ಸಣ್ಣ ತಂಡ ಮಾಡಿದ್ದಾರೆ. ಮತಾಂತರದ ಅಪಾಯ ಗ್ರಹಿಸಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com