ಐತಿಹಾಸಿಕ ಹಂಪಿ ಬಗ್ಗೆ ಅವಹೇಳನ: ಮುಂದಿನ 24 ಗಂಟೆಗಳಲ್ಲಿ ಸ್ಯಾಂಡ್ ಅಪ್ ಕಾಮಿಡಿಯನ್ ಶ್ರವಣ್ ಪೊಲೀಸರ ಮುಂದೆ ಹಾಜರು

ಹಂಪಿ ಸ್ಮಾರಕಗಳ ಬಗ್ಗೆ ಅವಹೇಳನಕಾರಿ ಯಾಗಿ ಕಾಮಿಡಿ ಮಾಡಿದ ಆರೋಪ ಮೇಲೆ , ಬೆಂಗಳೂರಿನ ಸ್ಟ್ಯಾಂಡ್​ ಅಪ್​ ಕಾಮಿಡಿಯನ್ ಪಿ.​ ಶ್ರವಣ್​ ಮುಂದಿನ 24 ಗಂಟೆಯೊಳಗೆ ಪೊಲೀಸರ ಮುಂದೆ ಹಾಜರಾಗಲಿದ್ದಾರೆ ಎಂದು ಆತನ ಪೋಷಕರು ಮಾಹಿತಿ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ಹಂಪಿ ಸ್ಮಾರಕಗಳ ಬಗ್ಗೆ ಅವಹೇಳನಕಾರಿ ಯಾಗಿ ಕಾಮಿಡಿ ಮಾಡಿದ ಆರೋಪ ಮೇಲೆ , ಬೆಂಗಳೂರಿನ ಸ್ಟ್ಯಾಂಡ್​ ಅಪ್​ ಕಾಮಿಡಿಯನ್ ಪಿ.​ ಶ್ರವಣ್​ ಮುಂದಿನ 24 ಗಂಟೆಯೊಳಗೆ ಪೊಲೀಸರ ಮುಂದೆ ಹಾಜರಾಗಲಿದ್ದಾರೆ ಎಂದು ಆತನ ಪೋಷಕರು ಮಾಹಿತಿ ನೀಡಿದ್ದಾರೆ.

ಹಂಪಿಯ ಐತಿಹಾಸಿಕ ಸಂಗೀತ ಸ್ತಂಭಗಳ ಬಗ್ಗೆ ಶ್ರವಣ್ ಅಸಭ್ಯವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಸಂಘಟನೆಗಳು ಮತ್ತು ಮಾರ್ಗದರ್ಶಕರ ಸಂಘಗಳು ಹಂಪಿ ಪ್ರವಾಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದವು.

ದೂರಿನ ಅನ್ವಯ ಪೊಲೀಸರು ಪಿ. ಶ್ರವಣ್ ಮತ್ತು ಕಾರ್ಯಕ್ರಮದ ಆಯೋಜಕ  ತರ್ಲೆ ಬಾಕ್ಸ್ ಕಂಪನಿಗೆ ಪೊಲೀಸರು ನೊಟೀಸ್ ನೀಡಿದ್ದರು,  ದೂರು ನೀಡಿದ ಸಂಘಟನೆಗಳ ಮುಖಂಡರೊಂದಿಗೆ ಆತನ ಪೋಷಕರು ಮಾತನಾಡಿದ್ದಾರೆ. “ಶ್ರಾವಣನ ಪೋಷಕರು ನಮಗೆ ದೂರವಾಣಿ ಕರೆ ಮಾಡಿ ಶ್ರವಣನನ್ನು ಕ್ಷಮಿಸುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.

ನಾವು ನೀಡಿರುವ ದೂರಿನ ಬಗ್ಗೆ  ದೃಢವಾಗಿದ್ದೇವೆ. ಪಿ. ಶ್ರವಣ್ ಪೊಲೀಸರ ಮುಂದೆ ಹಾಜರಾಗಬೇಕು. ದೇವಸ್ಥಾನದ ವಿರೂಪಾಕ್ಷ ದೇವರ ಮುಂದೆ ಆತ  ಕ್ಷಮೆ ಕೇಳಬೇಕು ಎಂದು ಕೆಲವು ಸ್ಥಳೀಯ ಮುಖಂಡರು ಮತ್ತು ಹಿರಿಯ ಮಾರ್ಗದರ್ಶಕರು ನಿರ್ಧರಿಸಿದ್ದಾರೆ ಎಂದು ವಿಜಯನಗರ ಸ್ಮಾರಕ ಸಂರಕ್ಷಣಾ ಸಮಿತಿಯ ಸದಸ್ಯರೊಬ್ಬರು ತಿಳಿಸಿದರು. ಸದ್ಯ ಪೊಲೀಸರು ಸೈಬರ್ ಕ್ರೈಂ ಕಾಯ್ದೆಯಡಿ ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ.

ದೂರುದಾರರನ್ನು ಕಾರ್ಯಕ್ರಮ ಆಯಜಕರು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ನಮಗೆ ತಿಳಿದು ಬಂದಿದೆ. ಎರಡೂ ಕಡೆಯವರು ಒಮ್ಮತದ ತೀರ್ಮಾನಕ್ಕೆ ಬಂದರೆ, ನಾವು ಪ್ರಕರಣವನ್ನು ವಿತ್ ಡ್ರಾ ಮಾಡುತ್ತೇವೆ, ಸದ್ಯಕ್ಕೆ ಆಯೋಜಕರು ಮತ್ತು ಶ್ರವಣ್  ನಮ್ಮ ಮುಂದೆ ಹಾಜರಾಗುವಂತೆ ಸೂಚಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com