ಕುಡಿಯುವ ನೀರು ಸಮಸ್ಯೆಯೇ?: ಈಗ ನೇರವಾಗಿ ಶಾಸಕ ಅರಗ ಜ್ಞಾನೇಂದ್ರಗೆ ದೂರು ಸಲ್ಲಿಸಿ!

ರಾಜ್ಯಾದ್ಯಂತ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇತ್ತೀಚೆಗೆ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಹತ್ತಾರು ದೂರುಗಳು ಬಂದವು. ಈ ಸಂಬಂಧ ವರದಿ ನೀಡಲು ಸದನ ಸಮಿತಿಯನ್ನು ರಚಿಸಲಾಗಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯಾದ್ಯಂತ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇತ್ತೀಚೆಗೆ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಹತ್ತಾರು ದೂರುಗಳು ಬಂದವು. ಈ ಸಂಬಂಧ ವರದಿ ನೀಡಲು ಸದನ ಸಮಿತಿಯನ್ನು ರಚಿಸಲಾಗಿತ್ತು.

ಶಾಸಕ ಅರಗ ಜ್ಞಾನೇಂದ್ರ ಅವರ ಅಧ್ಯಕ್ಷತೆಯಲ್ಲಿ ಸದನ ಸಮಿತಿ ನಿನ್ನೆ ಪ್ರಾಥಮಿಕ ಸಭೆ ನಡೆಸಿ ಏಪ್ರಿಲ್ ತಿಂಗಳಲ್ಲಿ ಸಭೆ ಸೇರಲು ಸಾಧ್ಯವಾಗಿರಲಿಲ್ಲ, ಹೀಗಾಗಿ ಅಂತಿಮ ವರದಿ ಸಲ್ಲಿಸಲು ಸೆಪ್ಟೆಂಬರ್ 30ವರೆಗೆ ಕಾಲಾವಕಾಶ ಕೋರಿತು.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ ಅರಗ ಜ್ಞಾನೇಂದ್ರ, ರಾಜ್ಯಾದ್ಯಂತ ಕುಡಿಯುವ ನೀರು ಪೂರೈಕೆಗೆ ಸಂಬಂಧಪಟ್ಟಂತೆ ಆಯಾ ಜಿಲ್ಲಾಧಿಕಾರಿಗಳು, ಜಿಲ್ಲೆಯ ಮುಖ್ಯಸ್ಥರು, ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದು ಸಮಸ್ಯೆಗಳನ್ನು ಗಮನಕ್ಕೆ ತರುವಂತೆ ಸೂಚಿಸಲಾಗಿದೆ. ಸಾರ್ವಜನಿಕರು ಕೂಡ ನನ್ನ ಇಮೇಲ್ ವಿಳಾಸ araga.jnanendra@gmail.com ಗೆ ದೂರು ಸಲ್ಲಿಸಬಹುದು ಎಂದರು.

ಸದನ ಸಮಿತಿಯ ಭಾಗವಾಗಿರುವ 15 ಶಾಸಕರು ಮತ್ತು ಐದು ವಿಧಾನ ಪರಿಷತ್ ಸದಸ್ಯರು ನಿನ್ನೆ ಸಭೆ ಸೇರಿದ್ದರು. ಮತ್ತೊಂದು ಬಾಧ್ಯತಾ ಸಮಿತಿಯ ಮುಂದೆ ಮತ್ತೊಂದು ಸಭೆ ನಡೆದಿದ್ದು ಶಾಸಕರ ವಿರುದ್ಧ ಎರಡು ದೂರುಗಳನ್ನು ಸ್ವೀಕರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com