ರಾಜ್ಯದಲ್ಲಿ ಜುಲೈ 5ರ ನಂತರ ಅನ್ ಲಾಕ್ 3.0 ಜಾರಿ?: ಮುಖ್ಯಮಂತ್ರಿ ನೇತೃತ್ವದಲ್ಲಿ ಇಂದು ಸಭೆ

ಕೋವಿಡ್ 2ನೇ ಅಲೆಯ ಪ್ರಮಾಣ ತೀವ್ರ ಮಟ್ಟದಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇಳಿಕೆಯಾಗಿರುವುದರಿಂದ ಅನ್ ಲಾಕ್ 3.0 ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಆರಂಭಿಸಲಿದ್ದು, ಈ ಬಗ್ಗೆ ಶನಿವಾರ ನಡೆಯುವ ಸಭೆಯಲ್ಲಿ ತೀರ್ಮಾನಿಸುವ ಸಾಧ್ಯತೆಯಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕೋವಿಡ್ 2ನೇ ಅಲೆಯ ಪ್ರಮಾಣ ತೀವ್ರ ಮಟ್ಟದಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇಳಿಕೆಯಾಗಿರುವುದರಿಂದ ಅನ್ ಲಾಕ್ 3.0 ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಆರಂಭಿಸಲಿದ್ದು, ಈ ಬಗ್ಗೆ ಶನಿವಾರ ನಡೆಯುವ ಸಭೆಯಲ್ಲಿ ತೀರ್ಮಾನಿಸುವ ಸಾಧ್ಯತೆಯಿದೆ.

ಇಂದು ನಿರ್ಧಾರ ಸಾಧ್ಯತೆ: ರಾಜ್ಯದಲ್ಲಿ  ಸೋಮವಾರದ ನಂತರ  ಇನ್ನಷ್ಟು  ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡುವ ಕುರಿತು  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಇಂದು ಸಂಜೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಅನ್ ಲಾಕ್ 3.0 ಸಭೆ ನಡೆಯಲಿದ್ದು, ಕೋವಿಡ್ ಉಸ್ತುವಾರಿ ಸಚಿವರು, ತಜ್ಞರು, ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಅದರಲ್ಲಿ ಕೋವಿಡ್ ತಾಂತ್ರಿಕ ಸಮಿತಿ ನೀಡಿರುವ ವರದಿಯನ್ನು ಆಧರಿಸಿ ಯಾವುದಕ್ಕೆಲ್ಲಾ ವಿನಾಯ್ತಿ ನೀಡಬೇಕೆಂದು ನಿರ್ಧರಿಸಿ ಇಂದೇ ಮುಖ್ಯಮಂತ್ರಿಗಳು ಹೊಸ ಮಾರ್ಗಸೂಚಿ ಹೊರಡಿಸಲಿದ್ದಾರೆ ಎಂದು ತಿಳಿದುಬಂದಿದೆ.

ಸೋಮವಾರದಿಂದ ಬೆಂಗಳೂರು ಸಂಪೂರ್ಣ ಅನ್ ಲಾಕ್ ಆಗುವ ಸಾಧ್ಯತೆಯಿದೆ. ಆರ್ಥಿಕ ಚಟುವಟಿಕೆ ದೃಷ್ಟಿಯಿಂದ ಎಲ್ಲಾ ಚಟುವಟಿಕೆಗಳನ್ನು ತೆರೆಯಬೇಕಾಗಿದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ. ಸರ್ಕಾರಕ್ಕೆ ಕೋವಿಡ್ ನಿರ್ಬಂಧನೆಯಡಿ ಅನುಸರಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ಬಿಬಿಎಂಪಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಸೋಮವಾರ ಅಂದರೆ ಜುಲೈ 5ರಿಂದ ಮಾಲ್ ಗಳು, ದೊಡ್ಡ ದೊಡ್ಡ ಹೊಟೇಲ್ ಗಳು ತೆರೆಯುವ ಸಾಧ್ಯತೆಯಿದೆ. ವೀಕೆಂಡ್ ಕರ್ಫ್ಯೂವನ್ನು ತೆರವುಗೊಳಿಸಿ ನೈಟ್ ಕರ್ಫ್ಯೂವನ್ನು ಮಾತ್ರ ಸರ್ಕಾರ ಮುಂದುವರಿಸುವ ಸಾಧ್ಯತೆಯಿದೆ.

ಈ ಮೂಲಕ ಸೋಮವಾರ ನಂತರ ಬೆಂಗಳೂರು ಸೇರಿದಂತೆ ಇಡೀ ರಾಜ್ಯ ಮತ್ತೊಂದು ಹಂತದ ಅನ್ ಲಾಕ್ ಗೆ ತೆರೆದುಕೊಳ್ಳುವ ಸಾಧ್ಯತೆಯಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com