ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಪ್ಪಳ: ವರ್ಣಮಾಲೆಯನ್ನೂ ಕಲಿಯದೆ 30 ಸಾವಿರ ವಿದ್ಯಾರ್ಥಿಗಳು ಪಾಸ್!

ಕೋವಿಡ್ ಸಾಂಕ್ರಾಮಿಕ ರೋಗ ಶೈಕ್ಷಣಿಕ ಕ್ಷೇತ್ರದ ಮೇಲೆ ಆಪಾರ ಪರಿಣಾಮ ಬೀರಿದೆ. 14,140 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 29,187 ವಿದ್ಯಾರ್ಥಿಗಳು 1ನೇ ತರಗತಿಯಿಂದ 2ನೇ ತರಗತಿಗೆ ವರ್ಣಮಾಲೆಯನ್ನೂ ಕಲಿಯದೇ ಪಾಸಾಗಿದ್ದಾರೆ.

ಕೊಪ್ಪಳ: ಕೋವಿಡ್ ಸಾಂಕ್ರಾಮಿಕ ರೋಗ ಶೈಕ್ಷಣಿಕ ಕ್ಷೇತ್ರದ ಮೇಲೆ ಆಪಾರ ಪರಿಣಾಮ ಬೀರಿದೆ. 14,140 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 29,187 ವಿದ್ಯಾರ್ಥಿಗಳು 1ನೇ ತರಗತಿಯಿಂದ 2ನೇ ತರಗತಿಗೆ ವರ್ಣಮಾಲೆಯನ್ನೂ ಕಲಿಯದೇ ಪಾಸಾಗಿದ್ದಾರೆ.

ಕಳೆದ ವರ್ಷ ಮಾರ್ಚ್ - ಏಪ್ರಿಲ್ ತಿಂಗಳಿನಲ್ಲಿಯೇ ಎಲ್ಲಾ ಭೌತಿಕ ತರಗತಿಗಳನ್ನು ರದ್ದುಗೊಳಿಸುವಂತೆ ಸರ್ಕಾರ ಸೂಚಿಸಿತ್ತು. ಹೀಗಾಗಿ ಅವರನ್ನು ಎರಡನೇ ತರಗತಿಗೆ ಪಾಸು ಮಾಡುವಂತೆ ಸರ್ಕಾರ ಆದೇಶಿಸಿದೆ.

‘ವಿದ್ಯಾಗಮ’ ಅಡಿಯಲ್ಲಿ ಶಾಲೆಗಳ ಆವರಣದಲ್ಲಿ ತರಗತಿಗಳನ್ನು ನಡೆಸಲು ಪ್ರಯತ್ನಿಸಲಾಗಿದ್ದರೂ, ಈ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಅವರಿಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಗಾಯತ್ರಮ್ಮ ಹೇಳಿದ್ದಾರೆ.

ಗಾಯತ್ರಮ್ಮ ಅವರ ಪುತ್ರ ಅನ್ವೇಶ್  ಈ ಬಾರಿ ಎರಡನೇ ತರಗತಿಗೆ ಹಾಜರಾಗಲು ಉತ್ಸುಕನಾಗಿದ್ದಾನೆ ಎಂದು ತಿಳಿಸಿದ್ದಾರೆ. ವರ್ಣಮಾಲೆಗಳು ಬಹಳ ಮೂಲಭೂತವಾಗಿವೆ ಮತ್ತು ಈ ವಿದ್ಯಾರ್ಥಿಗಳು ಮೊದಲ ತರಗತಿಯಲ್ಲಿ ಒಂದೇ ತರಗತಿಗೆ ಹಾಜರಾಗದೆ ಎರಡನೇ ತರಗತಿಯಲ್ಲಿ ನಿಭಾಯಿಸಬೇಕಾಗುತ್ತದೆ. ಈ ಮಕ್ಕಳಿಗೆ ಕಲಿಸಲು ಶಿಕ್ಷಕರಿಗೆ ಕಠಿಣವಾಗುತ್ತದೆ. ಹೀಗಾಗಿ ಶಿಕ್ಷಣ ಇಲಾಖೆಯಿಂದ ಸ್ಪಷ್ಟ ಮಾರ್ಗಸೂಚಿಗಳಿಗಾಗಿ ಕಾಯುತ್ತಿದ್ದಾರೆಎಂದು ಶಿಕ್ಷಣ ತಜ್ಞ ಗಂಗಪ್ಪ ತಿಳಿಸಿದ್ದಾರೆ.

ಶಿಕ್ಷಕರು ಮೊದಲು ಮಕ್ಕಳ 1ನೇ ತರಗತಿಯ ಮೂಲಭೂತ ವಿಷಯಗಳನ್ನು ಕಲಿಯುವುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ನಂತರ ಎರಡನೇ ತರಗತಿಯ ಭಾಗಗಳನ್ನು ಪೂರ್ಣಗೊಳಿಸಬೇಕು. ಸರ್ಕಾರ ಸ್ಪಷ್ಟ ಯೋಜನೆಯೊಂದಿಗೆ ಬರಬೇಕು ಎಂದು ಡಿಡಿಪಿಐ ದೊಡ್ಡಬಸಪ್ಪ ನೇರಲಕೇರಿ ತಿಳಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com