ಸರ್ಕಾರಕ್ಕೆ ವಂಚನೆ ಮಾಡಿಲ್ಲ, ಇದೊಂದು ರಾಜಕೀಯ ಪ್ರೇರಿತ ದೂರು: ವಿಜಯ್ ನಿರಾಣಿ ಸ್ಪಷ್ಟನೆ

ಸರ್ಕಾರಕ್ಕೆ ನಾನು ಯಾವುದೇ ರೀತಿಯ ವಂಚನೆ ಮಾಡಿಲ್ಲ. ಇದೊಂದು ರಾಜಕೀಯ ಪ್ರೇರಿತ ಆರೋಪವಾಗಿದ್ದು, ಆಧಾರ ರಹಿತ ಆರೋಪ ಮಾಡುತ್ತಿರುವ ರವೀಂದ್ರ ಅವರು ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ವಿಜಯ್ ನಿರಾಣಿ ಎಚ್ಚರಿಸಿದ್ದಾರೆ. 
ವಿಜಯ್ ನಿರಾಣಿ
ವಿಜಯ್ ನಿರಾಣಿ
Updated on

ಬೆಂಗಳೂರು: ಸರ್ಕಾರಕ್ಕೆ ನಾನು ಯಾವುದೇ ರೀತಿಯ ವಂಚನೆ ಮಾಡಿಲ್ಲ. ಇದೊಂದು ರಾಜಕೀಯ ಪ್ರೇರಿತ ಆರೋಪವಾಗಿದ್ದು, ಆಧಾರ ರಹಿತ ಆರೋಪ ಮಾಡುತ್ತಿರುವ ರವೀಂದ್ರ ಅವರು ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ವಿಜಯ್ ನಿರಾಣಿ ಎಚ್ಚರಿಸಿದ್ದಾರೆ. 

ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್‌ಎಸ್‌ಕೆ)ಯನ್ನು 40 ವರ್ಷಗಳವರೆಗೆ ಗುತ್ತಿಗೆ ಪಡೆದಿರುವ ನಿರಾಣಿ ಶುಗರ್ಸ್‌ ಆಡಳಿತ ಮಂಡಳಿ ಕರಾರು ಉಲ್ಲಂಘಿಸಿದ್ದು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್‌ ಮುಖಂಡ ಡಾ.ಎಚ್‌.ಎನ್‌.ರವೀಂದ್ರ ಅವರು ವಿಜಯ್ ನಿರಾಣಿ ವಿರುದ್ಧ ದೂರು ಸಲ್ಲಿಸಿದ್ದರು.

ಈ ಕುರಿತು ಸ್ಪಷ್ಟನೆ ನೀಡಿರುವ ವಿಜಯ್ ನಿರಾಣಿಯವರು, ನಷ್ಟಕ್ಕೆ ಸಿಲುಕಿದ್ದ ಕಾರ್ಖಾನೆಯನ್ನು ಕೊವಿಡ್ ಸಂಕಷ್ಟದ ನಡುವೆಯೂ ಅತಿ ಕಡಿಮೆ ಅವಧಿಯಲ್ಲಿ ಮರು ಪ್ರಾರಂಭಿಸಿದ್ದೇವೆ.ಸುಖಾಸುಮ್ಮನೆ ತಮ್ಮ  ಹಾಗೂ ‌ನಿರಾಣಿಶುಗಸ್೯ ಮೇಲೆ ಸುಳ್ಳು ಆರೋಪ ಮಾಡಿರುವ ಡಾ.ರವೀಂದ್ರಕೂಡಲೇ ಕ್ಷೆಮೆಯಾಚಿಸಬೇಕು ಇಲ್ಲದಿದ್ದರೆ, ಕಾನೂನು ಕ್ರಮಜ ರುಗುಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಯಾವುದೇ ಸಂಸ್ಥೆ ಇಲ್ಲವೇ ವ್ಯಕ್ತಿಯೊಬ್ಬರ ಬಗ್ಗೆ ಸತ್ಯಾಸತ್ಯತೆಯನ್ನು ಅರಿತು ಡಾ.ರವೀಂದ್ರ ಅವರು ಮಾತನಾಡಬೇಕು. ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾರೆ ಎಂದು ಆಧಾರರಹಿತವಾಗಿ‌ ಆರೋಪ ಮಾಡುವುದು ತಪ್ಪು. ಈ ಕೂಡಲೇ ತಮ್ಮ ಸಂಸ್ಥೆ ವಿರುದ್ಧ ನೀಡಿರುವ ಹೇಳಿಕೆಯನ್ನು ಸಾರ್ವಜನಿಕವಾಗಿ ಹಿಂಪಡೆದು  ಕ್ಷಮಾಪಣೆ ಕೇಳಬೇಕು. ಇಲ್ಲವಾದಲ್ಲಿ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಸರ್ಕಾರಕ್ಕೆ ವಂಚನೆ  ಮಾಡುವ ಪ್ರಮೇಯವೇ ಬರುವುದಿಲ್ಲ. ಏಕೆಂದರೆ ನಾವು ಕಾನೂನಿನ ಪ್ರಕಾರವೇ ಎಲ್ಲಾ ಪ್ರಕ್ರಿಯೆಗಳನ್ನು ನಡೆಸುತ್ತಿದ್ದೇವೆ. ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಕುರಿತು ಡಾ.ರವೀಂದ್ರ ಆರೋಪ ಮಾಡಿ ಎಸಿಬಿಗೆ ದೂರು ಸಲ್ಲಿಸಿದ್ದು, ಅವೆಲ್ಲವೂ ನಿರಾಧಾರವಾಗಿವೆ. ನಮ್ಮ ಏಳ್ಗೆಯನ್ನು ಸಹಿಸದೆ ನಿರಾಣಿ ಸಮೂಹದ ಮೇಲೆ ಕೇವಲ ಬಿಟ್ಟಿ ಪ್ರಚಾರ ಪಡೆಯುವ ದುರುದ್ದೇಶದಿಂದ ಅವರು ಆಧಾರರಹಿತ ಆರೋಪಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಗಿತಗೊಂಡಿದ್ದ ಕಾರ್ಖಾನೆಯನ್ನು ಗುತ್ತಿಗೆ ಪಡೆದು ಕೊವಿಡ್ ಪರಿಸ್ಥಿತಿ ಲೆಕ್ಕಿಸದೇ ಅತ್ಯಂತ ಕಡಿಮೆ ಅವಧಿಯಲ್ಲಿ ಪುನರುಜ್ಜೀವನಗೊಳಿಸಿ ಕಾರ್ಖಾನೆ ಪ್ರಾರಂಭಿಸಿ, ಸ್ಥಳೀಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಗಳನ್ನು ನೀಡಲಾಗಿದೆ‌. ಕಾರ್ಮಿಕರ ವೇತನ, ರೈತರ ಬಿಲ್ ಪಾವತಿ, ಗುತ್ತಿಗೆದಾರರು, ಕಬ್ಬುಕಟಾವುದಾರರು, ವಾಹನ ಬಾಡಿಗೆದಾರರ ಹಣ ಎಲ್ಲವನ್ನುಸಕಾಲಕ್ಕೆ ನಿಯಮಿತವಾಗಿ ನೀಡುತ್ತಾ ಬಂದಿದ್ದೇವೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಟ್ರಯಲ್ ಅವಧಿಯಲ್ಲಿ 8 ಕೋಟಿ ನಷ್ಟಅನುಭವಿಸಿದರೂ ಸಕಾಲಕ್ಕೆ ರೈತರ ಬಿಲ್ ಪಾವತಿ ಮಾಡಲಾಗಿದೆ. ಎಲ್ಲಾ ಶಾಸನಬದ್ದ ಶುಲ್ಕಗಳನ್ನು ನಿಯಮಿತವಾಗಿಪಾವತಿಸಿದ್ದೇವೆ. ಕಾರ್ಖಾನೆ ವಿಸ್ತರಣೆಗೆ 5 ವರ್ಷಗಳ ಕಾಲಮಿತಿ ಇದ್ದರೂ, ಶಾಸನಬದ್ದವಾಗಿ ಹಸ್ತಾಂತರವಾಗದಿದ್ದರೂ ಕಾರ್ಖಾನೆ ಸುಸ್ಥಿರವಾಗಿನಡೆಯಬೇಕು ಎಂಬ ಸದುದ್ದೇಶದಿಂದ 50 ಕೋಟಿ ಹಣಹೂಡಿಕೆ ಮಾಡಿ ಕೇವಲ ಒಂದೇ ವರ್ಷದಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ 3,500 ಟಿಸಿಡಿಯಿಂದ 5,000 ಟಿಸಿಡಿ ಮೇಲ್ದರ್ಜೆಗೆ ಏರಿಸಿದ್ದೇವೆಂದು ವಿಜಯ ನಿರಾಣಿ ತಿಳಿಸಿದ್ದಾರೆ.

ಕಾರ್ಖಾನೆಯಲ್ಲಿದ್ದ ಎಲ್ಲ ನಿರಪಯುಕ್ತ (ಸ್ಕ್ರ್ಯಾಪ್) ವಸ್ತು ಮಾರಿದ್ದಕ್ಕೂ ಪ್ರತ್ಯೇಕವಾಗಿ ಲೆಕ್ಕ ಇಡಲಾಗಿದೆ. ಡಿಸ್ಟಿಲರಿ ಘಟಕ ಸ್ಥಾಪನೆಗೆ ಎಲ್ಲ ಯೋಜನೆ ಹಾಕಿಕೊಂಡಿದ್ದೂ ಸರ್ಕಾರ ಸ್ಥಳ ಗುರ್ತಿಸಿಕೊಟ್ಟರೇ ಶೀಘ್ರವೇ ಕೆಲಸ ಪ್ರಾರಂಭವಾಗುತ್ತದೆ. ಕಾರ್ಮಿಕ ಹಾಗೂ ರೈತ ಸ್ನೇಹಿಯಾಗಿ ಕಾರ್ಖಾನೆಯನ್ನು ನಡೆಸಬೇಕು ಎಂಬ ಒಂದೇ ಉದ್ದೇಶದಿಂದ ಇದನ್ನು ಮಾಡಲಾಗಿದೆ. ರೈತರು ಹಾಗೂ ಕಾರ್ಮಿಕರ ಬಗ್ಗೆ ತಮಗಿರುವಬದ್ಧತೆಯನ್ನು ಇದು ತೋರಿಸುತ್ತದೆ ಎಂದಿದ್ದಾರೆ.

ದೀರ್ಘ ಕಾಲದ ಗುತ್ತಿಗೆಯ ಅವಧಿಯನ್ನು ಪ್ರಶ್ನೆ ಮಾಡುತ್ತಿರುವಅವರಿಗೆ ಅದೊಂದು ಸರ್ಕಾರದ ನಿರ್ಧಾರ ಎಂಬ ಕನಿಷ್ಠಜ್ಞಾನವೂ  ರವೀಂದ್ರ ಅವರಿಗೆ ಇಲ್ಲ ತಿರುಗೇಟು ನೀಡಿದ್ದಾರೆ. ಗುತ್ತಿಗೆಯನ್ನು ಸಹಕಾರಿ ಸಕ್ಕರೆ ಕಾರ್ಖಾನೆಗಳ ಇತಿಹಾಸದಲ್ಲೆ ಅತಿಹೆಚ್ಚು ಬೆಲೆಗೆ ಬಿಡ್ ಮಾಡಿ ಸರ್ಕಾರದ ಕರಾರಿನಂತೆ ಲೀಜ್ ಪಡೆಯಲಾಗಿದೆ. 1 ಕೋಟಿ ಇ.ಎಂ.ಡಿ ಹಾಗೂ ಭದ್ರತಾ ಠೇವಣಿ 5 ಕೋಟಿಯನ್ನು ಈಗಾಗಲೇ ಸಂದಾಯ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com