ಕೇರಳದಲ್ಲಿ ಝೀಕಾ ವೈರಸ್ ಸೋಂಕು ಉಲ್ಬಣ: ಕರ್ನಾಟಕದಲ್ಲೂ ಕಟ್ಟೆಚ್ಚರ ವಹಿಸುವಂತೆ ಸರ್ಕಾರ ಸೂಚನೆ

ದಕ್ಷಿಣ ಕನ್ನಡ, ಉಡುಪಿ ಮತ್ತು ಚಾಮರಾಜನಗರ ಗಡಿ ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಹಾಯಕರಿಗೆ ಆದೇಶಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕೇರಳದಲ್ಲಿ ಝೀಕಾ ವೈರಸ್ ಹಾವಳಿ ಏರುತ್ತಿದ್ದಂತೆ ರಾಜ್ಯದಲ್ಲಿಯೂ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ. 

ದಕ್ಷಿಣ ಕನ್ನಡ, ಉಡುಪಿ ಮತ್ತು ಚಾಮರಾಜನಗರ ಗಡಿ ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಹಾಯಕರಿಗೆ ಆದೇಶಿಸಲಾಗಿದೆ.

ಸದ್ಯ ಮಳೆಗಾಲ ಈ ವೈರಸ್ ಹರಡಲು ಈ ಸೊಳ್ಳೆಗೆ ಅನುಕೂಲವಾಗುತ್ತಿದೆ ಎಂದು ಆರೋಗ್ಯ ಇಲಾಖೆ ಕಮಿಷನರೇಟ್ ತಿಳಿಸಿದೆ. ಜ್ವರ, ಸಣ್ಣ ಸಣ್ಣ ಗುಳ್ಳೆಗಳು, ಕಣ್ಣಲ್ಲಿ ನೀರು ಸೋರುವುದು ಮತ್ತು ಸಂಧಿವಾತ ಝೀಕಾ ವೈರಸ್ ನ ಪ್ರಮುಖ ಲಕ್ಷಣಗಳಾಗಿವೆ. 

ಕಾ ವೈರಸ್ ಕಾಯಿಲೆ ಸೊಳ್ಳೆಗಳ ಮೂಲಕ ವಾಹಕಗಳಾಗಿ ಹರಡುತ್ತದೆ. ಈ ಈಡಿಸ್ ಸೊಳ್ಳೆಗಳು ಹಗಲಿನ ವೇಳೆಯಲ್ಲಿ ಕಚ್ಚುತ್ತವೆ ಹಾಗೂ ಹೆಚ್ಚಾಗಿ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಕಂಡುಬರುತ್ತದೆ. ಡೆಂಗ್ಯೂ, ಚಿಕೂನ್‌ ಗುನ್ಯಾ ಮತ್ತು ಹಳದಿ ಜ್ವರವನ್ನು ಹರಡುವ ಸೊಳ್ಳೆಯೂ ಸಹ ಈಡಿಸ್‌ ಈಜಿಪ್ಟಿ.

ಜಿಕಾ ವೈರಸ್ ಕೇವಲ ಸೊಳ್ಳೆ ಕಡಿತದಿಂದ ಮಾತ್ರವಲ್ಲ, ರಕ್ತದ ವರ್ಗಾವಣೆ, ಅಸುರಕ್ಷಿತ ಲೈಂಗಿಕತೆ ಮುಂತಾದ ದೇಹದ ದ್ರವಗಳ ವಿನಿಮಯದ ಮೂಲಕವೂ ಸೋಂಕಿತ ಪಾಲುದಾರರ ನಡುವೆ ಹರಡುತ್ತದೆ. ಹಾಗೂ, ಕೇವಲ ಸೊಳ್ಳೆ ಕಡಿತದಿಂದ ಮಾತ್ರವಲ್ಲ, ರಕ್ತದ ವರ್ಗಾವಣೆ, ಅಸುರಕ್ಷಿತ ಲೈಂಗಿಕತೆ ಮುಂತಾದ ದೇಹದ ದ್ರವಗಳ ವಿನಿಮಯದ ಮೂಲಕವೂ ಸೋಂಕಿತ ಪಾಲುದಾರರ ನಡುವೆ ಹರಡುತ್ತದೆ ಮತ್ತು ಇನ್ನೊಬ್ಬರು ಸೋಂಕಿಗೆ ಒಳಗಾಗುವುದಿಲ್ಲ. ಗರ್ಭಿಣಿಗೆ ಝೀಕಾ ವೈರಸ್ ಸೋಂಕಿಗೆ ಒಳಗಾಗಿದ್ದರೆ ಹುಟ್ಟಲಿರುವ
ಮಗುವಿಗೆ ಸೋಂಕು ರವಾನಿಸಬಹುದು.

ಈ ವೈರಸ್ ಸೋಂಕಿತ ಸೊಳ್ಳೆಯಿಂದ ಕಚ್ಚಿದ ಯಾರಿಗಾದರೂ ಸೋಂಕನ್ನು ಉಂಟುಮಾಡಬಹುದಾದರೂ, ಇದು ಗರ್ಭಿಣಿಯರು, ಸಹ ಅಸ್ವಸ್ಥತೆ ಹೊಂದಿರುವ ಜನರು ಮತ್ತು ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವವರು ಹೆಚ್ಚು ಜಾಗರೂಕರಾಗಿರಬೇಕು. ದುರ್ಬಲರಿಗೆ ಮಾರಣಾಂತಿಕ ತೊಂದರೆಗಳನ್ನು ಉಂಟುಮಾಡುವ ಸಾಧ್ಯತೆಯಿದೆ.

ಗರ್ಭಿಣಿಯಲ್ಲಿ ಈ ವರ್ಷದ ಮೊದಲ ಪ್ರಕರಣ ಪತ್ತೆಯಾಗಿದ್ದರೆ, ನಂತರ ಮತ್ತೆ 13 ಜಿಕಾ ವೈರಸ್‌ ಪ್ರಕರಣಗಳು ಸಹ ಪತ್ತೆಯಾಗಿದೆ. ಈ ಎಲ್ಲಾ ಮಾದರಿಗಳನ್ನು ಈಗ ಎನ್ಐವಿ ಪುಣೆಗೆ ಕಳುಹಿಸಲಾಗಿದೆ.

ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಕೈಗಾರಿಕೆ, ಪಂಚಾಯತಿ ರಾಜ್, ಪುರಸಭೆಯ ನಿಗಮಗಳ ಇಲಾಖೆಗಳೊಂದಿಗೆ ಸಭೆಗಳನ್ನು ನಡೆಸುವುದು, ಜಿಕಾ ಸೇರಿದಂತೆ ವೆಕ್ಟರ್‌ನಿಂದ ಹರಡುವ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣದಲ್ಲಿ  ಪ್ರಮುಖ ಪಾತ್ರ ವಹಿಸುವಂತೆ ಇಲಾಖೆಯ ಸುತ್ತೋಲೆ ತಿಳಿಸಿದೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com