ವ್ಯಕ್ತಿ ನೀರುಪಾಲು
ರಾಜ್ಯ
ಕೊಡಗಿನಲ್ಲಿ ಮಳೆ ಆರ್ಭಟ; ಹೊಳೆ ದಾಟುವಾಗ 70 ವರ್ಷದ ವ್ಯಕ್ತಿ ನೀರು ಪಾಲು
ಕಾಫಿನಾಡು ಕೊಡಗಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಹೊಳೆದಾಟುವಾಗ 70 ವರ್ಷದ ವ್ಯಕ್ತಿ ನೀರು ಪಾಲಾಗಿರುವ ಘಟನೆ ಬುಧವಾರ ನಡೆದಿದೆ.
ಮಡಿಕೇರಿ: ಕಾಫಿನಾಡು ಕೊಡಗಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಹೊಳೆದಾಟುವಾಗ 70 ವರ್ಷದ ವ್ಯಕ್ತಿ ನೀರು ಪಾಲಾಗಿರುವ ಘಟನೆ ಬುಧವಾರ ನಡೆದಿದೆ.
ಕೊಡಗಿನ ಮಡೆನಾಡು ಬಳಿ ತುಂಬಿ ಹರಿಯುತ್ತಿದ್ದ ಹೊಳೆಯನ್ನು ದಾಟುತ್ತಿದ್ದಾಗ 70 ವರ್ಷದ ವ್ಯಕ್ತಿಯೊಬ್ಬರು ನೀರಿನ ರಭಸದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಬುಧವಾರ ಸಂಜೆ ವೇಳೆಯಲ್ಲಿ ಈ ಘಟನೆ ವರದಿಯಾಗಿದ್ದು, ಸಂತ್ರಸ್ಥ ವ್ಯಕ್ತಿಯನ್ನು ಚಿನ್ನಪ್ಪ ಎಂದು ಗುರುತಿಸಲಾಗಿದೆ.
ಚಿನ್ನಪ್ಪ ಅವರು ಮಡಿಕೇರಿ ತಾಲ್ಲೂಕಿನ ಮಡೆನಾಡು ವ್ಯಾಪ್ತಿಯ ಅವಂಡುರು ಗ್ರಾಮದ ನಿವಾಸಿಯಾಗಿದ್ದು, ಅವರು ವಿಕಲಚೇತನರಾಗಿದ್ದರು ಎಂದು ತಿಳಿದುಬಂದಿದೆ. ಹೊಳೆ ದಾಟುವಾಗ ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಇನ್ನು ಚಿನ್ನಪ್ಪ ಅವರ ದೇಹಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮಳೆಯ ನಡುವೆಯೂ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಈ ವರೆಗೂ ಮೃತದೇಹ ಪತ್ತೆಯಾಗಿಲ್ಲ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ