ಸರ್ಕಾರ ಮೇಕೆದಾಟು ಅಣೆಕಟ್ಟು ಕಟ್ಟಿಯೇ ಸಿದ್ದ ಎನ್ನುತ್ತಿದೆ, ಆದರೆ ಪರಿಸರದ ಮೇಲೆ ಅದರ ಪ್ರಭಾವವೇನು: ಪರಿಸರವಾದಿಗಳ ಪ್ರಶ್ನೆ

ಮೇಕೆದಾಟುವಿನಲ್ಲಿ ಜಲ ವಿದ್ಯುತ್ ಮತ್ತು ಕುಡಿಯುವ ನೀರು ಯೋಜನೆಗೆ ಅಣೆಕಟ್ಟು ನಿರ್ಮಿಸುವುದಕ್ಕೆ ರಾಜ್ಯದ ಎಲ್ಲಾ ಪಕ್ಷಗಳು ಬೆಂಬಲ ಸೂಚಿಸುತ್ತಿವೆ. ಆದರೆ ರಾಜಕೀಯ ನಾಯಕರ ಈ ಒಗ್ಗಟ್ಟು ಪರಿಸರ ಸಂರಕ್ಷಣಾವಾದಿಗಳು ಮತ್ತು ನಾಗರಿಕರಲ್ಲಿ ಆತಂಕವನ್ನುಂಟುಮಾಡಿದೆ.
ಮೇಕೆದಾಟು ಸ್ಥಳ
ಮೇಕೆದಾಟು ಸ್ಥಳ
Updated on

ಬೆಂಗಳೂರು: ಮೇಕೆದಾಟುವಿನಲ್ಲಿ ಜಲ ವಿದ್ಯುತ್ ಮತ್ತು ಕುಡಿಯುವ ನೀರು ಯೋಜನೆಗೆ ಅಣೆಕಟ್ಟು ನಿರ್ಮಿಸುವುದಕ್ಕೆ ರಾಜ್ಯದ ಎಲ್ಲಾ ಪಕ್ಷಗಳು ಬೆಂಬಲ ಸೂಚಿಸುತ್ತಿವೆ. ಆದರೆ ರಾಜಕೀಯ ನಾಯಕರ ಈ ಒಗ್ಗಟ್ಟು ಪರಿಸರ ಸಂರಕ್ಷಣಾವಾದಿಗಳು ಮತ್ತು ನಾಗರಿಕರಲ್ಲಿ ಆತಂಕವನ್ನುಂಟುಮಾಡಿದೆ. ಯೋಜನೆಯನ್ನು ಕೈಗೆತ್ತಿಕೊಳ್ಳುವ ಮೊದಲು, ಪರಿಸರ ಪ್ರಭಾವದ ಮೌಲ್ಯಮಾಪನ (ಇಐಎ) ಅಧ್ಯಯನ, ಅರಣ್ಯ ಭೂ ತಿರುವು ಯೋಜನೆ ವರದಿ ಮತ್ತು ಸಾರ್ವಜನಿಕ ಸಮಾಲೋಚನೆ ಬಗ್ಗೆ ಪ್ರಶ್ನೆಯೆತ್ತಿದ್ದಾರೆ.

ಕೇವಲ ಪರಿಸರವಾದಿಗಳು ಮಾತ್ರವಲ್ಲದೆ ಪರಿಸರ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡ ಅಚ್ಚರಿ ಮೂಡಿಸಿ ಪ್ರಶ್ನೆಯೆತ್ತಿದ್ದು ಈ ಬಗ್ಗೆ ಸರ್ಕಾರದಿಂದ ಯಾವುದೇ ವರದಿಗಳು ಮುಂದೆ ಹೋಗದಿರುವಾಗ ಹೇಗೆ ಕೈಗೆತ್ತಿಕೊಳ್ಳುತ್ತಾರೆ ಎಂದು ಕೇಳಿದ್ದಾರೆ.

ಇಷ್ಟು ದೊಡ್ಡ ಪ್ರಮಾಣದ ಯಾವುದೇ ಯೋಜನೆಗೆ ಇಐಎ ಅಗತ್ಯವಿದೆ. ಅಲ್ಲದೆ, ಇದು ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ (ಸಿಡಬ್ಲ್ಯೂಎಸ್) ಇರುವುದರಿಂದ, ಪರಿಸರ ಮತ್ತು ಅರಣ್ಯ ಸಚಿವಾಲಯವು ನೇರವಾಗಿ ಇಐಎಯನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರ (ಇಐಎಎ) ಭಾಗಿಯಾಗುವುದಿಲ್ಲ. ಆದರೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಸಾರ್ವಜನಿಕ ಸಮಾಲೋಚನೆಗಾಗಿ ಭಾಗಿಯಾಗಬೇಕಾಗುತ್ತದೆ, ತಮಿಳು ನಾಡು ಕೂಡ ಇದರಲ್ಲಿ ಭಾಗಿಯಾಗಿರುವುದರಿಂದ ಇದು ದೊಡ್ಡ ಯೋಜನೆಗಳ ಸಂದರ್ಭದಲ್ಲಿ ಅತ್ಯಗತ್ಯವಾಗಿರುತ್ತದೆ ವಿವರವಾದ ಯೋಜನಾ ವರದಿಗೆ ಇಐಎ ಅಗತ್ಯವಿದೆ, ಅದು ಇಲ್ಲಿಯವರೆಗೆ ಮಾಡಿಲ್ಲ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸಚಿವ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರೊಂದಿಗೆ ನಿನ್ನೆ ಮೇಕೆದಾಟು ಯೋಜನೆ ಬಗ್ಗೆ ಚರ್ಚಿಸಿದ್ದಾರೆ. ಇನ್ನು ಕೊಡಗಿನ ಪರಿಸರ ಸಂರಕ್ಷಣಾವಾದಿಗಳು ‘ಕಾವೇರಿ ಪ್ರಾಜೆಕ್ಟ್ ರಕ್ಷಿಸಿ' ಅಂಗವಾಗಿ ನ್ಯಾಯಾಲಯದಲ್ಲಿ ಪ್ರಕರಣ ಹೂಡುತ್ತೇವೆ ಎಂದು ಹೇಳಿದ್ದಾರೆ.

ಭೂ ತಿರುವಿಗಾಗಿ ಯಾವುದೇ ಪ್ರಸ್ತಾಪವನ್ನು ಮಾಡಲಾಗಿಲ್ಲ, ವಿವರವಾದ ಸಮೀಕ್ಷೆಯನ್ನೂ ಮಾಡಿಲ್ಲ “ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರವಾಗಿದ್ದರೂ, ನಿಯಮಗಳನ್ನು ಪಾಲಿಸಬೇಕಾಗಿದೆ ಎಂಬುದನ್ನು ಅರಿತುಕೊಳ್ಳಲು ಸರ್ಕಾರ ವಿಫಲವಾಗಿದೆ ಎಂದು ಅಧಿಕಾರಿ ಹೇಳುತ್ತಾರೆ.

ಸರ್ಕಾರದ ಪ್ರಕಾರ ಇದು 9 ಸಾವಿರ ಕೋಟಿ ರೂಪಾಯಿಗಳ ಯೋಜನೆಯಾಗಿದ್ದು, 5 ಸಾವಿರದ 100 ಹೆಕ್ಟೇರ್ ಸಿಡಬ್ಲ್ಯುಎಸ್ ಭೂಮಿಯನ್ನು ಮುಳುಗಿಸುತ್ತದೆ, ಅದರಲ್ಲಿ 227 ಹೆಕ್ಟೇರ್ ಆದಾಯ ಭೂಮಿಯಾಗಿದ್ದು, ಸುಮಾರು 400 ಮೆಗಾವ್ಯಾಟ್ ವಿದ್ಯುತ್ ಮತ್ತು 4.75 ಟಿಎಂಸಿಎಫ್ ನೀರನ್ನು ಉತ್ಪಾದಿಸುತ್ತದೆ.

ಈ ಯೋಜನೆಯು ಸಿಡಬ್ಲ್ಯುಎಸ್, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಮತ್ತು ಚಾಮರಾಜನಗರ ಕಾಡುಗಳ ಮೇಲೆ ಪರಿಣಾಮ ಬೀರುತ್ತದೆ, ಇದು ಹೆಚ್ಚು ಮಾನವ-ಪ್ರಾಣಿಗಳ ಸಂಘರ್ಷಕ್ಕೆ ಕಾರಣವಾಗುತ್ತದೆ, ಗಗನಚುಕ್ಕಿ-ಬರಚುಕ್ಕಿ ಜಲಪಾತ, ಹೊಗನಕಲ್ ಜಲಪಾತ ಮತ್ತು ಉದ್ದೇಶಿತ ಸಾಗರ ಮಾಲಾ ಯೋಜನೆ ಮೇಲೆ ಪರಿಣಾಮ ಬೀರುತ್ತದೆ ಎಂದು ಪರಿಸರ ಅಧಿಕಾರಿಗಳು ಹೇಳುತ್ತಾರೆ.

ಶರಾವತಿ ಯೋಜನೆಯ ತಪ್ಪುಗಳಿಂದ ಸರ್ಕಾರ ಕಲಿಯಬೇಕು, ಇದರಿಂದಾಗಿ ನದಿ, ಕೊಳಗಳು ಮತ್ತು ಸಾಗರದ ಕೆಳಗಿರುವ ಲವಣಾಂಶ ಹೆಚ್ಚಾಗಿದೆ, ಇದು ಮೀನು ಕೊಯ್ಲು ಮೇಲೆ ಪರಿಣಾಮ ಬೀರುತ್ತದೆ ಎಂದು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದರೆ, ಹೆಚ್ಚುವರಿ ನೀರು ಏನೂ ಇಲ್ಲ, ಅದನ್ನು ಸರ್ಕಾರ ಸಂಗ್ರಹಿಸುವುದಾಗಿ ಹೇಳುತ್ತಿದೆ. ಇದು ಮಳೆನೀರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ, ಕೆಳಗಡೆ ಮತ್ತು ಸಾಗರಗಳಿಗೆ ಅಗತ್ಯವಾದ ಹೆಚ್ಚುವರಿ ರನ್-ಆಫ್ ಆಗಿದೆ. ಅಣೆಕಟ್ಟು ಕಟ್ಟಿದರೆ ಬರಗಾಲ ಬರಬಹುದು ಎಂದು ತಮಿಳು ನಾಡಿಗೆ ಗೊತ್ತಿದೆ, ಅದಕ್ಕಾಗಿ ವಿರೋಧಿಸುತ್ತಿದೆ ಎಂದು ಪರಿಸರ ವಿಜ್ಞಾನ ಕೇಂದ್ರದ ಪ್ರೊ.ಟಿ.ವಿ.ರಾಮಚಂದ್ರ ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com