

ಬೆಂಗಳೂರು: ಸ್ಥಿರಾಸ್ಥಿ ಕ್ಷೇತ್ರವನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 35-45 ಲಕ್ಷ ರೂಪಾಯಿಗಳ ಫ್ಲಾಟ್ ಗಳ ನೋಂದಣಿ ಮೇಲಿನ ಸ್ಟಾಂಪ್ ಸುಂಕವನ್ನು ಶೇ.5 ರಿಂದ ಶೇ.3 ಕ್ಕೆ ಇಳಿಕೆ ಮಾಡಿದೆ.
ಜು.22 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಈ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಮಾಹಿತಿ ನೀಡಿದ್ದಾರೆ.
ಕೈಗೆಟುಕುವ ದರದಲ್ಲಿ ಗೃಹ ಖರೀದಿಸುವವರಿಗೆ ರಿಲೀಫ್ ನೀಡುವುದಕ್ಕಾಗಿ ಸ್ಟಾಂಪ್ ಸುಂಕವನ್ನು ಕಡಿಮೆ ಮಾಡಿರುವುದಾಗಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
"ಈ ಸೌಲಭ್ಯ ಮೊದಲ ಅಪಾರ್ಟ್ ಮೆಂಟ್ ನ್ನು ಖರೀದಿಸುತ್ತಿರುವವರಿಗೆ ಮಾತ್ರ ಲಭ್ಯವಾಗಲಿದೆ. ಮಾರ್ಗಸೂಚಿ ದರವನ್ನು ಏರಿಕೆ ಮಾಡುವ ಯಾವುದೇ ಪ್ರಸ್ತಾವವಿಲ್ಲ" ಎಂದು ಸಚಿವರು ತಿಳಿಸಿದ್ದಾರೆ.
ಇನ್ನು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮುಂದಿನ ಎರಡು ವರ್ಷಗಳಲ್ಲಿ 8,000 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಬಡವರಿಗಾಗಿ 5 ಲಕ್ಷ ಮನೆಗಳ ನಿರ್ಮಾಣಕ್ಕೂ ಸಚಿವ ಸಂಪುಟ ಅನುಮೋದನೆ ನೀಡಿದೆ.
Advertisement