ಕೋವಿಡ್ ಮತ್ತು ಪ್ರವಾಹ ನಿರ್ವಹಣೆಗೆ ತಮ್ಮ ಮೊದಲ ಆದ್ಯತೆ: ಸಿಎಂ ಬಸವರಾಜ ಬೊಮ್ಮಾಯಿ

ಪ್ರಸ್ತುತ ನಮ್ಮ ಮೊದಲ ಆದ್ಯತೆ ಕೋವಿಡ್ ಮತ್ತು ಪ್ರವಾಹ ನಿರ್ವಹಣೆ ಎಂದು ಕರ್ನಾಟಕದ ನೂತನ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ (ಕೆಪಿಎನ್ ಚಿತ್ರ)
ಸಿಎಂ ಬಸವರಾಜ ಬೊಮ್ಮಾಯಿ (ಕೆಪಿಎನ್ ಚಿತ್ರ)
Updated on

ಬೆಂಗಳೂರು: ಪ್ರಸ್ತುತ ನಮ್ಮ ಮೊದಲ ಆದ್ಯತೆ ಕೋವಿಡ್ ಮತ್ತು ಪ್ರವಾಹ ನಿರ್ವಹಣೆ ಎಂದು ಕರ್ನಾಟಕದ ನೂತನ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಸಂದರ್ಶನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಲವಾರು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಅಲ್ಲದೆ ಕೋವಿಡ್ ಸಾಂಕ್ರಾಮಿಕ ಕೂಡ ಇನ್ನೂ ಮುಗಿದಿಲ್ಲ.. ಹೀಗಾಗಿ ನಮ್ಮ ಸರ್ಕಾರದ ಮೊದಲ ಆದ್ಯತೆ  ಈ ಎರಡು ವಿಚಾರಗಳಿಗೆ ಇರುತ್ತದೆ ಎಂದು ಹೇಳಿದರು. 

ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ನೀವು ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿ ಸೇವೆ ಸಲ್ಲಿಸಿದ್ದೀರಿ.. ಹೀಗಾಗಿ ಪ್ರವಾಹ ನಿರ್ವಹಣೆ ಸಂಬಂಧ ನಿಮ್ಮ ಯೋಜನೆ ಏನು?
ಪ್ರವಾಹ ನಿರ್ವಹಣೆ ಸಂಬಂಧ ಯೋಜನೆ ರೂಪಿಸಿದ್ದೇವೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಮತ್ತು ಹಾನಿಯನ್ನು ನಿರ್ಣಯಿಸಲು ಮತ್ತು ಮೇಲ್ವಿಚಾರಣೆ ಮಾಡುವ ಯೋಜನೆಯನ್ನು ನಾನು ರೂಪಿಸಿದ್ದೇನೆ. ಪ್ರವಾಹದಿಂದ ಆಗುವ ಹಾನಿ ಕನಿಷ್ಠ ಎಂದು ಖಚಿತಪಡಿಸಿಕೊಳ್ಳಲು ನಾವು ತುಂಬಾ  ಶ್ರಮಿಸುತ್ತಿದ್ದೇವೆ. ಅದರಂತೆ ಉತ್ತರ ಕನ್ನಡದಿಂದ ತಮ್ಮ ಪ್ರವಾಸ ಆರಂಭಿಸುತ್ತೇವೆ.

ಸಂಪುಟ ರಚನೆ ಯಾವಾಗ.. ಸ್ವಾತಂತ್ರ್ಯ ದಿನಾಚರಣೆಗೂ ಮೊದಲು ಇದನ್ನು ನಿರೀಕ್ಷಿಸಬಹುದೇ?
ಕೇಂದ್ರ ನಾಯಕತ್ವವನ್ನು, ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಲು ನಾನು ದೆಹಲಿಗೆ ಹೋಗಲಿದ್ದೇನೆ ಮತ್ತು ಅವರೊಂದಿಗೆ ಮತ್ತು ನಮ್ಮ ಪಕ್ಷದ ರಾಜ್ಯ ಮುಖಂಡರೊಂದಿಗೆ ಸಮಾಲೋಚಿಸಿ ಸಂಪುಟವನ್ನು ವಿಸ್ತರಿಸುತ್ತೇನೆ.

ನಿಮ್ಮ ಪ್ರಸ್ತುತ ಆದ್ಯತೆ ಏನು?
ಇದೀಗ, ಕೋವಿಡ್ ಮತ್ತು ಪ್ರವಾಹವನ್ನು ಎದುರಿಸುವುದೇ ನಮ್ಮ ಮೊದಲ ಆದ್ಯತೆಯಾಗಿದೆ, ಇನ್ನೇನೂ ಇಲ್ಲ.

ಉತ್ತಮ ಹಣಕಾಸಿನ ಶಿಸ್ತಿನ ಮೂಲಕ ಶೇ. 5 ರಷ್ಟು ವೆಚ್ಚವನ್ನು ಕಡಿತಗೊಳಿಸುವ ಬಗ್ಗೆ ನೀವು ಮಾತನಾಡಿದ್ದೀರಿ. ಈ ಬಗ್ಗೆ ಯಾವಾಗ ಕೆಲಸ ಪ್ರಾರಂಭಿಸುತ್ತೀರಿ?
ಕನಿಷ್ಠ ಶೇ.5 ರಷ್ಟು ವ್ಯರ್ಥ ವೆಚ್ಚವನ್ನು ಕಡಿತಗೊಳಿಸಬೇಕಾಗಿದೆ ಎಂದು ನಾನು ಹೇಳಿದ್ದೇನೆ. ನಾವು ಅದನ್ನು ಇಂದಿನಿಂದಲೇ ಪ್ರಾರಂಭಿಸುತ್ತೇವೆ, ನಾನು ನನ್ನ ಅಧಿಕಾರಿಗಳೊಂದಿಗೆ ಮಾತನಾಡಿದ್ದು,  ಸಾಧ್ಯವಾದಲ್ಲೆಲ್ಲಾ ವೆಚ್ಚವನ್ನು ಕಡಿತಗೊಳಿಸುವಂತೆ ಅವರಿಗೆ ಸೂಚನೆ ನೀಡಿದ್ದೇನೆ. ಈ ಉಳಿತಾಯವು ದೊಡ್ಡ  ಮೊತ್ತದ ಹಣವಾಗಿರುತ್ತದೆ.

ನೀವು ಮೂರು ಬಡವರ ಪರ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದ್ದೀರಿ, ಇದಲ್ಲದೇ ಬಡವರಿಗೆ ಅನುಕೂಲವಾಗುವಂತೆ ನಿಮ್ಮ ಬಳಿ ಬೇರೆ ಕಾರ್ಯಕ್ರಮಗಳಿವೆಯೇ?
ಸಹಜವಾಗಿ, ಮುಂದಿನ ದಿನಗಳಲ್ಲಿ, ಪಕ್ಷದ ಮುಖಂಡರೊಂದಿಗೆ ಸಮಾಲೋಚಿಸಿ, ನಿಜವಾದ ಅವಶ್ಯಕತೆ ಇರುವಲ್ಲೆಲ್ಲಾ ನಾವು ಕಾರ್ಯಕ್ರಮಗಳನ್ನು ಪ್ರಕಟಿಸುತ್ತೇವೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com