ಇ-ಗ್ರಂಥಾಲಯ
ಇ-ಗ್ರಂಥಾಲಯ

ಸಾವಿರಾರು ಜನರಿಗೆ ವರದಾನವಾದ ಇ-ಗ್ರಂಥಾಲಯ: ಇತರೆ ನಗರಗಳ ಗಮನ ಸೆಳೆಯುತ್ತಿರುವ ತುಮಕೂರಿನ 'ಡಿಜಿಟಲ್ ಲೈಬ್ರರಿ'

ಕೋವಿಡ್ ಲಾಕ್ಡೌನ್ ಸಮಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವವರು ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗ ತೋರಿದ್ದ ತುಮಕೂರಿನ ಇ-ಗ್ರಂಥಾಲಯ ಇದೀಗ ಹಲವು ನಗರಗಳ ಗಮನವನ್ನು ಸೆಳೆಯುತ್ತಿದೆ. 
Published on

ತುಮಕೂರು: ಕೋವಿಡ್ ಲಾಕ್ಡೌನ್ ಸಮಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವವರು ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗ ತೋರಿದ್ದ ತುಮಕೂರಿನ ಇ-ಗ್ರಂಥಾಲಯ ಇದೀಗ ಹಲವು ನಗರಗಳ ಗಮನವನ್ನು ಸೆಳೆಯುತ್ತಿದೆ. 

ತುಮಕುರು ಸ್ಮಾರ್ಟ್ ಸಿಟಿ ಲಿಮಿಟೆಡ್ (ಟಿಎಸ್ಸಿಎಲ್) ಜಿಲ್ಲಾ ಕೇಂದ್ರ ಗ್ರಂಥಾಲಯ ಆವರಣದಲ್ಲಿ ರೂ.1.45 ಕೋಟಿ ವೆಚ್ಚದಲ್ಲಿ ಇ-ಗ್ರಂಥಾಲಯವನ್ನು ಆರಂಭಿಸಿತ್ತು. ಈ ಗ್ರಂಥಾಲಯ ಇದೀಗ ಹಲವರ ಗಮನವನ್ನು ಸೆಳೆಯುತ್ತಿದೆ.

2019ರಲ್ಲಿ ಈ ಡಿಜಿಟಲ್ ಲೈಬ್ರರಿ ಆರಂಭವಾಗಿದ್ದು, ಈವರೆಗೆ 10 ಲಕ್ಷ ಮಂದಿ ಡಿಜಿಟಲ್ ಲೈಬ್ರರಿಯನ್ನು ಬಳಕೆ ಮಾಡಿದ್ದಾರೆ. ಅಲ್ಲದೆ, 11 ಸಾವಿರ ಮಂದಿ ನೇರವಾಗಿ ಗ್ರಂಥಾಲಯಕ್ಕೆ ಭೇಟಿ ನೀಡಿದ್ದಾರೆ. 

ನನ್ನ ಸ್ನೇಹಿತೆ ಸುಧಾ ಡಿಜಿಟಲ್ ಲೈಬ್ರರಿಯ ಸಹಾಯದಿಂದ ಚೆನ್ನಾಗಿ ಓದಿಕೊಂಡು ಸರ್ಕಾರಿ ಉದ್ಯೋಗವನ್ನು ಪಡೆದುಕೊಂಡಿಕೊಂಡಿದ್ದಾರೆ. ಇದೀಗ ನಾನೂ ಕೂಡ ಆಕೆಯನ್ನು ಅನುಸರಿಸುತ್ತಿದ್ದೇನೆ. ರೈಲ್ವೇ ಇಲಾಖೆಯಲ್ಲಿ ಉದ್ಯೋಗ ಪಡೆಯುವ ಗುರಿಯನ್ನು ಹೊಂದಿದ್ದೇನೆಂದು ಎಂಎ, ಬಿ.ಇಡಿ ಪದವೀಧರೆ ನನ್ಲಿನಾಕ್ಷಿ ಎಂಬುವವರು ಹೇಳಿದ್ದಾರೆ.

ನೀಟ್'ಗೆ ಸಿದ್ಧತೆ ನಡೆಸುತ್ತಿರುವ ಹಯಗ್ರೀವಾ ಎಂಬುವವರೂ ಕೂಡ ಡಿಜಿಟಲ್ ಲೈಬ್ರರಿಯ ವ್ಯವಸ್ಥೆಯನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮನೆಯಲ್ಲಿ ಕಂಪ್ಯೂಟರ್ ಇಲ್ಲ. ಡಿಜಿಟಲ್ ಲೈಬ್ರರಿ ನನಗೆ ಬಹಳ ಸಹಾಯಕವಾಗಿದೆ ಎಂದು ತಿಳಿಸಿದ್ದಾರೆ. 

ಇ-ಗ್ರಂಥಾಲಯ ಆರಂಭವಾಗಿರುವ ಹಿನ್ನೆಲೆಯಲ್ಲಿ ಕುಗ್ರಾಮಗಳಲ್ಲಿದ್ದುಕೊಂಡು ಸಂಕಷ್ಟ ಅನುಭವಿಸುತ್ತಿದ್ದ ಕೆಲವರು ಗ್ರಂಥಾಲಯಗಳ ಬಳಿ ಬಾಡಿಗೆಗೆ ರೂಮ್ ಗಳನ್ನು ಪಡೆದುಕೊಂಡು ವ್ಯವಸ್ಥೆಯನ್ನು ಬಳಕೆ ಮಾಡಿಕೊಳ್ಳುತ್ತಿರುವುದೂ ಕೂಡ ಕಂಡು ಬರುತ್ತಿದೆ.

ಸ್ನಾತಕೋತ್ತರ ಪದವೀಧರರಾಗಿರುವ ನವೀನ್ ಅವರು ಪಾವಗಡ ತಾಲ್ಲೂಕಿನ ಹೊಸಹಳ್ಳಿ ತಾಂಡಾ ಗ್ರಾಮದ ನಿವಾಸಿಯಾಗಿದ್ದು, ಇವರು ಇ-ಗ್ರಂಥಾಲಯ ಬಳಸಿಕೊಂಡು ಕೆಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com