ರಾಯಚೂರು: ಇಡೀ ದೇವದುರ್ಗ ಕ್ಷೇತ್ರಕ್ಕೆ ಅನ್ನ ದಾಸೋಹ ಆರಂಭಿಸಿದ ಶಾಸಕ ಶಿವನಗೌಡ ನಾಯಕ್ 

ಜಿಲ್ಲೆಯ ದೇವದುರ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ಶಾಸಕ ಕೆ ಶಿವನಗೌಡ ನಾಯಕ್‌ ಅವರು ಅನ್ನ ದಾಸೋಹ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. 
ಅನ್ನ ದಾಸೋಹಕ್ಕೆ ಆಹಾರ ಕೊಂಡೊಯ್ಯುತ್ತಿರುವ ವಾಹನಕ್ಕೆ ಪೂಜೆ ಸಲ್ಲಿಸುತ್ತಿರುವ ಶ್ರೀ ಬೂದಿ ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿಗಳು
ಅನ್ನ ದಾಸೋಹಕ್ಕೆ ಆಹಾರ ಕೊಂಡೊಯ್ಯುತ್ತಿರುವ ವಾಹನಕ್ಕೆ ಪೂಜೆ ಸಲ್ಲಿಸುತ್ತಿರುವ ಶ್ರೀ ಬೂದಿ ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿಗಳು
Updated on

ರಾಯಚೂರು: ಜಿಲ್ಲೆಯ ದೇವದುರ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ಶಾಸಕ ಕೆ ಶಿವನಗೌಡ ನಾಯಕ್‌ ಅವರು ಅನ್ನ ದಾಸೋಹ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. 

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಶಿವನಗೌಡ ನಾಯಕ್ ಅವರು, ತಾಯಿ ಮಹಾದೇವಮ್ಮನವರ ಇಚ್ಛೆಯಂತೆ ಇಡೀ ತಾಲೂಕಿನ 33 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳಿಗೆ ಆಹಾರ ವಿತರಣೆ ಕಾರ್ಯಕ್ರಮ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ. 

ಈಗಾಗಲೇ ತಾಲೂಕಿನ 46 ಆಸ್ಪತ್ರೆಗಳಿಗೆ ಆಹಾರ ಪೊಟ್ಟಣ, ಕುಡಿಯುವ ನೀರು ಮತ್ತು ಮೊಟ್ಟೆ ಸರಬರಾಜು ಮಾಡಲಾಗುತ್ತಿದೆ. ಇದೀಗ ಹೆಚ್ಚುವರಿಯಾಗಿ 33 ಗ್ರಾಮ ಪಂಚಾಯಿಗಳ ವ್ಯಾಪ್ತಿಯ ಸುಮಾರು 30 ಸಾವಿರ ಜನರಿಗೆ ಊಟ ಕೊಡುವ ಉದ್ದೇಶ ಹೊಂದಲಾಗಿದ್ದು, ಜಿಲ್ಲಾ ಪಂಚಾಯಿತಿವಾರು ಕಾರ್ಯಕ್ರತರು ಕಾರ್ಯಕ್ರಮದ ಯಶಸ್ವಿಗೆ ಉದ್ದೇಶಕ್ಕೆ ಅಣಿಯಾಗಿದ್ದಾರೆ. ಅಭಿಮಾನಿಗಳು ಈಗಾಗಲೇ ಮಾನ್ವಿ, ಸಿರವಾರ ಮತ್ತು ಲಿಂಗಸುಗೂರು ತಾಲೂಕುಗಳಲ್ಲಿಯೂ ಆಹಾರ ವಿತರಣೆ ನಡೆಸಿದ್ದು, ಕುಷ್ಠಗಿ, ಗಂಗಾವತಿ ತಾಲೂಕುಗಳಲ್ಲಿಯೂ ಕಾರ್ಯಕ್ರಮ ನಡೆಸುವುದಾಗಿ ತಿಳಿಸಿದ್ದಾರೆ. 

ಕೊರೋನಾದಂತಹ ಕಷ್ಟ ಕಾಲದಲ್ಲಿ ಎಲ್ಲರ ಸಹಕಾರ ಅತ್ಯಗತ್ಯ. ಇದೊಂದು ಪುಣ್ಯದ ಕೆಲಸ ಎಂದು ಭಾವಿಸಿರುವೆ. ಇಡೀ ಕಲ್ಯಾಣ ಕರ್ನಾಟಕದಲ್ಲೂ ಕಾರ್ಯಕರ್ತರು, ಅಭಿಮಾನಿಗಳು ಅನ್ನದಾಸೋಹ ನಡೆಸಲು ಮುಂದೆ ಬಂದಿದ್ದು, ಹಂತ ಹಂತವಾಗಿ ಸೇವೆ ಒದಗಿಸಲಾಗುವುದು ಎಂದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com