ಸಿಡಿ ಪ್ರಕರಣ: ನರೇಶ್ ಗೌಡ ಮತ್ತು ಶ್ರವಣ್ ಗೆ ನಿರೀಕ್ಷಣಾ ಜಾಮೀನು

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ನರೇಶ್ ಗೌಡ ಮತ್ತು ಶ್ರವಣ್ ಗೆ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. 
ನರೇಶ್ ಗೌಡ-ಶ್ರವಣ್
ನರೇಶ್ ಗೌಡ-ಶ್ರವಣ್
Updated on

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ನರೇಶ್ ಗೌಡ ಮತ್ತು ಶ್ರವಣ್ ಗೆ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. 

ಸಿಡಿ ಪ್ರಕರಣದ ಕಿಂಗ್ ಪಿನ್ ಗಳೆಂದು ಹೇಳಾಗುತ್ತಿರುವ ನರೇಶ್ ಗೌಡ ಹಾಗೂ ಶ್ರವಣ್ ಗೆ ಬೆಂಗಳೂರಿನ 91ನೇ ಸಿಸಿಹೆಚ್ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. 

ಸಿಡಿ ಲೀಕ್ ಬಳಿಕ ಕಳೆದ ಮಾರ್ಚ್ 2ರಿಂದ ತಲೆಮರೆಸಿಕೊಂಡಿದ್ದ ನರೇಶ್ ಗೌಡ ಹಾಗೂ ಶ್ರವಣ್ ನನ್ನು ಬಂಧಿಸಲು ತನಿಖಾ ತಂಡ ನಿರಂತರ ಶೋಧಕಾರ್ಯ ನಡೆಸುತ್ತಿತ್ತು. 

ಇನ್ನು ಕಳೆದ ವಾರ ರಮೇಶ್ ಜಾರಕಿಹೊಳಿ ಅವರು ವಿಡಿಯೋದಲ್ಲಿರುವುದು ನಾನೇ. ಅದು ಸಹಮತದ ಲೈಂಗಿಕ ಸಂಪರ್ಕವಾಗಿತ್ತು. ನನ್ನನ್ನು ಹನಿಟ್ರ್ಯಾಪ್ ಮಾಡಲಾಗಿತ್ತು ಎಂದು ಹೇಳಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com