ಬೆಂಗಳೂರು: 90 ಲಕ್ಷ ರು. ಲಪಟಾಯಿಸಿ ಕೊಲ್ಕೋತ್ತಾಗೆ ಪರಾರಿಯಾಗುತ್ತಿದ್ದ ಕಳ್ಳರ ಬಂಧನ

ಮನೆಯೊಂದರಲ್ಲಿ  90 ಲಕ್ಷ ಕದ್ದುಕೊಂಡು ಪಶ್ಚಿಮ ಬಂಗಾಳಕ್ಕೆ ಕಾರಿನಲ್ಲಿ ಪರಾರಿಯಾಗುತ್ತಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು

ಬೆಂಗಳೂರು: ಮನೆಯೊಂದರಲ್ಲಿ  90 ಲಕ್ಷ ಕದ್ದುಕೊಂಡು ಪಶ್ಚಿಮ ಬಂಗಾಳಕ್ಕೆ ಕಾರಿನಲ್ಲಿ ಪರಾರಿಯಾಗುತ್ತಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

ಸಂಜು ಸಹಾ ಹಾಗೂ ಶುಭಂಕರ್ ಬಂಧಿತ ಆರೋಪಿಗಳು. ಇವರನ್ನು ಆಂಧ್ರಪ್ರದೇಶದ ಚಿತ್ತೂರು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಬಾಗಲಗುಂಟೆ ಠಾಣೆ ವ್ಯಾಪ್ತಿಯ ಮನೆಯಲ್ಲಿ ಕಳ್ಳತನ ಎಸಗಿದ್ದ ಪ್ರಕರಣದಲ್ಲಿ ಅವರನ್ನು ಕಸ್ಟಡಿಗೆ ಪಡೆದು ಮಹಜರು ಮಾಡಲಾಗಿದೆ’ ಪೊಲೀಸರು ಬಂದು ವಿಷಯ ತಿಳಿಸುವವರೆಗೂ ಮನೆ ಮಾಲೀಕರಿಗೆ ಹಣ ಕಳ್ಳತನವಾಗಿರುವ ವಿಷಯ ತಿಳಿದಿರಲಿಲ್ಲ.

ಬಾಗಲಗುಂಟೆ ಠಾಣೆ ವ್ಯಾಪ್ತಿಯ ನಿವಾಸಿ ಈರಪ್ಪ ಎಂಬುವರ ಮನೆಯಲ್ಲಿ ಆರೋಪಿಗಳು 90 ಲಕ್ಷ ಕದ್ದಿದ್ದರು. ’ಕಾರು ಬಾಡಿಗೆ ಮಾಡಿಕೊಂಡು ಆರೋಪಿಗಳು ಪಶ್ಚಿಮ ಬಂಗಾಳಕ್ಕೆ ಹೊರಟಿದ್ದರು. ಆಂಧ್ರಪ್ರದೇಶ ಚಿತ್ತೂರು ಬಳಿ ಚೆಕ್‌ಪೋಸ್ಟ್‌ನಲ್ಲಿ ಕಾರು ತಡೆದಿದ್ದ ಪೊಲೀಸರು, ಪರಿಶೀಲನೆ ನಡೆಸಿದ್ದರು. ಆರೋಪಿಗಳ ಬಳಿ  90 ಲಕ್ಷ ಪತ್ತೆಯಾಗಿತ್ತು. ಅದಕ್ಕೆ ಯಾವುದೇ ದಾಖಲೆ ನೀಡಿರಲಿಲ್ಲ ವಿಚಾರಣೆ ನಡೆಸಿದಾಗ ಕದ್ದ ವಿಚಾರ ತಿಳಿಸಿದ್ದರು.

ಸ್ಥಳ ಮಹಜರಿಗೆ ಬಂದಾಗ ಮನೆಯ ಮಾಲೀಕ ಈರಪ್ಪ ಮನೆಯಲ್ಲಿರಲಿಲ್ಲ, ನೆರೆಹೊರೆಯವರು ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ, ಚಿಂತಾಮಣಿಯಲ್ಲಿದ್ದ ಅವರು ವಾಪಸಾಗಿದ್ದಾರೆ. ತಮ್ಮ ಮೊಮ್ಮಗನ ಎಂಬಿಬಿಎಸ್ ಸೀಟ್ ಗಾಗಿ  ಮತ್ತು ಮನೆಯ ರೀಪೇರಿಗಾಗಿ ಹಣವನ್ನು ಸಂಬಂಧಿಕರಿಂದ ಹೊಂದಿಸಿದ್ದಾಗಿ ಈರಪ್ಪ ತಿಳಿಸಿದ್ದಾರೆ.ನಂತರ ಮಾಹಿತಿ ಸಂಗ್ರಹಿಸಿದ ಪೊಲೀಸರು ಹಣವನ್ನು ವಾಪಸ್ ಈರಪ್ಪ ಅವರಿಗೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com