ಪುರಾತತ್ವ ಇಲಾಖೆ ಸ್ಮಾರಕಗಳು ಒಪನ್: ಪ್ರವಾಸಿಗರ ಭೇಟಿಗಿಲ್ಲ ಅವಕಾಶ

ಜೂನ್ 16 ರಿಂದ ಕರ್ನಾಟಕದ ಪ್ರವಾಸಿಗರಿಗಾಗಿ ಎಎಸ್ಐ ಸ್ಮಾರಕಗಳನ್ನು ಮತ್ತೆ ತೆರೆಯಲು ಭಾರತೀಯ ಪುರಾತತ್ವ ಸಮೀಕ್ಷೆ ಆದೇಶ ಹೊರಡಿಸಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಹುಬ್ಬಳ್ಳಿ: ಜೂನ್ 16 ರಿಂದ ಕರ್ನಾಟಕದ ಪ್ರವಾಸಿಗರಿಗಾಗಿ ಎಎಸ್ಐ ಸ್ಮಾರಕಗಳನ್ನು ಮತ್ತೆ ತೆರೆಯಲು ಭಾರತೀಯ ಪುರಾತತ್ವ ಸಮೀಕ್ಷೆ ಆದೇಶ ಹೊರಡಿಸಿದೆ

ಜೂನ್ 16 ರಿಂದ ಸ್ಮಾರಕಗಳನ್ನು ತೆರೆಯಲಿದ್ದು, ಪ್ರವಾಸಿಗರ ಭೇಟಿಗೆ ಜಿಲ್ಲಾಡಳಿತ ಸಂದರ್ಭ ನೋಡಿ ನಿರ್ಧರಿಸಲಿದೆ. ಜೂನ್ 21ರ ವರೆಗೆ ಸ್ಮಾರಕಗಳನ್ನು ತೆರೆಯದಿರಲು ಎಎಸ್ ಐ ಹಂಪಿ ಸರ್ಕಲ್ ನಿರ್ಧಾರ ಕೈಗೊಂಡಿತ್ತು. ಕರ್ನಾಟಕಾದ್ಯಂತ ಅನ್ ಲಾಕ್ ಪರಿಸ್ಥಿತಿ ನೋಡಿಕೊಂಡು ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏಪ್ರಿಲ್ 15 ರ ಆದೇಶದಂತೆ, ಎಎಸ್ಐ ದೇಶಾದ್ಯಂತದ ಎಲ್ಲಾ ಸಂರಕ್ಷಿತ ಸ್ಮಾರಕಗಳಿಗೆ ಪ್ರವಾಸಿಗರನ್ನು ಪ್ರವೇಶವನ್ನು ನಿಷೇಧಿಸಿತ್ತು. ಆದರೆ ಸೋಮವಾರ ಜೂನ್ 16 ರಿಂದ ಸ್ಮಾರಕಗಳನ್ನು ತೆರೆಯಲು ಆದೇಶ ಹೊರಡಿಸಿದೆ. ವಿಪತ್ತು ನಿರ್ವಹಣೆಯ ಮಾರ್ಗಸೂಚಿಗಳ ಪ್ರಕಾರ ಸ್ಥಳೀಯ ಆಡಳಿತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕರ್ನಾಟಕದ ಹಲವಾರು ಭಾಗಗಳಲ್ಲಿ ಇನ್ನೂ ಲಾಕ್‌ಡೌನ್ ಮುಂದುವರಿದಿರುವ ಕಾರಣ ಪ್ರವಾಸಿಗರು ಬರಲು ಸಾಧ್ಯವಾಗುವುದಿಲ್ಲ.

ಒಮ್ಮೆ ಪ್ರವಾಸಿ ತಾಣಗಳನ್ನು ತೆರೆದರೆ ಅಲ್ಲಿಗೆ ಬರುವ ಪ್ರವಾಸಿಗರನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ಮಾರ್ಗ ಸೂಚಿ ಹೊರಡಿಸಲಾಗಿದೆ. ಪ್ರವಾಸಿಗರಿಗೆ ರಾತ್ರಿಯಿಡಿ ವಾಸ್ತವ್ಯ ಹೂಡಲು ಅನುಮತಿ ಇಲ್ಲ, ಹೀಗಾಗಿ ಪ್ರವಾಸಿಗರಿಗೆ ಹಂಪಿಗೆ ಭೇಟಿ ನೀಡಲು ಅವಕಾಶ ನೀಡುವಂತೆ ರಾಜ್ಯ ಸರ್ಕಾರದ ನಿರ್ದೇಶನಗಳಿಗಾಗಿ, ವಿಶೇಷವಾಗಿ ಪ್ರವಾಸೋದ್ಯಮ ಇಲಾಖೆ ಅನುಮತಿಗಾಗಿ ಕಾಯಲು ನಿರ್ಧರಿಸಿದ್ದೇವೆ. ಹಂಪಿ ಸೇರಿದಂತೆ ಹಲವು ಪ್ರವಾಸಿ ತಾಣಗಳನ್ನು ಮುಂದಿನ 1 ವಾರದ ವರೆಗೆ ತೆರೆಯಲು ಅವಕಾಶವಿಲ್ಲ.

ಕರ್ನಾಟಕದಲ್ಲಿ ಮಾತ್ರ ಸುಮಾರು 500 ಸ್ಮಾರಕಗಳು ಮತ್ತು  ಪ್ರವಾಸಿ ತಾಣಗಳಿವೆ ಎಂದು ಎಎಸ್‌ಐ ಗುರುತಿಸಿದೆ. ಸ್ಮಾರಕಗಳಲ್ಲಿ ಪ್ರವಾಸಿಗರ ಭೇಟಿ ಸುಗಮವಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾಡಳಿತವು ಶೀಘ್ರದಲ್ಲೇ ರಾಜ್ಯ ಎಎಸ್‌ಐ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದೆ.

ನಾವು ಪ್ರವಾಸಿಗರಿಗಾಗಿ ಸೈಟ್ ಗಳನ್ನು ತೆರೆದು ಹೋಟೆಲ್ ಮತ್ತು ಆಹಾರದ ಲಭ್ಯತೆ ಬಗ್ಗೆ ಮಾಹಿತಿ ನೀಡಲಾಗುವುದು. ಪ್ರವಾಸಿಗರು ಭೇಟಿ ನೀಡುವ ವೇಳೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com